ಅಬ್ಬಾ..! ಬಾಸ್ ಚಿತ್ರದ ಹಾಡು ಯಾವಾಗಪ್ಪಾ ಬರುತ್ತೆ ಅಂತ ಕಾದು ಕೂತವರಿಗೆ ಚಿತ್ರತಂಡವು ಎಳ್ಳು - ಬೆಲ್ಲ ನೀಡಲಿದ್ದಾರೆ ಅದುವೇ ಚಿತ್ರದ ‘ಶಿವನಂದಿ’ ಅನ್ನೊ ಹಾಡಿನ ಬಿಡುಗಡೆ.

ಯಾಜಮಾನ ಚಿತ್ರದ ಮೂಸಿಕಲ್ ಕಾಂಬಿನೇಷನ್ ಕೇಳಿದ್ರೆ ಮಿಸ್ ಮಾಡುವ ಹಾಡೆ ಅಲ್ಲಾ.. ಹರಿಕೃಷ್ಣ ಹಾಗು ದರ್ಶನ್ ಜೋಡಿಯಾಗಿ ಮೂಡಿ ಬರುತ್ತಿರುವ 25ನೇ ಚಿತ್ರ ಇದಾಗಿದೆ.

ಇನ್ನು ಚಿತ್ರದ ನಾಯಕಿಯರಾದ ತಾನ್ಯ ಹೋಪ್ ಹಾಗು ರಶ್ಮಿಕಾ ಮಂದಣ್ಣ ಸಿಕ್ಕಾಪಟ್ಟೆ ಕ್ಯೂಟ್ ಆಗಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ. ಸಿನಿಮಾದ ಚಿತ್ರೀಕರಣ ಮುಗಿಸಿರುವ ತಂಡ ಈಗ ಪ್ರೊಡಕ್ಷನ್ ಕೆಲಸದಲ್ಲಿ ಬಿಜಿಯಾಗಿದ್ದಾರೆ.

ಡಿ ಬಿಟ್ಸ್ ಟ್ವಿಟ್ಟರ್ ಖಾತೆಯಿಂದ ಮಾಡಿರುವ ಟ್ವೀಟ್ ಅನ್ನು ದರ್ಶನ್ ಅಫಿಶಿಯಲ್ ಖಾತೆ ಆದ ‘ದರ್ಶನ್ ತೂಗುದೀಪ್ ಶ್ರೀನಿವಾಸ್’ ರೀಟ್ವೀಟ್ ಮಾಡಿಕೊಂಡಿದ್ದಾರೆ.