ಕನ್ನಡದ ಬ್ಲಾಕ್‌ಬಸ್ಟರ್‌ ಚಿತ್ರ ‘ಕೆಜಿಎಫ್‌’ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದವರು ಈ ಶ್ರೀನಿಧಿ ಶೆಟ್ಟಿ. ಮೂಲತಃ ಕನ್ನಡದವರಾದರೂ, ಮಾಡೆಲಿಂಗ್‌ ಮೂಲಕ ಮುಂಬೈ ನಿವಾಸಿ ಆದವರು. ಆದರೆ ಕೆಜಿಎಫ್‌ ಚಿತ್ರದ ಮೂಲಕ ಸಿಕ್ಕ ಬಹು ದೊಡ್ಡ ಜನಪ್ರಿಯತೆಯಿಂದ ಈಗವರು ಖಾಯಂ ಬೆಂಗಳೂರು ನಿವಾಸಿ. ಅದು ‘ಕೆಜಿಎಫ್‌’ ಆಪ್ಟರ್‌ ಎಫೆಕ್ಟ್ !

ರೋರಿಂಗ್ ಸ್ಟಾರ್ ಜೊತೆ ಕೆಜಿಎಫ್ ಕ್ವೀನ್?

‘ಕೆಜಿಎಫ್‌ ರಿಲೀಸ್‌ ಆದ ನಂತರ ದಿನಗಳಿಂದಲೇ ನನ್ನ ಲೈಫ್‌ಸ್ಟೈಲ್‌ ಸಾಕಷ್ಟುಬದಲಾಯಿತು. ನಿರೀಕ್ಷೆಗೂ ಮೀರಿದ ಜನಪ್ರಿಯತೆ ಸಿಕ್ಕಿತು. ಎಲ್ಲಿಗೆ ಹೋದರೂ ಜನ ಮಾತನಾಡಿಸುವಷ್ಟರ ಮಟ್ಟಿಗೆ ನಟಿಯಾಗಿ ಗುರುತಿಸಿಕೊಂಡೆ. ಅಭಿಮಾನಿಗಳ ಬಳಗ ಹುಟ್ಟಿಕೊಂಡಿತು. ಅದೆಲ್ಲಕ್ಕಿಂತ ಮುಖ್ಯವಾಗಿ ಅಲ್ಲಿಂದ ಇಲ್ಲಿಯವರೆಗೆ ಅದೆಷ್ಟುಕಾರ್ಯಕ್ರಮಗಳಿಗೆ ಹೋಗಿ ಬಂದಿದ್ದೇನೋ ಗೊತ್ತಿಲ್ಲ. ಈಗಲೂ ಬಿಡುವಿದ್ದಾಗ ಅದೇ ಕೆಲಸ. ಕರ್ನಾಟಕವೆಲ್ಲ ತಿರುಗಾಡಿ ಬಿಟ್ಟಿದ್ದೇನೆ. ಅದೊಂದೆ ಸಿನಿಮಾ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದೆ ಅಂದರೆ, ಐ ಆ್ಯಮ್‌ ಲಕ್ಕಿ’ ಎನ್ನುತ್ತಾರೆ ಶ್ರೀ ನಿಧಿ ಶೆಟ್ಟಿ.

ಶ್ರೀನಿಧಿ ಶೆಟ್ಟಿ ಕೈಗೆ ಪೆಟ್ಟು; ಕೆಜಿಎಫ್ 2 ನಲ್ಲಿ ನಟಿಸ್ತಾರಾ?

‘ಕೆಜಿಎಫ್‌’ ರಿಲೀಸ್‌ ಆದ ನಂತರ ದಿನಗಳಲ್ಲಿ ಶ್ರೀನಿಧಿ ಶೆಟ್ಟಿ ಸುತ್ತ ಹಲವು ಗಾಸಿಪ್‌ ಹರಿದಾಡಿದವು. ಅವರು ವಾಪಸ್‌ ಬಾಲಿವುಡ್‌ಗೆ ಹಾರುವುದು ಗ್ಯಾರಂಟಿಯಂತೆ, ಟಾಲಿವುಡ್‌, ಕಾಲಿವುಡ್‌ನಿಂದಲೂ ಅವರಿಗೆ ಕರೆ ಬಂದಿವೆಯಂತೆ ಎನ್ನುವ ಸುದ್ದಿಗಳದ್ದೇ ಅಬ್ಬರ. ಆದರೆ ಅಲ್ಲೆಲ್ಲೂ ಹೋಗದೆ, ‘ಕೆಜಿಎಫ್‌ 2’ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿರುವ ಶ್ರೀನಿಧಿ ಶೆಟ್ಟಿ, ಮಾತಿಗೆ ಸಿಕ್ಕಾಗ ‘ಕೆಜಿಎಫ್‌’ ನಂತರದಲ್ಲಿ ತಮಗೆ ಬಂದ ಹೊಸ ಸಿನಿಮಾ ಆಫರ್‌ಗಳ ಕುರಿತು ಮಾತನಾಡಿದರು.

