ಮಗನ ಜೊತೆ ನಾನೂ ಆ ನಟಿಯೊಂದಿಗೆ ಆಡ್ತೇನೆ ಎನ್ನುವ ಮೂಲಕ ಶಾರುಖ್ ಖಾನ್ ತಮ್ಮ ಕೀಳು ಮನಸ್ಥಿತಿಯನ್ನು ಪ್ರಕಟಿಸಿದ್ದಾರೆ. ಅದರ ವಿಡಿಯೋ ಇದೀಗ ವೈರಲ್ ಆಗಿದ್ದು, ಸಾಕಷ್ಟು ಟ್ರೋಲ್ ಆಗುತ್ತಿದೆ.
ಬಾಲಿವುಡ್ ಬಾದ್ಶಾ ಎಂದೇ ಕರೆಸಿಕೊಳ್ತಿರೋ ಶಾರುಖ್ ಖಾನ್, ಆಪರೇಷನ್ ಸಿಂದೂರದ ವಿಷ್ಯದಲ್ಲಿ ಮೌನ ತಾಳಿ ತಮ್ಮ ಅಸಲಿ ಬಣ್ಣವನ್ನು ತೋರಿಸಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಪಾಕಿಸ್ತಾನದಲ್ಲಿನ ತಮ್ಮ ಅಭಿಮಾನಿಗಳು ಎಲ್ಲಿ ನೊಂದುಕೊಂಡು ಬಿಡುತ್ತಾರೆಯೋ ಎಂದುಕೊಂಡಿರುವ ಕಾರಣ, ಆ ದೇಶದ ವಿರುದ್ಧ ಒಂದೇ ಮಾತು ಮಾತನಾಡುವುದು ದೂರದ ಮಾತು, ಭಾರತದ ಪರವಾಗಿ ತಾನು ಇದ್ದೇನೆ ಎನ್ನುವ ಒಂದೇ ಒಂದು ಮಾತೂ ಹೊರಕ್ಕೆ ಬಾರದೇ 'ದೇಶಪ್ರೇಮ' ಮೆರೆದಿರುವ ಬಾಲಿವುಡ್ನ ಖಾನ್ ತ್ರಯರಲ್ಲಿ ಒಬ್ಬರಾಗಿರುವ ಶಾರುಖ್ ಖಾನ್ ಅವರ ಮನಸ್ಥಿತಿ ಎಷ್ಟು ಕೀಳುಮಟ್ಟದ್ದು ಎನ್ನುವಂಥ ಹಳೆಯ ವಿಡಿಯೋ ಇದೀಗ ಪುನಃ ವೈರಲ್ ಆಗುತ್ತಿದೆ. ಇದು ಕರಣ್ ಜೋಹರ್ ಅವರ ಕಾಫಿ ವಿತ್ ಕರಣ್ (Koffee With Karan) ಷೋನಲ್ಲಿ ನಡೆದಿರುವ ಮಾತುಕತೆ.
ಅಷ್ಟಕ್ಕೂ ‘ಕಾಫಿ ವಿತ್ ಕರಣ್’ ಕಾರ್ಯಕ್ರಮದ ಜೊತೆ ಒಂದಷ್ಟು ವಿವಾದಗಳು ಕೂಡ ಅಂಟಿಕೊಂಡಿವೆ. ಇದರಲ್ಲಿ ಬರೀ ವಿವಾದಾತ್ಮಕ ಪ್ರಶ್ನೆ ಕೇಳಲಾಗುತ್ತದೆ ಹಾಗೂ ಲೈಂಗಿಕತೆ ಬಗ್ಗೆಯೇ ಹೆಚ್ಚು ಚರ್ಚೆ ಆಗುತ್ತದೆ ಎಂಬ ಕಳಂಕ ಇದೆ. ಹಾಗಾಗಿ ಕೆಲವು ಸೆಲೆಬ್ರಿಟಿಗಳು ಈ ಶೋಗೆ ಬರಲು ಹಿಂದೇಟು ಹಾಕಿದ್ದು ಕೂಡ ಉಂಟು. ಈ ಷೋಗೆ ಇದಾಗಲೇ ಹಲವಾರು ಚಿತ್ರತಾರೆಯರು ಅತಿಥಿಯಾಗಿ ಬಂದು ಹೋಗಿದ್ದಾರೆ. ಚಿತ್ರ ತಾರೆಯರ ಜೊತೆ ಕರಣ್ ಜೋಹರ್ ನೇರಾನೇರವಾಗಿ ಪ್ರಶ್ನೆಗಳನ್ನು ಕೇಳುತ್ತಾರೆ. ಅದರಲ್ಲಿ ಕೆಲವು ತೀರಾ ವೈಯಕ್ತಿಕ ಎನಿಸುವುದೂ ಉಂಟು, ಇನ್ನು ಕೆಲವು ಹಾಸ್ಯದ ರೂಪದಲ್ಲಿ ಇರುತ್ತವೆ. ಇದೀಗ ಮಾದಕ ನಟಿ ಎನ್ನಿಸಿಕೊಂಡಿರುವ ಮಲ್ಲಿಕಾ ಶೆರಾವತ್ ಕುರಿತು ಅಶ್ಲೀಲಾಗಿ ಮಾತನಾಡಿದ್ದಾರೆ ಶಾರುಕ್ ಖಾನ್.
