ನಮ್ಮ ನಿಮ್ಮೆಲ್ಲರ ಲೈಫ್‌ನಲ್ಲೂ ಸಮಸ್ಯೆ ತಂದೊಡ್ಡುವ, ಸಮಸ್ಯೆಯಾಗಿ ಕಾಡುವ ವ್ಯಕ್ತಿಗಳು ಒಂದಲ್ಲ ಒಂದು ಹಂತದಲ್ಲಿ ಬಂದೇ ಬರುತ್ತಾರೆ. ಅವರೆಲ್ಲಾ ನಮ್ಮ ಪಾಲಿಗೆ ‘ಟ್ರಬಲ್ ಮೇಕರ್’ಗಳೇ
ಹೀಗಿರುವಾಗ ಸೆಲೆಬ್ರಿಟಿಗಳ ಲೆವಲ್‌ನಲ್ಲಿ ಈ ರೀತಿಯ ಟ್ರಬಲ್ ಮೇಕರ್‌ಗಳು ಮತ್ತಷ್ಟು ಜಾಸ್ತಿ ಇದ್ದೇ ಇರುತ್ತಾರೆ. ಹೀಗಂತ ಅವರ ಬಳಿಯೇ ನೇರವಾಗಿ ನಿಮಗೆ ಹೆಚ್ಚು ತೊಂದರೆ ಕೊಡುವುದು ಯಾರು ಎಂದು ಪ್ರಶ್ನೆ ಮಾಡಿದರೆ ಏನು ಉತ್ತರ ಕೊಡುತ್ತಾರೋ, ಬಿಡುತ್ತಾರೋ? ಆದರೆ ಸೋನಂ ಕಪೂರ್ ಮಾತ್ರ ಈ ವಿಚಾರದಲ್ಲಿ ಭಾರಿ ಬೋಲ್ಡ್. ಯಾಕೆಂದರೆ ತನ್ನ ಪಾಲಿಗೆ ಹೆಚ್ಚು ಸಮಸ್ಯೆ ತಂದೊಡ್ಡುವುದು ಯಾರು ಎಂದು ಕೇಳಿದ ಪ್ರಶ್ನೆಗೆ ರಾಣಾವತ್ ಹೆಸರನ್ನು ನೇರಾ ನೇರವಾಗಿ ಹೇಳಿಬಿಟ್ಟಿದ್ದಾರೆ. ಸೋನಂ ಕಪೂರ್ ಮತ್ತು ಕಂಗನಾ ರಾಣಾವತ್ ನಡುವಿನ ಸ್ನೇಹ ಎಷ್ಟರ ಮಟ್ಟಿಗಿದೆ, ಅವರಿಬ್ಬರ ಒಡನಾಟ ಹೇಗಿದೆ ಎನ್ನುವುದನ್ನು ಜಾಲಾಡಿದರೆ ಅವರಿಬ್ಬರು ಹೆಚ್ಚು ಗಾಢವೂ ಅಲ್ಲದ, ಅಷ್ಟು ಪೇಲವವೂ ಅಲ್ಲದ ಸ್ನೇಹ ಹೊಂದಿದ್ದಾರೆ. ಹಾಗೆ ನೋಡಿದರೆ ಸೋನಂ ಸ್ವಲ್ಪ ಸಾಫ್ಟ್, ಕಂಗನಾ ರಾಣಾವತ್ ಸಲ್ಪ ಮುಂಗೋಪಿ. ಆದರೆ ಇವರಿಬ್ಬರ ಮಧ್ಯೆ ಏನಾಗಿದೆ, ಯಾವ ಕಾರಣಕ್ಕೆ ಸೋನಂಗೆ ಕಂಗನಾ ಕಿರಿಕ್ ಪಾರ್ಟಿಯಾಗಿ ಕಾಡಿದ್ದಾರೋ ಗೊತ್ತಿಲ್ಲ. ಅದ್ಯಾವ ವಿವರವನ್ನೂ ಸೋನಂ ಬಾಯಿಬಿಟ್ಟಿಲ್ಲ.
