ಬಾಲಿವುಡ್‌ನ ಮತ್ತೊಬ್ಬ ನಟಿ ಹೊರ ಹಾಕಿದ್ರು ಲೈಂಗಿಕ ದೌರ್ಜನ್ಯ ಆರೋಪ | ಮುಂದುವರೆದಿದೆ ಲೈಂಗಿಕ ಕಿರುಕುಳ ದೌರ್ಜನ್ಯ ಆರೋಪ | ಯಾರು ಆ ನಟಿ? ಏನೀ ಆರೋಪ? 

ಬೆಂಗಳೂರು (ಅ. 07): ಬಾಲಿವುಡ್ ನಟಿ ತನುಶ್ರೀ ದತ್ತಾ ಲೈಂಗಿಕ ಕಿರುಕುಳ ಆರೋಪದ ಬೆನ್ನಲ್ಲೇ ಇನ್ನೊಬ್ಬ ನಟಿ ಲೈಂಗಿಕ ಕಿರುಕುಳದ ಆರೋಪವನ್ನು ಬಹಿರಂಗಪಡಿಸಿದ್ದಾರೆ. 

ಬ್ರಾ ಎಸೆದಿದ್ದ ನಿರ್ಮಾಪಕ, ಬಾಲಿವುಡ್ ನಟಿ ಹೇಳಿದ ಬಿಕಿನಿ ನೋವು!

ನಟಿ ಕಂಗನಾ ರಾನಾವತ್ ತಮ್ಮ ಮೇಲೂ ಕೂಡಾ ದೌರ್ಜನ್ಯವಗಿತ್ತು ಎಂದು ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಕ್ವೀನ್ ಚಿತ್ರದ ಶೂಟಿಂಗ್ ವೇಳೆ ನಿರ್ದೇಶಕ ವಿಕಾಸ್ ಬಹಲ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ಕಂಗನಾ ಆರೋಪಿಸಿದ್ದಾರೆ. 

ಈ ನಟಿಗೆ ಸೆಟ್‌ನಲ್ಲೇ ಬಟ್ಟೆ ಬಿಚ್ಚು ಎಂದಿದ್ದ ನಿರ್ದೇಶಕ!

‘ನಾವು ಪ್ರತಿಬಾರಿ ಭೇಟಿಯಾದಾಗಲು ವಿಶ್ ಮಾಡಿ ಅಪ್ಪಿಕೊಳ್ಳುತ್ತಿದ್ದೆವು. ನನ್ನ ಕತ್ತಿನ ಮೇಲೆ ಆತ ಮುಖವಿಟ್ಟು ಉಜ್ಜುತ್ತಿದ್ದ. ನನ್ನನ್ನು ಗಟ್ಟಿಯಾಗಿ ಹಿಡಿದು ನನ್ನ ಕೂದಲಿನ ಪರಿಮಳವನ್ನು ಆಘ್ರಾಣಿಸುತ್ತಿದ್ದ. ಮುಜುಗರವಾಗಿ ಅವನ ಕೈಯಿಂದ ತಪ್ಪಿಸಿಕೊಳ್ಳಲು ಸಾಕಷ್ಟು ಸಮಯ ಹಿಡಿಯುತ್ತಿತ್ತು ಎಂದು ಕಂಗನಾ ಆರೋಪಿಸಿದ್ದಾರೆ. 

ತನುಶ್ರೀ ದತ್ತಾ ವಿರುದ್ಧ ಎಂಎನ್‌ಎಸ್‌ ಮಾನನಷ್ಟ ಕೇಸ್‌

ಕ್ವೀನ್ ಚಿತ್ರ ಮಾಡುವ ವೇಳೆ ವಿಕಾಸ್ ಗೆ ಮದುವೆಯಾಗಿತ್ತು. ಸಂಗಾತಿಯಿದ್ದರೂ ನನ್ನನ್ನು ಲೈಂಗಿಕ ಆಸೆಗಾಗಿ ಕರೆಯುತ್ತಿದ್ದರು ಎಂದು ಆರೋಪಿಸಿದ್ದಾರೆ.