ಅಭಿಮಾನಿ ಕೇಳಿದ ಕೂಡಲೇ ನಂಬರ್ ಕೊಟ್ಟ ಕೆಜಿಎಫ್ ಕ್ವೀನ್

‘ಹೊಸ ಸಿನಿಮಾಗಳ ಅವಕಾಶಗಳ ಬಗ್ಗೆ ನಾನು ಹೆಚ್ಚಾಗಿ ತಲೆ ಕೆಡಿಸಿಕೊಂಡಿರಲಿಲ್ಲ. ಯಾಕಂದ್ರೆ ಕೆಜಿಎಫ್‌ ರಿಲೀಸ್‌ಗೂ ಮುನ್ನವೇ ‘ಕೆಜಿಎಫ್‌ 2’ ಬಗ್ಗೆ ಮಾತುಕತೆ ನಡೆದಿತ್ತು. ಅದು ಕೂಡ ರಿಲೀಸ್‌ ಮುಂಚೆ ಹೊಸ ಸಿನಿಮಾ ಬೇಡ ಅಂತಲೇ ಇದ್ದೆ. ‘ಕೆಜಿಎಫ್‌’ ರಿಲೀಸ್‌ ಆದ ನಂತರವಂತೂ ನನ್ನ ನಿಲುವು ಮತ್ತಷ್ಟುಗಟ್ಟಿಯಾಯಿತು. ಯಾಕಂದ್ರೆ ‘ಕೆಜಿಎಫ್‌’ನಂತಹ ಸಿನಿಮಾ ನನ್ನ ಜವಾಬ್ದಾರಿ ಹೆಚ್ಚಿಸಿತು. ಮುಂದಿನ ಸಿನಿಮಾ ಒಪ್ಪಿಕೊಳ್ಳುವಾಗ ಏನೆಲ್ಲ ಸಿದ್ಧತೆ ಬೇಕು, ಎಂತಹ ಕತೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಚಿಂತನೆ ಶುರುವಾಯಿತು. ಅಷ್ಟಾಗಿಯೂ ಸಾಕಷ್ಟುನಿರ್ದೇಶಕರು ಸಂಪರ್ಕ ಮಾಡಿದರು.

ಕೆಜಿಎಫ್ ನಟಿ ಶ್ರೀನಿಧಿ ಬಗ್ಗೆ ನಿಮಗೇನು ಗೊತ್ತು?

ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಯ ಸಿನಿಮಾಗಳಲ್ಲೂ ಆಫರ್‌ ಬಂತು. ಸದ್ಯಕ್ಕೆ ಅವ್ಯಾವನ್ನು ನಾನು ಒಪ್ಪಿಕೊಂಡಿಲ್ಲ. ಯಾಕಂದ್ರೆ ಕೆಜಿಎಫ್‌ 2 ಚಿತ್ರೀಕರಣವಿದೆ. ಅದು ಮುಗಿದ ನಂತರ ಹೊಸ ಸಿನಿಮಾ ಅವಕಾಶಗಳ ಬಗ್ಗೆ ಮಾತನಾಡುತ್ತೇನೆ. ಒಂದಂತೂ ಸತ್ಯ ಕನ್ನಡದ ಜತೆಗೆ ತೆಲುಗು ಮತ್ತು ತಮಿಳು ಸಿನಿಮಾಗಳ ಅವಕಾಶವೂ ನನಗಿದೆ’ಎನ್ನುತ್ತಾರೆ ಶ್ರೀ ನಿಧಿ ಶೆಟ್ಟಿ.