ಬೆಂಗಳೂರು[ಫೆ.04]  ಕನ್ನಡತನವನ್ನು ಸಾರುವ, ಸಾಹಸ ಸಿಂಹ ವಿಷ್ಣುವರ್ಧನ್ ಅವರ ನಾಗರಹಾವು ಚಿತ್ರ ನೆನಪಿಸುವ, ಚಿತ್ರದುರ್ಗದ ಕಲ್ಲಿನ ಕೋಟೆಯ ಇತಿಹಾಸ ಹೇಳುವ ಹಾಡೊಂದನ್ನು ಯುಟ್ಯೂಬ್‌ನಲ್ಲಿ ನೋಡಿ ಆನಂದಿಸಬಹುದಾಗಿದೆ.

ಸಾಹಸ ಸಿಂಹ ವಿಷ್ಣುವರ್ಧನ್ ಆರಾಧಕರಲ್ಲಿ ನಿರ್ಮಾಪಕ ಕೆ. ಮಂಜು ಒಬ್ಬರು. ಮಂಜು ಅವರ ಪುತ್ರ  ಶ್ರೇಯಸ್  'ಪಡ್ಡೆಹುಲಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ.

ವಿಷ್ಣು ಸ್ಮಾರಕ ಎಲ್ಲಿ : ಫೈನಲ್ ನಿರ್ಧಾರ ತಿಳಿಸಿದ ಅನಿರುದ್ಧ್

ಗುರು ದೇಶಪಾಂಡೆ ನಿರ್ದೇಶನದಲ್ಲಿ ಹುಲಿ ಮೂಡಿಬರುತ್ತಿದೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಬ್ಯಾನರ್‌ನ ಪಿಆರ್‌ಕೆ ಆಡಿಯೋದ ಮೂಲಕ ಹಾಡು ಲಾಂಚ್ ಮಾಡಲಾಗಿದೆ. ಪುನೀತ್, ಉಪೇಂದ್ರ, ರಕ್ಷಿತ್ ಶೆಟ್ಟಿ, ಶರಣ್ ಸೇರಿದಂತೆ ಅನೇಕರು ಶ್ರೇಯಸ್‌ಗೆ ಶುಭ ಕೋರಿದ್ದಾರೆ.