ಪ್ಲಾಸ್ಟಿಕ್‌ ರಾಣಿ ಎಂದೇ ಫೇಮಸ್‌ ಆಗಿರೋ ನಟಿ ಶೆರ್ಲಿನ್​ ಚೋಪ್ರಾ ಯುವಕನೊಬ್ಬನನ್ನು ಅಶ್ಲೀಲ ರೀತಿಯಲ್ಲಿ ಕಿಸ್​ ಮಾಡಿ ಆತನನ್ನು ಸುಸ್ತು ಮಾಡಿದ್ದಾಳೆ. ಅದರ ವಿಡಿಯೋ ವೈರಲ್​ ಆಗಿದೆ.

ಬಾಲಿವುಡ್​ ನಟಿ ಶೆರ್ಲಿನ್​ ಚೋಪ್ರಾ, ಪ್ಲಾಸ್ಟಿಕ್‌ ರಾಣಿ ಎಂದೇ ಫೇಮಸ್‌. ದೇಹದ ಬಹುತೇಕ ಭಾಗಗಳಿಗೆ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡು, ಅದನ್ನು ಪ್ರದರ್ಶಿಸುತ್ತಲೇ ಪಾಪರಾಜಿಗಳ ಕಣ್ಣಿಗೆ ಬೀಳುತ್ತಾರೆ. ಈ ಮೂಲಕ ನಟಿ ಪ್ರಚಾರ ಗಿಟ್ಟಿಸಿಕೊಂಡರೆ, ಆಕೆಯ ಫೋಟೋ ತೆಗೆಯುವ ಪಾಪರಾಜಿಗಳಿಗೆ ದುಡ್ಡಿನ ಸುರಿಮಳೆಯೇ. ಬಹುತೇಕ ಬಾಲಿವುಡ್​ ನಟಿಯಂತೆ ಈಕೆ ಕೂಡ ತೆಳ್ಳಗೆ ಇರಲು ಸಾಕಷ್ಟು ಡಯಟ್​ ಪಾಲನೆ, ಯೋಗ, ಜಿಮ್​, ವ್ಯಾಯಾಮಗಳ ಮೊರೆ ಹೋಗಿದ್ದರೂ, ಪ್ಲಾಸ್ಟಿಕ್​ ಸರ್ಜರಿಯಿಂದಾಗಿ ಮಾತ್ರ ಈಕೆಯ ಅಂಗಾಂಗಗಳು ವಿಪರೀತ ಎನ್ನುವಷ್ಟರ ಮಟ್ಟಿಗೆ ಕಾಣಿಸುವುದನ್ನು ನೋಡಬಹುದು. ಸದಾ ಅರೆಬರೆ ದೇಹದ ಪ್ರದರ್ಶನ ಮಾಡುವುದರ ಜೊತೆಗೆ ಶಾಕಿಂಗ್‌ ಹೇಳಿಕೆ ಕೊಡುವ ಮೂಲಕವೂ ಈಕೆ ಸುದ್ದಿಯಲ್ಲಿ ಇರುತ್ತಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದೀಗ ನಟಿ ಸುಂದರ ಯುವಕನಿಗೆ ಕಿಸ್​ ಕೊಟ್ಟು ಸದ್ದು ಮಾಡಿದ್ದಾಳೆ. ಮಾಮೂಲಿನಂತೆ ಅಶ್ಲೀಲ ಡ್ರೆಸ್​ನಲ್ಲಿ ಕಾಣಿಸಿಕೊಂಡಿರುವ ಈಕೆ, ಯುವಕನಿಗೆ ಕಿಸ್​ ಕೊಟ್ಟಿದ್ದಾಳೆ. ಈಕೆಯನ್ನು ತಬ್ಬಿಕೊಂಡಿರೋ ಯುವಕನ ಸ್ಥಿತಿ ಮಾತ್ರ ಅಲ್ಲೋಲ ಕಲ್ಲೋಲ ಎನ್ನುವಂತಿದೆ. ಈಕೆಯ ಅಸಭ್ಯ ವರ್ತನೆಯಿದ್ದರೂ ಯುವಕ ತಾಳ್ಮೆಯಿಂದ ಇದ್ದ ಕಾರಣ, ಯುವಕನ ತಾಳ್ಮೆಗೆ ಹಲವರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ತಮಗೂ ಇಂಥ ತಾಳ್ಮೆಯ ಯುವಕ ಬೇಕು ಎಂದು ಕೆಲವು ಯುವತಿಯರು ಕಮೆಂಟ್​ ಕೂಡ ಹಾಕಿದ್ದಾರೆ.

