ಕ್ವೀನ್ ನಿರ್ದೇಶಕ ವಿಕಾಸ್ ಬಹಲ್ ಮೇಲೆ ಕಂಗನಾ ರಾಣಾವತ್ ಲೈಂಗಿಕ ಕಿರುಕುಳ ಆರೋಪ | ಕಂಗನಾ ಆರೋಪದ ಬಗ್ಗೆ ಲಘುವಾಗಿ ಮಾತನಾಡಿದ ಸೋನಂ | ಸೋನಂಗೆ ಪ್ರತ್ಯುತ್ತರ ನೀಡಿದ ಕಂಗನಾ
ಮುಂಬೈ (ಅ. 08): ನಟಿ ಕಂಗನಾ ರಾಣಾವತ್ ಮಾಡಿರುವ ಲೈಂಗಿಕ ಕಿರುಕುಳ ಆರೋಪಕ್ಕೆ ಇನ್ನೊಬ್ಬ ನಟಿ ಮಾಡಿರುವ ಕಮೆಂಟ್ ಇಬ್ಬರ ನಡುವಿನ ಜಗಳಕ್ಕೆ ಕಾರಣವಾಗಿದೆ.
ಬಾಲಿವುಡ್ ’ಕ್ವೀನ್’ ಮೇಲೆ ಲೈಂಗಿಕ ದೌರ್ಜನ್ಯ?
ಕ್ವೀನ್ ನಿರ್ದೇಶಕ ವಿಕಾಸ್ ಬೌಲ್ ಮೇಲೆ ಕಂಗನಾ ರಾಣಾವತ್ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಇದಕ್ಕೆ ನಟಿ ಸೋನಮ್ ಕಪೂರ್ ಪ್ರತಿಕ್ರಿಯಿಸಿ, ಕಂಗನಾ ಸಾಕಷ್ಟು ವಿಚಾರಗಳನ್ನು ಹೇಳುತ್ತಿರುತ್ತಾರೆ. ಅವರನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಲಘುವಾಗಿ ಮಾತನಾಡಿದ್ದಾರೆ.
ಸೋನಮ್ ಕಮೆಂಟಿನಿಂದ ಸಿಟ್ಟಿಗೆದ್ದ ಕಂಗನಾ ತಿರುಗೇಟು ನೀಡಿದ್ದಾರೆ. ನನ್ನ ಬಗ್ಗೆ ಮಾತನಾಡಲು, ನನ್ನನ್ನು ಜಡ್ಜ್ ಮಾಡಲು ಅವರಿಗೇನು ಹಕ್ಕಿದೆ ಎಂದು ಪ್ರಶ್ನಿಸಿದ್ದಾರೆ.
ಕಂಗನಾಗೆ ಕಿರಿಕ್ ಪಾರ್ಟಿ ಎಂದ ಸೋನಂ ಕಪೂರ್
ಇನ್ನು ಮುಂದುವರೆದು, ಸೋನಮ್ ಕಪೂರ್ ಉತ್ತಮ ನಟಿಯೇನಲ್ಲ. ಜೊತೆಗೆ ಒಳ್ಳೆಯ ಮಾತುಗಾತಿಯೂ ಅಲ್ಲ. ನನ್ನ ಬಗ್ಗೆ ಇಂತದ್ದೊಂದು ಮಾತು ಹೇಳಲು ಯಾವ ನೈತಿಕತೆಯೂ ಇಲ್ಲ ಎಂದು ಹೇಳಿದ್ದಾರೆ.
