ಪ್ಲಾಸ್ಟಿಕ್ ಸರ್ಜರಿಗಳಿಂದ ಖ್ಯಾತಿ ಪೆರ್ಪಿಸಿಕೊಂಡಿರುವ ಶೆರ್ಲಿನ್ ಚೋಪ್ರಾ, ತುಟಿ ಶಸ್ತ್ರಚಿಕಿತ್ಸೆಯ ವೈಫಲ್ಯದಿಂದ ಉಂಟಾದ ಸಂಕಷ್ಟವನ್ನು ಬಹಿರಂಗಪಡಿಸಿದ್ದಾರೆ. ಏಲಿಯನ್‌ನಂತೆ ಕಾಣುವಂತೆ ಮಾಡಿದ ಈ ಘಟನೆಯಿಂದ ತೀವ್ರ ಭಯಭೀತರಾಗಿದ್ದಾಗಿ ಹೇಳಿಕೊಂಡಿದ್ದಾರೆ. ವಿವಾದಾತ್ಮಕ ಹೇಳಿಕೆಗಳಿಂದಲೂ ಸುದ್ದಿಯಲ್ಲಿರುವ ನಟಿ, ಹಿಂದೆ ಹಣಕ್ಕಾಗಿ ದೈಹಿಕ ಸಂಬಂಧ ಹೊಂದಿದ್ದಾಗಿ ಒಪ್ಪಿಕೊಂಡಿದ್ದರು. ಇತ್ತೀಚೆಗೆ ಬಾಯ್‌ಫ್ರೆಂಡ್‌ನೊಂದಿಗಿನ ಸಂಬಂಧದ ಬಗ್ಗೆಯೂ ಗೊಂದಲದ ಹೇಳಿಕೆ ನೀಡಿದ್ದರು.

ಬಾಲಿವುಡ್​ ನಟಿ ಶೆರ್ಲಿನ್​ ಚೋಪ್ರಾ, ಪ್ಲಾಸ್ಟಿಕ್‌ ರಾಣಿ ಎಂದೇ ಫೇಮಸ್‌. ದೇಹದ ಬಹುತೇಕ ಭಾಗಗಳಿಗೆ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡು, ಅದನ್ನು ಪ್ರದರ್ಶಿಸುತ್ತಲೇ ಪಾಪರಾಜಿಗಳ ಕಣ್ಣಿಗೆ ಬೀಳುತ್ತಾರೆ. ಈ ಮೂಲಕ ನಟಿ ಪ್ರಚಾರ ಗಿಟ್ಟಿಸಿಕೊಂಡರೆ, ಆಕೆಯ ಫೋಟೋ ತೆಗೆಯುವ ಪಾಪರಾಜಿಗಳಿಗೆ ದುಡ್ಡಿನ ಸುರಿಮಳೆಯೇ. ಬಹುತೇಕ ಬಾಲಿವುಡ್​ ನಟಿಯಂತೆ ಈಕೆ ಕೂಡ ತೆಳ್ಳಗೆ ಇರಲು ಸಾಕಷ್ಟು ಡಯಟ್​ ಪಾಲನೆ, ಯೋಗ, ಜಿಮ್​, ವ್ಯಾಯಾಮಗಳ ಮೊರೆ ಹೋಗಿದ್ದರೂ, ಪ್ಲಾಸ್ಟಿಕ್​ ಸರ್ಜರಿಯಿಂದಾಗಿ ಮಾತ್ರ ಈಕೆಯ ಅಂಗಾಂಗಗಳು ವಿಪರೀತ ಎನ್ನುವಷ್ಟರ ಮಟ್ಟಿಗೆ ಕಾಣಿಸುವುದನ್ನು ನೋಡಬಹುದು. ಸದಾ ಅರೆಬರೆ ದೇಹದ ಪ್ರದರ್ಶನ ಮಾಡುವುದರ ಜೊತೆಗೆ ಶಾಕಿಂಗ್‌ ಹೇಳಿಕೆ ಕೊಡುವ ಮೂಲಕವೂ ಈಕೆ ಸುದ್ದಿಯಲ್ಲಿ ಇರುತ್ತಾರೆ.

