Asianet Suvarna News Asianet Suvarna News

ಡಾ ರಾಜ್‌ಕುಮಾರ್ 'ಐದು' ಶ್ರೇಷ್ಠ ಸಿನಿಮಾಗಳು; ಇಂದು 'ಬಂಗಾರದ ಮನುಷ್ಯ'ನ ಹುಟ್ಟಿದ ಹಬ್ಬ!

ಈ ಚಿತ್ರವನ್ನು ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ್ದು, ಡಾ ರಾಜ್‌ಕುಮಾರ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರವನ್ನು ಪುಟ್ಟಣ್ಣನವರು ಚೆನ್ನಾಗಿಯೇ ಕಟ್ಟಿಕೊಟ್ಟಿದ್ದರೂ ಎಲ್ಲೋ ಒಂದು ಕಡೆ, ಚಿತ್ರಕಥೆ ಮತ್ತು ಸಂಭಾಷಣೆಯಲ್ಲಿ ಎಡವಿದ್ದಾರೆ..

Kannada actor Dr Rajkumar acted these 5 movies received high amount of appreciation srb
Author
First Published Apr 24, 2024, 2:29 PM IST | Last Updated Apr 24, 2024, 2:44 PM IST

ಡಾ ರಾಜ್‌ಕುಮಾರ್‌ ಅವರು ಹೆಚ್ಚಾಗಿ ಕೌಟುಂಬಿಕ ಸಿನಿಮಾಗಳನ್ನೇ ಮಾಡಿದ್ದಾರೆ. ಇಡೀ ಕುಟುಂಬ ಒಟ್ಟಾಗಿ ಕುಳಿತು ಮುಜುಗರವಿಲ್ಲದೇ ನೋಡುವಂಥ ಮೌಲ್ಯಗಳುಳ್ಳ ಸಿನಿಮಾಗಳನ್ನೇ ಡಾ ರಾಜ್ ಹೆಚ್ಚಾಗಿ ಮಾಡುವ ಮೂಲಕ ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಇಂಥ ನಟ ಡಾ ರಾಜ್‌ಕುಮಾರ್ ಅಭಿನಯದ ಚಿತ್ರಗಳಲ್ಲಿ ದಿ ಬೆಸ್ಟ್ ಯಾವುದು ಎಂದು ಹೇಳುವುದು ತುಂಬಾ ಕಷ್ಟದ ಕೆಲಸ. ಆದರೂ 'ಟಾಪ್ 5' ಸಿನಿಮಾಗಳನ್ನು ಪಟ್ಟಿ ಮಾಡಹೊರಟರೆ ಕಣ್ಣಮುಂದೆ ನಿಲ್ಲುವ ಚಿತ್ರಗಳು ಎಂದು ಇವುಗಳನ್ನು ಹೆಸರಿಸಬಹುದು. 

1- ಬಂಗಾರದ ಮನುಷ್ಯ: ಡಾ ರಾಜ್‌ಕುಮಾರ್ ಹಾಗು ಭಾರತಿ ಜೋಡಿಯ 'ಬಂಗಾರದ ಮನುಷ್ಯ' ಸಿನಿಮಾ 31 ಮಾರ್ಚ್ 1972ರಂದು ಬಿಡುಗಡೆಯಾಗಿತ್ತು. ಈ ಚಿತ್ರವು ರಿಲೀಸ್ ಆದ ದಿನದಿಂದಲೇ ಅದೆಷ್ಟು ಹೌಸ್‌ಫುಲ್‌ ಆಗಿ ಓಡುತ್ತಿತ್ತು ಎಂದರೆ ಬರೋಬ್ಬರಿ 1 ವರ್ಷಗಳಷ್ಟು ಕಾಲ ಹಲವು ಥಿಯೇಟರ್‌ಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಂಡಿತ್ತು. ಬಂಗಾರದ ಮನುಷ್ಯ ಸಿನಿಮಾ ನೋಡಿ, ಜೀವನದಲ್ಲಿ ತಾವೇನು ಕಳೆದುಕೊಂಡಿದ್ದೇವೆ ಎಂಬುದನ್ನು ಅರಿತು ಅದೆಷ್ಟೋ ಜನರು ಸಿಟಿ-ಪಟ್ಟಣಗಳಿಂದ ವಾಪಸ್ ಹಳ್ಳಿಗೆ ಹೋಗಿ ತಮ್ಮ ಜಮೀನಿನಲ್ಲಿ ಕೃಷಿ ಮಾಡತೊಡಗಿದ್ದರು. 

