ಬೆಂಗಳೂರು (ಫೆ. 16): ’ಪಡ್ಡೆಹುಲಿ’ ಚಿತ್ರತಂಡ  ವ್ಯಾಲಂಟೈನ್ಸ್ ಡೇಗೆ ಲವ್ ಸಾಂಗೊಂದನ್ನು ಗಿಫ್ಟ್ ಆಗಿ ನೀಡಿದೆ. 

ಪಡ್ಡೆಹುಲಿ’ ಟೀಂನಿಂದ ವ್ಯಾಲಂಟೈನ್ಸ್ ಡೇಗೆ ಲವ್ ಸಾಂಗ್

ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ನಟಿಸಿರುವ ಪಡ್ಡೆಹುಲಿ ಚಿತ್ರ ಟೀಸರ್ ನಿಂದಲೇ ಗಮನ ಸೆಳೆದಿದೆ. ಶ್ರೇಯಸ್ ಹಾಗೂ ನಟಿ ನಿಶ್ವಕಾ ನಾಯ್ಡು ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಕಾಲೇಜು ಹುಡುಗಿಯ ಹಿಂದೆ ಸುತ್ತುವ ಪ್ರೇಮಿಯ ದೃಶ್ಯಗಳಲ್ಲಿ ಶ್ರೇಯಸ್ ಇಷ್ಟವಾಗುತ್ತಾರೆ.  

ಕನ್ನಡವೇ ನಮ್ಮಮ್ಮ ಎನ್ನುತ್ತಾ ಸಾಹಸ ಸಿಂಹರಿಗೆ ತಲೆಬಾಗಿದ ‘ಪಡ್ಡೆ ಹುಲಿ’

ಇದೀಗ ಈ ಚಿತ್ರದ ಇನ್ನೊಂದು ಹಾಡನ್ನು ರಿಲೀಸ್ ಮಾಡಿದ್ದಾರೆ. ಖ್ಯಾತ ಗೀತರಚನೆಗಾರ ಬಿ ಆರ್ ಲಕ್ಷ್ಮಣ ರಾವ್ ಅವರು ಬರೆದಿರುವ ಅಧ್ಬುತ ಸಾಹಿತ್ಯಕ್ಕೆ ಅಜನೀಶ್ ಲೋಕನಾಥ್ ಅವರು ಸಂಗೀತ ನೀಡಿದ್ದಾರೆ.  ಸಿರ್ದ್ದಾತ್ ಮಹಾದೇವನ್ ಮತ್ತು ಗುಬ್ಬಿ ಅವರ ಧ್ವನಿಯಲ್ಲಿ ಮೂಡಿ ಬಂದಿರುವ ಈ ವಿಶೇಷ ಹಾಡನ್ನು ಎಲ್ಲಾ ಪ್ರೇಮಿಗಳು ಹಾಗೂ ಎಲ್ಲಾ  ಸಂಗೀತ ಪ್ರೇಮಿಗಳಿಗೂ ಅರ್ಪಿಸಲಾಗಿದೆ.