ಕೆ.ಮಂಜು ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಚಿತ್ರ 'ಪಡ್ಡೆಹುಲಿ' ಮೂಲಕ ಮಗ ಶ್ರೇಯಸ್‌ರನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಹೀರೂನನ್ನು ಪರಚಯಿಸುವ ಹಾಡಿನಲ್ಲಿ ವಿಷ್ಣು ದಾದ ಮಿಂಚಲಿದ್ದಾರೆ.

ಈ ಹಾಡನ್ನು ಫೆಬ್ರವರಿ 2ರಂದು ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದಲ್ಲಿ ವಿಷ್ಣು ಅಭಿಮಾನಿಗಳು ಮಧ್ಯಾಹ್ನ 2 ಗಂಟೆಗೆ ಬಿಡುಗಡೆ ಮಾಡಲಿದ್ದಾರೆ. ಈ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಸಾರ್ವಜನಿಕರೂ ಪಾಲ್ಗೊಳ್ಳಬಹುದು.

ಸಾಹಸ ಸಿಂಹನ ಜರ್ನಿಗೊಂದು ರ‍್ಯಾಪ್ ಸಲಾಂ ಮಾಡಿದ ‘ಪಡ್ಡೆಹುಳಿ’

ಕೆಲವು ದಿನಗಳ ಹಿಂದೆ 'ಪಡ್ಡೆಹುಲಿ' ಚಿತ್ರದಲ್ಲಿರುವ ರ‍್ಯಾಂಪ್ ಹಾಡೊಂದನ್ನು ಬಿಡುಗಡೆ ಮಾಡಲಾಗಿತ್ತು. ಅದರಲ್ಲಿ ಥೇಟ್ 'ನಾಗರಹಾವು' ಚಿತ್ರದ ವಿಷ್ಣು ಗೆಟಪ್ಪಿನಂತೆಯೇ ಶ್ರೇಯಸ್ ನಟಿಸಿದ್ದಾರೆ. ಈ ಹಾಡೂ ಹಿಟ್ ಆಗುತ್ತದೆ. ಚಿತ್ರವೂ 100 ದಿನ ಪೂರೈಸುವುದರಲ್ಲಿ ಅನುಮಾನವೇ ಇಲ್ಲ ಎನ್ನುವುದು ಕನ್ನಡ ಚಿತ್ರಾಭಿಮಾನಿಗಳ ಅಭಿಮತ.