ನಾನು ಒಮ್ಮೆ ಒಂದ್ ಸ್ಟೆಪ್ ಮಾತ್ರ ತಗೊಳ್ಳೋದು; ಮೃಣಾಲ್ ಠಾಕೂರ್ ಮಾತು ಕೇಳಿ ಶಾಕ್ ಆಗ್ಬೇಡಿ!

ಸಿದ್ದಲಿಂಗಯ್ಯ ನಿರ್ದೇಶನದಲ್ಲಿ ಮೂಡಿಬಂದಿದ್ದ ಬಂಗಾರದ ಮನುಷ್ಯ ಚಿತ್ರವು ಅಂದು ದಾರಿ ತಪ್ಪಿದ ಬಹಳಷ್ಟು ಜನರನ್ನು ಮತ್ತೆ ವಾಪಸ್ ದಾರಿಗೆ ತಂದಿತ್ತು. ಅನ್ನ ಬೆಳೆಯುವ ರೈತರ ಪ್ರಾಮುಖ್ಯತೆಯನ್ನು ಅದೆಷ್ಟು ಚೆನ್ನಾಗಿ ಎಲ್ಲರಿಗೂ ಮನವರಿಕೆಯಾಗುವಂತೆ ಈ ಚಿತ್ರದಲ್ಲಿ ತೋರಿಸಲಾಗಿತ್ತು ಎಂದರೆ ರೈತರೇ ಈ ನಾಡಿನ ಬೆನ್ನೆಲುಬು ಎಂಬುದನ್ನು ಸರಿಯಾಗಿ ಅರ್ಥವಾಗುವಂತೆ ಚಿತ್ರದಲ್ಲಿ ಅಳವಡಿಸಲಾಗಿತ್ತು. ಬಂಗಾರದ ಮನುಷ್ಯ ಚಿತ್ರವು ಡಾ ರಾಜ್‌ಕುಮಾರ್ ಜೀವನದಲ್ಲಿಯೇ 'ದಿ ಬೆಸ್ಟ್ ' ಚಿತ್ರವಾಗಿ ಹೊರಹೊಮ್ಮಿ ಯಾವತ್ತೂ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ ಎನ್ನಬಹುದು.

ಸೂಪರ್ ಹಿಟ್ 'ಹನುಮಾನ್' ಸಿನಿಮಾ ಮಾಡಿದ್ದೇಕೆ; ಭಾರೀ ಸೀಕ್ರೆಟ್‌ ಬಿಚ್ಚಿಟ್ಟ ತೇಜಾ ಸಜ್ಜಾ!

2-ಸಾಕ್ಷಾತ್ಕಾರ: ಈ ಚಿತ್ರವನ್ನು ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ್ದು, ಡಾ ರಾಜ್‌ಕುಮಾರ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರವನ್ನು ಪುಟ್ಟಣ್ಣನವರು ಚೆನ್ನಾಗಿಯೇ ಕಟ್ಟಿಕೊಟ್ಟಿದ್ದರೂ ಎಲ್ಲೋ ಒಂದು ಕಡೆ, ಚಿತ್ರಕಥೆ ಮತ್ತು ಸಂಭಾಷಣೆಯಲ್ಲಿ ಎಡವಿದ್ದಾರೆ ಎನ್ನಲಾಗಿದೆ. ಹೀಗಾಗಿ ಈ ಚಿತ್ರವು ಅಂದು ಹಣಗಳಿಕೆ ದೃಷ್ಟಿಯಿಂದ ನೋಡಿದರೆ ಪ್ಲಾಫ್ ಚಿತ್ರವೇ ಆಗಿದ್ದರೂ ಸಿನಿಮಾದಲ್ಲಿ ಕೊಟ್ಟ ಸಂದೇಶದ ದೃಷ್ಟಿಯಿಂದ ಭಾರೀ ಜನಮೆಚ್ಚುಗೆ ಗಳಿಸಿತ್ತು. ಆದರೆ, ಅದ್ಯಾಕೋ ಏನೋ ಡಾ ರಾಜ್‌-ಪುಟ್ಟಣ್ಣ ಕಣಗಾಲ್ ಜೋಡಿಯ 'ಸಾಕ್ಷಾತ್ಕಾರ' ಕಮರ್ಷಿಯಲ್ ಹಿಟ್ ಆಗಲಿಲ್ಲ.  