ಇದೀಗ, ತಮ್ಮ ಜೀವನದ ಒಂದು ಶಾಕಿಂಗ್​ ಘಟನೆಯನ್ನು ನಟಿ ವಿವರಿಸಿದ್ದಾರೆ. ಅದು ತುಟಿಗೆ ಮಾಡಿಕೊಂಡ ಪ್ಲಾಸ್ಟಿಕ್​ ಸರ್ಜರಿಯ ಬಗ್ಗೆ. ಕೆಲ ವರ್ಷಗಳ ಹಿಂದೆ ನಟಿ ಏಲಿಯನ್​ ರೀತಿ ಕಾಣುವ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದವು. ಇದು ಎಐ ಯಿಂದ ಮಾಡಿದ್ದು, ಎಡಿಟೆಡ್​ ಎಂದೇ ಅಂದುಕೊಳ್ಳಲಾಗಿತ್ತು. ಅದರಲ್ಲಿ ಶೆರ್ಲಿನ್​ ತುಟಿ ಭಯಾನಕ ರೀತಿಯಲ್ಲಿ ಕಾಣಿಸುತ್ತಿತ್ತು. ಇದು ಒರಿಜಿನಲ್​ ಅಲ್ಲ ಎಂದು ನಕ್ಕು ಸುಮ್ಮನಾದವರೇ ಬಹುತೇಕ ಮಂದಿ. ಆದರೆ ಇದೀಗ ಅದರ ಗುಟ್ಟನ್ನು ನಟಿ ರಿವೀಲ್​ ಮಾಡಿದ್ದಾರೆ. ಅದು ಎಡಿಟೆಡ್​ ಅಲ್ಲ, ಬದಲಿಗೆ ತುಟಿಗೆ ಸರ್ಜರಿ ಮಾಡಿಸಿದ್ದು ಮಿಸ್ಟೆಕ್​ ಆಗಿ, ತುಟಿ ಊದಿಕೊಂಡಿತ್ತು. ನಾನು ಏಲಿಯನ್​ ರೀತಿ ಕಾಣಿಸುತ್ತಿದ್ದೆ. ಕನ್ನಡಿಯಲ್ಲಿ ಮುಖ ನೋಡಿಕೊಂಡಾಗಲೆಲ್ಲಾ ಭಯ ಆಗ್ತಿತ್ತು. ಅದನ್ನು ಸರಿಪಡಿಸಲು ಸಿಕ್ಕಾಪಟ್ಟೆ ಕಷ್ಟ ಪಡಬೇಕಾಯಿತು. ಈ ಕೆಟ್ಟ ತುಟಿಯಿಂದಾಗಿ ಪಡಬಾರದ ಕಷ್ಟ ಪಟ್ಟೆ ಎಂದಿದ್ದಾರೆ.

ಬಟ್ಟೆ ಕಳಚಿ ಬಿಟ್ಟಿ ಆಫರ್​ ಕೊಟ್ಟ ಶೆರ್ಲಿನ್​ ಹೊಸ ವೇಷಕ್ಕೆ ಶಾಕ್​! ಮತಾಂತರವಾದ್ರಾ ಕೇಳ್ತಿದ್ದಾರೆ ಫ್ಯಾನ್ಸ್​!


ಶೆರ್ಲಿನ್​ ಸದ್ಯ ಮದುವೆ ವಿಷಯದಲ್ಲಿ ಸಕತ್​ ಸದ್ದು ಮಾಡಿದ್ದರು. ತಮ್ಮ ಬಾಯ್​ಫ್ರೆಂಡ್​ ಅಸ್ಗರ್​ ಅಲಿ ಜೊತೆ ಕಾಣಿಸಿಕೊಂಡಿದದ್ದರು. ಅವರಿಗೆ ಮದುವೆಯ ವಿಷಯವನ್ನು ಕೇಳಲಾಗಿತ್ತು. ನೀವು ಇವರನ್ನು ಮದ್ವೆಯಾಗುತ್ತಿದ್ದೀರಾ ಎಂದು ಪ್ರಶ್ನಿಸಲಾಯಿತು. ಅದಕ್ಕೆ ಅವರು ಇವರು ನನ್ನ ಬಾಯ್​ಫ್ರೆಂಡ್​ಗಿಂತಲೂ ಹೆಚ್ಚಿನವರು ಎಂದರು. ಆಗ ಮದುವೆಯ ವಿಷಯದ ಬಗ್ಗೆ ಏನೂ ಮಾತನಾಡಲಿಲ್ಲ. ಕೊನೆಗೆ ಮತ್ತೊಮ್ಮೆ ನಿಮಗೆ ಮದುವೆಯಲ್ಲಿ ನಂಬಿಕೆ ಇದ್ಯಾ ಕೇಳಿದಾಗ ಹೌದು ಎಂದರು. ಇವರನ್ನೇ ಮದುವೆಯಾಗೋದು ಹೌದಾ ಕೇಳಿದಾಗ ನಟಿ, ನನಗೆ ನಾಚಿಕೆಯಾಗತ್ತಪ್ಪಾ ಎಂದು ಅತ್ತ ಕಡೆ ಮುಖ ಮಾಡಿಕೊಂಡರು! ಇದಕ್ಕೆ ಇನ್ನಿಲ್ಲದಂತೆ ಟೀಕೆಗಳ ಸುರಿಮಳೆಯಾಗಿತ್ತು. ನಿಮ್ಮ ಈ ನಾಚಿಕೆ ಎನ್ನುವ ಮಾತು ಕೇಳಿ ನಾಚಿಕೆ ಎನ್ನುವ ಶಬ್ದಕ್ಕೇ ನಾಚಿಕೆ ಆಗ್ತಿದೆ ಎಂದು ಕಮೆಂಟಿಗರು ಹೇಳಿದ್ದರು.

