ಬೆಂಗಳೂರು (ಫೆ. 20): ಜಯತೀರ್ಥ ನಿರ್ದೇಶನ ಹಾಗೂ ರಿಷಬ್ ಶೆಟ್ಟಿ ಅಭಿನಯದ ‘ಬೆಲ್ ಬಾಟಮ್ ’ವಿದೇಶಗಳಿಗೆ ಎಂಟ್ರಿ ಆಗುತ್ತಿದೆ. ಫೆ. 22 ರಿಂದ ಅಮೆರಿಕ, ನ್ಯೂಜಿಲ್ಯಾಂಡ್ ಹಾಗೂ ಆಸ್ಟ್ರೇಲಿಯಾ ಸೇರಿ ಹಲವು ಕಡೆಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಮುಂದಾಗಿದೆ.

ಚಿತ್ರ ವಿಮರ್ಶೆ: ರೆಟ್ರೋ ಫೀಲಿಂಗು ಮೆಟ್ರೋ ಪಂಚಿಂಗು ‘ಬೆಲ್ ಬಾಟಮ್’ !

ಸ್ಯಾಂಡಲ್‌ವುಡ್ ಗೆಳೆಯರ ಬಳಗದ ಮೂಲಕ ಈಗ ಅಮೆರಿಕದಲ್ಲಿನ ೩೦ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಚಿತ್ರದ ರಿಲೀಸ್‌ಗೆ ವೇದಿಕೆ ಸಜ್ಜಾಗಿದೆ. ‘ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್‌ಗಳ ಮೂಲಕ ವಿದೇಶದಲ್ಲಿ ಬಿಡುಗಡೆಗೆ ಸಿದ್ಧತೆ ನಡೆದಿದೆ.

ರೊಮ್ಯಾನ್ಸ್ ಮಾಡಲು ರಿಷಬ್ ಶೆಟ್ಟಿಗೆ ನಾಚಿಕೆಯಾಗುತ್ತಂತೆ!

ಆಲ್‌ಲೈನ್‌ಗಳಲ್ಲಿ ಚಿತ್ರದ ಬಗೆಗಿನ ಅಭಿಪ್ರಾಯ ನೋಡಿದವರು ಅಲ್ಲಿಂದಲೇ ಚಿತ್ರದ ರಿಲೀಸ್‌ಗೆ ಒತ್ತಾಯಿಸಿದ್ದರು. ಎಲ್ಲಾ ಕಡೆಯಿಂದಲೂ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ’ ಎನ್ನುತ್ತಾರೆ ನಿರ್ದೇಶಕ ಜಯತೀರ್ಥ. ಈ ವಾರದಿಂದ ಕೋಲಾರದಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಮಲ್ಟಿಪ್ಲೆಕ್ಸ್‌ಗಳಲ್ಲಿ ಹೆಚ್ಚುವರಿ ಪರದೆಗಳು ಸೇರ್ಪಡೆ ಆಗುತ್ತಿವೆ.