ಬೆಂಗಳೂರು (ಫೆ. 13): ಪಡ್ಡೆಹುಲಿ ಚಿತ್ರತಂಡ  ವ್ಯಾಲಂಟೈನ್ಸ್ ಡೇಯನ್ನು ಇನ್ನಷ್ಟು ಕಲರ್ ಫುಲ್ ಆಗಿಸಿದೆ. ವ್ಯಾಲಂಟೈನ್ಸ್ ಡೇಗೆ ಪ್ರೇಮಿಗಳಿಗಾಗಿ ಲವ್ ಸಾಂಗ್‌ವೊಂದನ್ನು ರಿಲೀಸ್ ಮಾಡಿದೆ.  

ಕನ್ನಡವೇ ನಮ್ಮಮ್ಮ ಎನ್ನುತ್ತಾ ಸಾಹಸ ಸಿಂಹರಿಗೆ ತಲೆಬಾಗಿದ ‘ಪಡ್ಡೆ ಹುಲಿ

ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ನಟಿಸಿರುವ ಪಡ್ಡೆಹುಲಿ ಚಿತ್ರ ಟೀಸರ್ ನಿಂದಲೇ ಗಮನ ಸೆಳೆದಿದೆ. ಈ ಚಿತ್ರದ ಹಾಡನ್ನು ರಿಲೀಸ್ ಮಾಡಲಾಗಿದ್ದು ಪ್ರೇಮಿಗಳಿಗೆ ಇಷ್ಟವಾಗುವಂತಿದೆ.

ಪಡ್ಡೆಹುಲಿ ಚಿತ್ರದಲ್ಲಿ ಸಾಹಸಸಿಂಹನಿಗೆ ಸಲಾಂ!

ಒಂದು ಮಾತು ನೂರು ಹೇಳಲೇ..... ಎಂಬ ಹಾಡಿನಲ್ಲಿ ಶ್ರೇಯಸ್ ಹಾಗೂ ನಟಿ ನಿಶ್ವಕಾ ನಾಯ್ಡು ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಕಾಲೇಜು ಹುಡುಗಿಯ ಹಿಂದೆ ಸುತ್ತುವ ಪ್ರೇಮಿಯ ದೃಶ್ಯಗಳಲ್ಲಿ ಶ್ರೇಯಸ್ ಇಷ್ಟವಾಗುತ್ತಾರೆ. 

ಈ ಹಾಡಿಗೆ ನಾಗಾರ್ಜುನ ಶರ್ಮಾ ಸಾಹಿತ್ಯ ಬರೆದಿದ್ದಾರೆ. ಸರಿಗಮಪ ಖ್ಯಾತಿಯ ಸಂಜೀತ್ ಹೆಗ್ಡೆ ಧ್ವನಿ ನೀಡಿದ್ದಾರೆ.