ಇದಕ್ಕೆ ಕಾರಣವೂ ಇದೆ. ಅದೇನೆಂದರೆ, ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾ ಅವರ ನೀಲಿ ಚಿತ್ರದ ವಿವಾದದ ಸಂದರ್ಭದಲ್ಲಿ ಶೆರ್ಲಿನ್​ ಹೆಸರೂ ಕೇಳಿಬಂದಿತ್ತು. ಆ ಸಂದರ್ಭದಲ್ಲಿ ನಟಿ, ಮಾಧ್ಯಮವೊಂದಕ್ಕೆ ಸಂದರ್ಶನ ನೀಡುತ್ತಾ, ‘ಈ ಮೊದಲು ಹಣಕ್ಕಾಗಿ ನಾನು ಹಲವು ಜನರ ಜೊತೆ ಮಲಗಿದ್ದೆ. ಈಗ ನಿಮ್ಮನ್ನು ನಿರಾಸೆಗೊಳಿಸಿದ್ದಕ್ಕೆ ಕ್ಷಮೆ ಇರಲಿ. ಆದರೆ ಈಗ ಹಣಕ್ಕಾಗಿ ನಾನು ಅಂಥ ಕೆಲಸ ಮಾಡುತ್ತಿಲ್ಲ’ ಎಂದು ಹೇಳಿದ್ದರು. ಈ ಮೂಲಕ ಈಗ ನೀಲಿ ಚಿತ್ರದಲ್ಲಿ ತಾವು ಕಾಣಿಸಿಕೊಳ್ಳುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಕೆಲ ತಿಂಗಳ ಹಿಂದೆ, ಶೆರ್ಲಿನ್​, ದೇಹ ಪ್ರದರ್ಶನ ಮಾಡುವ ಬಟ್ಟೆ ತೊಟ್ಟು, ಮೂರ್ತಿಯಂತೆ ಕುಳಿತಿದ್ದೇನೆ. ನನ್ನ ಕೈಕಾಲು ಒತ್ತಲು ಯಾರಾದರೂ ಸಿಗುತ್ತಾರೋ ಎಂದು ನೋಡುತ್ತಿದ್ದೇನೆ ಎಂದು ಬಿಟ್ಟಿ ಆಫರ್​ ನೀಡಿದ್ದರು. ಇದೇ ವೇಳೆ ಹಾಕಿಕೊಂಡಿರುವ ಬಟ್ಟೆಯನ್ನು ಕಳಚುವಂತೆ ಮಾಡಿ, ನನ್ನದು ಸೆನ್ಸೆಟಿವ್​ ಸ್ಕಿನ್​ ನೋಡಿ, ಅದಕ್ಕೆ ಅಲರ್ಜಿ ಆಗುತ್ತಿದೆ ಎಂದು ಹೇಳಿದ್ದರು.

ಶೆರ್ಲಿನ್​ ಚೋಪ್ರಾ ಮಗುವನ್ನು ಎತ್ತಿಕೊಂಡ್ರೆ ಪುಟಾಣಿ ಹೀಗೆ ಮಾಡೋದಾ? ವಿಡಿಯೋ ನೋಡಿ ಸುಸ್ತಾದ ನೆಟ್ಟಿಗರು!

View post on Instagram