'ಆಫ್ರಿಕಾದಲ್ಲಿ ಶೀಲಾ, ಭಾರತದಲ್ಲಿ ಸಾಲ' ಆಗಿದ್ದೇಕೆ, ವಿಕ್ಟೋರಿಯಾ ಫಾಲ್ಸ್‌ ಮೇಲೆ ಕ್ಯಾಮೆರಾ ಇಟ್ಟಿದ್ರಾ ದ್ವಾರಕೀಶ್!

3- ಕವಿರತ್ನ ಕಾಳಿದಾಸ: ಡಾ ರಾಜ್‌ಕುಮಾರ್ ನಟನೆಯ ಕವಿರತ್ನ ಕಾಳಿದಾಸ ಚಿತ್ರವು ಆ ವರ್ಷದ ಸೂಪರ್ ಹಿಟ್ ಚಿತ್ರವೆನ್ನಲಾಗಿದೆ. ಡಾ ರಾಜ್‌ ಜೋಡಿಯಾಗಿ ಬಹಭಾಷಾ ನಟಿ ಜಯಪ್ರದಾ ಈ ಚಿತ್ರದಲ್ಲಿ ನಟಿಸಿದ್ದರು. ರೇಣುಕಾ ಶರ್ಮ ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈ ಚಿತ್ರಕ್ಕಾಗಿ ಡಾ ರಾಜ್‌ಕುಮಾರ್ ಅವರು ಸಂಸ್ಕ್ರತವನ್ನು ಕಲಿತಿದ್ದರು. ಡಾ ರಾಜ್‌ಕುಮಾರ್ ನಟನೆಯ ಸಿನಿಮಾಗಳಲ್ಲಿಯೇ 'ಕವಿರತ್ನ ಕಾಳಿದಾಸ' ಚಿತ್ರವು ಅತ್ಯಂತ ಅದ್ದೂರಿ ಸಿನಿಮಾ ಎನ್ನಲಾಗಿದೆ. 

ಗೋಕಾಕ್ ಚಳುವಳಿಗೆ ಡಾ ರಾಜ್‌ಕುಮಾರ್ ಧುಮುಕುವಂತೆ ಮಾಡಿದ್ದು ಯಾರೆಂಬ ಗುಟ್ಟು ಬಿಚ್ಚಿಟ್ಟ ಇಂದ್ರಜಿತ್ ಲಂಕೇಶ್!

4- ದಾರಿ ತಪ್ಪಿದ ಮಗ: ಡಾ ರಾಜ್‌ಕುಮಾರ್ ನಟನೆಯ ಸಿನಿಮಾಗಳಲ್ಲಿ ಈ 'ದಾರಿ ತಪ್ಪಿದ ಮಗ' ಸಿನಮಾ ತುಂಬಾ ವಿಭಿನ್ನ ಸಿನಿಮಾ ಎನ್ನಬಹುದು. ಈ ಚಿತ್ರದಲ್ಲಿ ಡಾ ರಾಜ್‌ಕುಮಾರ್ ಅವರು ಡಬಲ್ ರೋಲ್‌ನಲ್ಲಿ ಕಾಣಿಸಿಕೊಂಡು ಭಾರೀ ಮೆಚ್ಚುಗೆ ಗಳಿಸಿದ್ದರು. ಡಾ ರಾಜ್ ದಾರಿ ತಪ್ಪಿ ಮಗ ಚಿತ್ರದಲ್ಲಿ ಪ್ರಕಾಶ್ ಹಾಗು ಪ್ರಸಾದ್ ರೋಲ್‌ನಲ್ಲಿ ನಟಿಸಿದ್ದರು. ಕಲ್ಪನಾ ಇದರಲ್ಲಿ ಪ್ರಸಾದ್ ಪಾತ್ರದ ಡಾ ರಾಜ್ ಪತ್ನಿ ಪರಿಮಳಾ ಆಗಿ ನಟಿಸಿದ್ದರು. ಆರತಿ ಪ್ರಕಾಶ್ ಜೋಡಿಯಾಗಿ ಮಿಂಚಿದ್ದರು. ಅಂದಿನ ಕಾಲದ ಸ್ಟಾರ್ ನಟಿಯರಾದ ಕಲ್ಪನಾ ಹಾಗೂ ಆರತಿ ಇಬ್ಬರೂ ಈ ಚಿತ್ರದಲ್ಲಿ ನಟಿಸಿದ್ದೂ ಕೂಡ ವಿಶೇಷ ಸಂಗತಿ ಎನಿಸಿತ್ತು. 

