ಮಂಡ್ಯ(ಸೆ.07): ಮಳವಳ್ಳಿ ರಸ್ತೆಯಲ್ಲಿರುವ ಹಲಗೂರಿನ ಬಾಬು ಅವರ ಶೆಡ್‌ ಹೋಟೆಲ್‌ಗೆ ಚಿತ್ರ ಶಿವರಾಜ್‌ ಕುಮಾರ್‌, ಗುರುದತ್‌ ಭೇಟಿ ನೀಡಿ ಬೆಣ್ಣೆ ದೋಸೆ ಸವಿದಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಹಲಗೂರು ಬೆಣ್ಣೆ ದೋಸೆಗೆ ಬಹುಬೇಡಿಕೆ ಇದೆ. ರುಚಿಕರವಾದ ಪಲ್ಯದೊಂದಿರೆ ಬೆಣ್ಣೆ ದೋಸೆ ದೊರೆಯುವುದರಿಂದ ಈ ರಸ್ತೆಯಲ್ಲಿ ಓಡಾಡುವ ಗಣ್ಯರು ರಾಜಕೀಯ ನಾಯಕರು, ಚಿತ್ರನಟರು ಬಾಬು ಅವರ ಶೆಡ್‌ ಹೋಟೆಲ್‌ಗೆ ಭೇಟಿ ನೀಡಿ ತಿಂಡಿ ತಿನ್ನುವುದು ಸಾಮಾನ್ಯವಾಗಿದೆ.

ಅಭಿಮಾನಿಗಳ ಜೊತೆ ಮಾತನಾಡಿ ಕಣ್ಣೀರಿಟ್ಟ ಶಿವಣ್ಣ!

ಮೂರನೇ ಬಾರಿ ಶೆಡ್‌ ಹೋಟೆಲ್‌ಗೆ ಶಿವರಾಜ್‌ಕುಮಾರ್:

ಅದೇ ರೀತಿ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಬಾಬು ನಡೆಸುತ್ತಿರುವ ಶೆಡ್‌ ಹೋಟೆಲ್‌ನಲ್ಲಿ ಸಿಗುವ ತಿಂಡಿ ತಿನ್ನಲು ಮೂರನೇ ಬಾರಿ ಭೇಟಿ ನೀಡಿರುವುದು ವಿಶೇಷವಾಗಿದೆ. ಇದು ಹೋಟೆಲ್‌ ಮಾಲೀಕರಿಗೆ ಮತ್ತು ಅಭಿಮಾನಿಗಳಿಗೆ ಖುಷಿ ತಂದಿದೆ.

ಆಪರೇಷನ್‌ ಆದ ಕೈಯಲ್ಲೆ ಕೇಕ್‌ ಕಟ್‌ ಮಾಡಿದ '58'ರ ಶಿವಣ್ಣ!

ತಿಂಡಿ ತಿಂದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಚಿತ್ರನಟ ಶಿವರಾಜ್‌ ಕುಮಾರ್‌, ಮನೆ ದೇವರಾದ ಮುತ್ತತ್ತಿರಾಯನ ಸನ್ನಿಧಿಗೆ ಬರುವುದು ನಮ್ಮ ಪದ್ಧತಿ. ಮುತ್ತತ್ತಿ ಬಂದ ವೇಳೆ ಹೋಟೇಲ್‌ಗೆ ಭೇಟಿ ನೀಡುತ್ತೇನೆ. ಇಲ್ಲಿ ದೋಸೆ ತಿಂದು ಹೋಗುತ್ತೇನೆ. ಇಂದು ಮಲೈ ಮಹಾದೇಶ್ವರ ಸ್ವಾಮಿ ಬೆಟ್ಟಕ್ಕೆ ಹೋಗುತ್ತಿದ್ದೆ. ಹೋಟೆಲ್‌ ಮಾಲೀಕ ಬಾಬು ರುಚಿಕರವಾದ ತಿಂಡಿ ನೀಡುತ್ತಾರೆ. ಬೆಣ್ಣೆದೋಸೆ ತಿಂದು ಹೋಗುತ್ತಿದ್ದೇನೆ ಎಂದು ತಿಳಿಸಿದ್ದಾರೆ.

40 ವರ್ಷ ಹಳೆಯ ಹೋಟೆಲ್‌:

ಹೋಟೆಲ್ ಮಾಲೀಕ ಬಾಬು ಮಾತನಾಡಿ, ನಾವು ಸುಮಾರು 40 ವರ್ಷಗಳಿಂದ ಹೋಟೆಲ್‌ ನಡೆಸುತ್ತಿದ್ದೇವೆ. ತಂದೆ ಅವರ ಕಾಲದಿಂದಲೂ ಬಿಸಿ ಬಿಸಿ ಬೆಣ್ಣೆ ದೋಸೆ ಮಾಡಲಾಗುತ್ತಿದೆ. ಚಿತ್ರನಟರು ಮತ್ತು ರಾಜಕೀಯ ನಾಯಕರು ಬಂದು ತಿಂಡಿ ತಿಂದು ಹೋಗುತ್ತಾರೆ. ವರನಟ ಡಾ.ರಾಜಣ್ಣನವರ ಕುಟುಂಬದವರು ಮುತ್ತತ್ತಿಗೆ ಬರುವಾಗ ಇಲ್ಲಿಗೆ ಬಂದು ಭೇಟಿ ನೀಡುತ್ತಾರೆ. ಅವರ ಸಂಬಂಧಿಕರಾದ ಕಾಂತರಾಜ್ ಅವರು ಶಿವರಾಜ್‌ ಕುಮಾರ್‌ ಸರ್‌ ಬರುವ ಸುದ್ದಿ ತಿಳಿಸುತ್ತಾರೆ. ಸ್ಟಾರ್‌ ನಟರೊಬ್ಬರು ನಮ್ಮ ಹೋಟೆಲ್‌ಗೆ ಬಂದು ತಿಂಡಿ ತಿನ್ನುವುದು ನಮಗೆ ತುಂಬ ಖುಷಿ ಕೊಡುತ್ತದೆ ಎಂದು ಹೇಳಿದರು.