ಸ್ಯಾಂಡಲ್‌ವುಡ್ ಹ್ಯಾಟ್ರಿಕ್ ಮ್ಯಾನ್ ಶಿವರಾಜ್‌ಕುಮಾರ್ ತನ್ನ 58 ನೇ ಹುಟ್ಟುಹಬ್ಬವನ್ನು ಲಂಡನ್‌ನಲ್ಲಿ ಸಿಂಪಲ್ ಆಗಿ ಆಚರಣೆ ಮಾಡಿಕೊಂಡಿದ್ದಾರೆ.

ಭುಜದ ನೋವಿನಿಂದ ಬಳಲುತ್ತಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಲಂಡನ್‌ಗೆ ತೆರಳಿದ್ದ ಶಿವಣ್ಣಗೆ ಸುಸೂತ್ರವಾಗಿ ಶಸ್ತ್ರ ಚಿಕಿತ್ಸೆ ನಡೆದಿದೆ. ವೈದ್ಯರ ಸೂಚನೆಯಂತೆ 20 ದಿನಗಳ ಕಾಲ ವಿಶ್ರಾಂತಿಯಲ್ಲಿರಬೇಕಿದ್ದು, ಶಿವಣ್ಣ ಅಲ್ಲಿಯೇ ರೆಸ್ಟ್‌ ಪಡೆದು ನಂತರ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.

ಆಪರೇಷನ್‌ ಆದ ಕೈಯಲ್ಲೆ ಕೇಕ್‌ ಕಟ್‌ ಮಾಡಿದ '58'ರ ಶಿವಣ್ಣ!

ಇನ್ನು ಅಭಿಮಾನಿಗಳೊಂದಿಗೆ ಮಾತನಾಡುವುದಕ್ಕೆ ಕಂಠೀರವ ಸ್ಟುಡಿಯೋದಲ್ಲಿ ಲೈವ್ ವ್ಯವಸ್ಥೆ ಮಾಡಲಾಗಿತ್ತು. ಲಂಡನ್ ನಿಂದ ನೇರವಾಗಿ ಮಾತನಾಡಿದ ಶಿವಣ್ಣ ಸೇರಿದ ಜನ ಸಾಗರ ಹಾಗೂ ಅವರ ಪ್ರೀತಿಯ ಮಾತು ಕೇಳಿ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಇದನ್ನು ಕಂಡ ಅಭಿಮಾನಿಯೊಬ್ಬ 'ಅಣ್ಣ ನೀವು ಅತ್ತರೆ ನಮಗೂ ನೋವಾಗುತ್ತದೆ. ದಯವಿಟ್ಟು ಅಳಬೇಡಿ ' ಎಂದು ಸಮಾಧಾನ ಮಾಡಿದ್ದರು. ಲಂಡನ್‌ನಿಂದ ಮರಳಿದ ತಕ್ಷಣ ಅಭಿಮಾನಿಗಳನ್ನು ಭೇಟಿ ಮಾಡುವುದಾಗಿ ಶಿವಣ್ಣ ಮಾತು ಕೊಟ್ಟಿದ್ದಾರೆ.