ದಾರಿ ತಪ್ಪಿದ ಮಗ ಸಿನಿಮಾ 175 ದಿನಗಳ ಹೌಸ್‌ಫುಲ್ ಪ್ರದರ್ಶನ ಕಂಡಿದ್ದು ಮಾತ್ರವಲ್ಲ, ಮಲಯಾಳಂ ಭಾಷೆಗೂ ಡಬ್ ಆಗಿತ್ತು. 2019ರಲ್ಲಿ ಈ ಸಿನಿಮಾ ರೀ-ರಿಲೀಸ್ ಆಗಿತ್ತು.

ವಿಷ್ಣು ಸೇನೆ ಬಗ್ಗೆ ಅಂದು ಹರಡಿತ್ತು ಕುಹಕದ ಮಾತು, ನಟ ವಿಷ್ಣುವರ್ಧನ್ ಏನಂದಿದ್ರು?

5- ಕಸ್ತೂರಿ ನಿವಾಸ: ಡಾ ರಾಜ್‌ ನಟನೆಯ 'ಕಸ್ತೂರಿ ನಿವಾಸ' ಚಿತ್ರವು ಅವರ ವೃತ್ತಿಜೀವನದ ಮತ್ತೊಂದು ಮಹೋನ್ನತ ಸಿನಿಮಾ. ಡಾ ರಾಜ್ ನಟನೆಯ ಈ ಚಿತ್ರದಲ್ಲಿ ಬಹಳಷ್ಟು ಅದರ್ಶಗಳನ್ನು ಕಟ್ಟಿಕೊಡಲಾಗಿತ್ತು. ದೊರೈ ಭಗವಾನ್ ನಿರ್ದೇಶನದ ಈ ಚಿತ್ರದಲ್ಲಿ ಡಾ ರಾಜ್‌ ಜೋಡಿಯಾಗಿ ಆರತಿ ಹಾಗು ಜಯಂತಿ ನಟಿಸಿದ್ದರು. ಪಾರಿವಾಳ ಈ ಚಿತ್ರದಲ್ಲಿ ಒಂದು ಪಾತ್ರದಂತೆ ಕಾಣಿಸಿಕೊಂಡು ಭಾರಿ ಜನಮನ್ನಣೆ ಪಡೆದಿತ್ತು. 

ಜಿಕೆ ವೆಂಕಟೇಶ್ ಸಂಗೀತ ನಿರ್ದೇಶನದ ಈ ಚಿತ್ರವು ಹೊಸ ರೂಪದಲ್ಲಿ ರೀ ರಿಲೀಸ್ ಆಗಿತ್ತು. ಭೂಮಿಕಾ ಥಿಯೇಟರ್‌ನಲ್ಲಿ ಮತ್ತೆ ರಿಲೀಸ್ ಆಗಿದ್ದ ಈ ಸಿನಿಮಾಕ್ಕೆ ಭರ್ಜರಿ ರೆಸ್ಪಾನ್ಸ್ ಬಂದಿತ್ತು. ರೀ-ರಿಲೀಸ್ ಆಗಿದ್ದ ವೇಳೆ ಕೆಜಿ ರಸ್ತೆ ಜಾಮ್ ಆಗಿ ಭಾರೀ ಸುದ್ದಿಯಾಗಿತ್ತು. ಒಟ್ಟಿನಲ್ಲಿ, ಡಾ ರಾಜ್‌ಕುಮಾರ್ ನಟನೆಯ ಸಿನಿಮಾಗಳಲ್ಲಿ ಕಸ್ತೂರಿ ನಿವಾಸ ಚಿತ್ರವು ಬಂಗಾರದ ಮನುಷ್ಯ ಚಿತ್ರದಂತೆ ಮೌಲ್ಯಾಧಾರಿತ ಚಿತ್ರವಾಗಿ ಗಮನಸೆಳೆದಿತ್ತು. 

Latest Videos
Follow Us:
Download App:
  • android
  • ios