ಶಿವರಾಜ್‌ಕುಮಾರ್ ಕಾಲ್‌ಶೀಟ್ ನೀಡಿರುವ ಸಿನಿಮಾಗಳ ಪೈಕಿ ‘ಮನಮೋಹಕ’ ಕೂಡ ಒಂದು. ಇದು ನಿರ್ದೇಶಕ ಸಿಂಪಲ್ ಸುನಿ ಹಾಗೂ ಶಿವರಾಜ್‌ಕುಮಾರ್ ಕಾಂಬಿನೇಷನ್ ಸಿನಿಮಾ.
ಈ ಹಿಂದೆ ಆಕರ್ಷಕ ಪೋಸ್ಟರ್ ಮೂಲಕವೇ ಸಾಕಷ್ಟುಕುತೂಹಲ ಮೂಡಿಸಿತ್ತು. ಹಾಗಂತ ಅದು ಸುದ್ದಿ ಯಾಗಿ ಇಲ್ಲಿಗೆ ಹಲವು ದಿನಗಳೇ ಕಳೆದು ಹೋದವು. ಸದ್ಯಕ್ಕೆ ಅದರ ಸದ್ದೇ ಇಲ್ಲ. ಹಾಗಾದ್ರೆ ಅದು ಶುರುವಾಗುವುದಾದ್ರು ಯಾವಾಗ,ಅಂದುಕೊಂಡಂತೆ ಶಿವಣ್ಣ ಈ ಸಿನಿಮಾ ಮಾಡುತ್ತಾರೋ ಇಲ್ಲವೋ ಎಂಬಿತ್ಯಾದಿ ಪ್ರಶ್ನೆಗಳಿಗೆ ಕೊನೆಗೆ ಉತ್ತರ ಸಿಕ್ಕಿದೆ. ಸಿನಿಮಾ ತಡವಾಗಿದಕ್ಕಿರುವ ಕಾರಣ ಏನು ಎನ್ನುವುದನ್ನು ನಿರ್ದೇಶಕ ಸಿಂಪಲ್ ಸುನಿ ಹೇಳಿಕೊಂಡಿದ್ದಾರೆ. ಅವರ ಪ್ರಕಾರ ಚಿತ್ರ ಶುರುವಾಗುವುದಕ್ಕೆ ಬೇಕಾಗಿರುವುದು ಬಿಗ್ ಬಜೆಟ್!
ನಿರ್ದೇಶಕ ಸಿಂಪಲ್ ಸುನಿ ಹೇಳುವ ಹಾಗೆ ಇದೊಂದು ಬಿಗ್‌ಬಜೆಟ್ ಸಿನಿಮಾ. ಕನಿಷ್ಟ. 20 ಕೋಟಿ ಬಂಡವಾಳವಾದ್ರೂ ಬೇಕಂತೆ. ಅಷ್ಟುಬಂಡವಾಳ ಇದ್ದರೆ ಕತೆಗೆ ತಕ್ಕಂತೆ ಸಿನಿಮಾವನ್ನು ರಿಚ್ ಆಗಿ ತೆರೆಗೆ ತರಲು ಸಾಧ್ಯವಿದೆಯಂತೆ. ಆ ನಿಟ್ಟಿನಲ್ಲೇ ಈಗವರು ನಿರ್ಮಾಪಕ ತಲಾಷ್ ನಡೆಸಿದ್ದಾರಂತೆ. ಸದ್ಯಕ್ಕೆ ಯಾರು ಕೂಡ ಮುಂದೆ ಬಂದಿಲ್ಲ. ಆ ಕಾರಣದಿಂದಲೇ ಚಿತ್ರದ ಶುರು ತಡವಾಗಿದೆ ಎನ್ನುವ ಮಾತುಗಳನ್ನು ಔಪಚಾರಿಕವಾಗಿ ಹೇಳಿಕೊಳ್ಳುತ್ತಾರೆ ನಿರ್ದೇಶಕ ಸಿಂಪಲ್ ಸುನಿ.
ಶೆಡ್ ಹೋಟೆಲ್‌ನಲ್ಲಿ ಬೆಣ್ಣೆದೋಸೆ ಸವಿದ ಶಿವಣ್ಣ
ಟೈಟಲ್‌ಗೆ ತಕ್ಕಂತೆ ಇದೊಂದು ರೊಮ್ಯಾಂಟಿಕ್ ಲವ್ ಸ್ಟೋರಿ ಸಿನಿಮಾ. ಮನ ಮೋಹಕ ಕಥಾ ಹಂದರ. ಮಾಸ್ ಎನ್ನುವುದಕ್ಕಿಂತ ಕ್ಲಾಸ್‌ಗೆ ಹೇಳಿ ಮಾಡಿಸಿದ ಚಿತ್ರ. ಅದನ್ನು ಅಷ್ಟೇ ಸುಂದರವಾಗಿ ತೆರೆ ಮೇಲೆ ತರಬೇಕಾದರೆ ಅಂದುಕೊಂಡಷ್ಟುಬಂಡವಾಳ ಬೇಕೇ ಬೇಕು. ಅಷ್ಟುಬಂಡವಾಳ ಹಾಕಿದರೆ, ಚಿತ್ರವನ್ನು ಟೈಟಲ್‌ಗೆ ತಕ್ಕಂತೆ ತೆರೆಗೆ ತರಲು ಸಾಧ್ಯವಿದೆ. ಹಾಗಾಗಿ ಕೊಂಚ ತಡವಾಗಿದೆ ಎನ್ನುವ ಮಾತುಗಳೊಂದಿಗೆ ತಮ್ಮ ಮತ್ತು ಶಿವಣ್ಣ ಕಾಂಬಿನೇಷನ್ ಮೂಲಕ ಬರಲಿರುವ ‘ಮನಮೋಹಕ’ ಚಿತ್ರದ ಬಗ್ಗೆ ಕುತೂಹಲ ಮೂಡಿಸುತ್ತಾರೆ ಸುನಿ.