ಅಂದಹಾಗೆ ಇದು ಹಳೆಯ ಎಪಿಸೋಡ್. ಹಳೇ ಎಪಿಸೋಡ್ಗಳನ್ನು ಇಟ್ಟುಕೊಂಡು ಜನರು ಈಗ ಶಾರುಖ್ ಖಾನ್ (Shah Rukh Khan) ಅವರನ್ನು ಟ್ರೋಲ್ ಮಾಡುತ್ತಿದ್ದದಾರೆ. ಇದು ಸಾಕಷ್ಟು ವೈರಲ್ ಆಗಿದ್ದು, ಇದರಲ್ಲಿ ಶಾರುಖ್ ಅಸಭ್ಯವಾಗಿ ಮಾತನಾಡಿದ್ದಾರೆ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಶಾರುಖ್ ಖಾನ್ ಜೊತೆ ರಾಣಿ ಮುಖರ್ಜಿ ಮತ್ತು ಕಾಜೋಲ್ ಅವರು ‘ಕಾಫಿ ವಿತ್ ಕರಣ್’ ಶೋನಲ್ಲಿ ಭಾಗಿ ಆಗಿದ್ದರು. ಆಗ ಅವರಿಗೆ ಬಾಲಿವುಡ್ ತಾರೆ ಮಲ್ಲಿಕಾ ಶೆರಾವತ್ (Mallika Sherawat) ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಶಾರುಖ್ ಖಾನ್ ತಮಾಷೆಯ ಉತ್ತರ ನೀಡಿದ್ದರು. ಅಸಲಿಗೆ ಇದು ತಮಾಷೆ ಅಲ್ಲ, ಬದಲಿಗೆ ಅಶ್ಲೀಲ ಎನ್ನುವುದು ನೆಟ್ಟಿಗರ ವಾದ. ಇಂಥ ದೊಡ್ಡ ಸ್ಟಾರ್ ಈ ಪರಿಯ ತೀರಾ ಕೆಳಮಟ್ಟದ ಉತ್ತರ ಕೊಟ್ಟಿರುವುದಕ್ಕೆ ಸ್ಟಾರ್ ನಟನನ್ನು ನೆಟ್ಟಿಗರು ಹಿಗ್ಗಾಮಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ನೇರವಾಗಿ ಕರಣ್ ಜೋಹರ್ ಅವರನ್ನು ದೂಷಿಸುತ್ತಿದ್ದಾರೆ.
ಅಷ್ಟಕ್ಕೂ ಇಲ್ಲಿ ಕೇಳಿರುವ ಪ್ರಶ್ನೆ ಹಾಗೂ ಶಾರುಖ್ ಅವರು ಹೇಳಿರುವ ಉತ್ತರ ಏನೆಂದರೆ, ಕರಣ್ ಅವರು, ಶಾರುಖ್ಗೆ‘ಒಂದು ವೇಳೆ ಮಲ್ಲಿಕಾ ಶೆರಾವತ್ ಮೇಲೆ ಆರ್ಯನ್ ಖಾನ್ಗೆ ಕ್ರಶ್ ಆದರೆ ಆತನಿಗೆ ನಿಮ್ಮ ಸಲಹೆ ಏನು?’ ಎಂದು ಪ್ರಶ್ನಿಸಿದ್ದರು. ಅದಕ್ಕೆ ಶಾರುಖ್ ‘ಆಕೆ ಇನ್ನೂ ತುಂಬ ಚಿಕ್ಕವಳು. ಅವಳ ಜೊತೆ ಆರ್ಯನ್ ಖಾನ್ಗೆ ಕ್ರಶ್ ಆದರೆ ಆಟ ಆಡುತ್ತಾನೆ. ನಾನೂ ಕೂಡ ಅವಳ ಜೊತೆ ಸ್ವಲ್ಪ ಹೊತ್ತು ಆಟ ಆಡಬಹುದಾ ಅಂತ ಕೇಳುತ್ತೇನೆ’ ಎಂದು ಉತ್ತರಿಸಿದ್ದರು. ಈ ಉತ್ತರಕ್ಕೆ ಕಾರ್ಯಕ್ರಮದಲ್ಲಿ ಹಾಜರು ಇದ್ದ ಕಾಜೋಲ್ (Kajol) ಮತ್ತು ರಾಣಿ ಮುಖರ್ಜಿ ಅವರು ಜೋರಾಗಿ ನಕ್ಕಿದ್ದರು. ಆಗ ಶಾರುಖ್ ಕೂಡಲೇ ‘ಇವರು ಏನೋ ಯೋಚನೆ ಮಾಡುತ್ತಿದ್ದಾರೆ. ಇವರು ಕೆಟ್ಟ ಮನಸ್ಥಿತಿಯವರು. ನಾನು ಹೇಳಿದ್ದು ವಿಡಿಯೋ ಗೇಮ್’ ಎಂದರು. ಈ ವಿಡಿಯೋ ಈಗ ವೈರಲ್ ಆಗಿದೆ. ‘ಇದರಲ್ಲಿ ನಿಜಕ್ಕೂ ಕೆಟ್ಟ ಮನಸ್ಥಿತಿ ಇರುವುದು ಕರಣ್ ಜೋಹರ್ಗೆ. ಅವರು ಕೆಟ್ಟ ಪ್ರಶ್ನೆ ಕೇಳಿದ್ದಾರೆ’ ಎಂದು ಕೆಲವರು ಹೇಳಿದರೆ, ಇದರಲ್ಲಿ ಕರಣ್ ತಪ್ಪಿಲ್ಲ. ಅವರು ಸಹಜವಾಗಿಯೇ ಪ್ರಶ್ನೆ ಕೇಳಿದ್ದಾರೆ. ಆದರೆ ಕೆಟ್ಟ ಮನಸ್ಥಿತಿ ಇರುವುದು ಶಾರುಖ್ದು. ಒಂದು ಹೆಣ್ಣಿನ ಬಗ್ಗೆ ಇಷ್ಟು ಕಳಪೆಯಾಗಿ ಉತ್ತರಿಸಿದ್ದಾರೆ ಎಂದಿದ್ದಾರೆ.