ಅಷ್ಟಕ್ಕೂ, ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾ ಅವರ ನೀಲಿ ಚಿತ್ರದ ವಿವಾದದ ಸಂದರ್ಭದಲ್ಲಿ ಶೆರ್ಲಿನ್​ ಹೆಸರೂ ಕೇಳಿಬಂದಿತ್ತು. ಆ ಸಂದರ್ಭದಲ್ಲಿ ನಟಿ, ಮಾಧ್ಯಮವೊಂದಕ್ಕೆ ಸಂದರ್ಶನ ನೀಡುತ್ತಾ, ‘ಈ ಮೊದಲು ಹಣಕ್ಕಾಗಿ ನಾನು ಹಲವು ಜನರ ಜೊತೆ ಮಲಗಿದ್ದೆ. ಈಗ ನಿಮ್ಮನ್ನು ನಿರಾಸೆಗೊಳಿಸಿದ್ದಕ್ಕೆ ಕ್ಷಮೆ ಇರಲಿ. ಆದರೆ ಈಗ ಹಣಕ್ಕಾಗಿ ನಾನು ಅಂಥ ಕೆಲಸ ಮಾಡುತ್ತಿಲ್ಲ’ ಎಂದು ಹೇಳಿದ್ದರು. ಈ ಮೂಲಕ ಈಗ ನೀಲಿ ಚಿತ್ರದಲ್ಲಿ ತಾವು ಕಾಣಿಸಿಕೊಳ್ಳುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಕೆಲ ತಿಂಗಳ ಹಿಂದೆ, ಶೆರ್ಲಿನ್​, ದೇಹ ಪ್ರದರ್ಶನ ಮಾಡುವ ಬಟ್ಟೆ ತೊಟ್ಟು, ಮೂರ್ತಿಯಂತೆ ಕುಳಿತಿದ್ದೇನೆ. ನನ್ನ ಕೈಕಾಲು ಒತ್ತಲು ಯಾರಾದರೂ ಸಿಗುತ್ತಾರೋ ಎಂದು ನೋಡುತ್ತಿದ್ದೇನೆ ಎಂದು ಬಿಟ್ಟಿ ಆಫರ್​ ನೀಡಿದ್ದರು. ಇದೇ ವೇಳೆ ಹಾಕಿಕೊಂಡಿರುವ ಬಟ್ಟೆಯನ್ನು ಕಳಚುವಂತೆ ಮಾಡಿ, ನನ್ನದು ಸೆನ್ಸೆಟಿವ್​ ಸ್ಕಿನ್​ ನೋಡಿ, ಅದಕ್ಕೆ ಅಲರ್ಜಿ ಆಗುತ್ತಿದೆ ಎಂದು ಹೇಳಿದ್ದರು.

ಅಷ್ಟಕ್ಕೂ ಶೆರ್ಲಿನ್​, ಕೆಲ ತಿಂಗಳುಗಳಿಂದ, ಶೆರ್ಲಿನ್​ ಸದ್ಯ ಮದುವೆ ವಿಷಯದಲ್ಲಿ ಸಕತ್​ ಸದ್ದು ಮಾಡಿದ್ದರು. ತಮ್ಮ ಬಾಯ್​ಫ್ರೆಂಡ್​ ಅಸ್ಗರ್​ ಅಲಿ ಜೊತೆ ಕಾಣಿಸಿಕೊಂಡಿದದ್ದರು. ಅವರಿಗೆ ಮದುವೆಯ ವಿಷಯವನ್ನು ಕೇಳಲಾಗಿತ್ತು. ನೀವು ಇವರನ್ನು ಮದ್ವೆಯಾಗುತ್ತಿದ್ದೀರಾ ಎಂದು ಪ್ರಶ್ನಿಸಲಾಯಿತು. ಅದಕ್ಕೆ ಅವರು ಇವರು ನನ್ನ ಬಾಯ್​ಫ್ರೆಂಡ್​ಗಿಂತಲೂ ಹೆಚ್ಚಿನವರು ಎಂದರು. ಆಗ ಮದುವೆಯ ವಿಷಯದ ಬಗ್ಗೆ ಏನೂ ಮಾತನಾಡಲಿಲ್ಲ. ಕೊನೆಗೆ ಮತ್ತೊಮ್ಮೆ ನಿಮಗೆ ಮದುವೆಯಲ್ಲಿ ನಂಬಿಕೆ ಇದ್ಯಾ ಕೇಳಿದಾಗ ಹೌದು ಎಂದರು. ಇವರನ್ನೇ ಮದುವೆಯಾಗೋದು ಹೌದಾ ಕೇಳಿದಾಗ ನಟಿ, ನನಗೆ ನಾಚಿಕೆಯಾಗತ್ತಪ್ಪಾ ಎಂದು ಅತ್ತ ಕಡೆ ಮುಖ ಮಾಡಿಕೊಂಡಿದ್ದರು. ಇದಕ್ಕೆ ಇನ್ನಿಲ್ಲದಂತೆ ಟೀಕೆಗಳ ಸುರಿಮಳೆಯಾಗಿತ್ತು. ನಿಮ್ಮ ಈ ನಾಚಿಕೆ ಎನ್ನುವ ಮಾತು ಕೇಳಿ ನಾಚಿಕೆ ಎನ್ನುವ ಶಬ್ದಕ್ಕೇ ನಾಚಿಕೆ ಆಗ್ತಿದೆ ಎಂದು ಕಮೆಂಟಿಗರು ಹೇಳಿದ್ದರು.

View post on Instagram