ಬೆಂಗಳೂರು (ಮಾ. 23): ಸ್ಟಾರ್ ನಟರ ಜೊತೆ ಸೆಲ್ಫಿ ತೆಗೆದುಕೊಳ್ಳುವುದು, ಕೈಕುಲುಕುವುದು, ಮಾತನಾಡುವುದೇ ದೊಡ್ಡ ವಿಚಾರ. ಅವರ ನಂಬರ್ ಪಡೆಯುವುದಂತೂ ಕಷ್ಟಸಾಧ್ಯ. ಅಂತದ್ರಲ್ಲಿ ಇಲ್ಲೊಬ್ಬ ಅಭಿಮಾನಿ ನೆಚ್ಚಿನ ನಟಿಯೊಬ್ಬಳ ನಂಬರನ್ನು ಪಡೆದಿದ್ದಾನೆ. 

ಕೆಜಿಎಫ್ ಸಿನಿಮಾದ ಮೂಲಕ ನಟಿ ಶ್ರೀನಿಧಿ ಶೆಟ್ಟಿ ಸಿಕ್ಕಾಪಟ್ಟೆ ಫೇಮಸ್ ಆದರು. ಸಹಜವಾಗಿ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ. ಶ್ರೀನಿಧಿ ಶೆಟ್ಟಿ ಇತ್ತೀಚಿಗಷ್ಟೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಭಿಮಾನಿಗಳಿಗೆ ಪ್ರಶ್ನೆ ಕೇಳಿ ಎಂದಿದ್ದರು. ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸುವುದಾಗಿಯೂ ಹೇಳಿದ್ದರು. ಕಿಲಾಡಿ ಅಭಿಮಾನಿಯೊಬ್ಬ  ಶ್ರೀನಿಧಿ ಶೆಟ್ಟಿಯವರ ನಂಬರನ್ನೇ ಕೇಳಿದ್ದಾನೆ. 

ಅಭಿಮಾನಿಯ ಕೋರಿಕೆಗೆ ಶ್ರೀನಿಧಿ ಶೆಟ್ಟಿ ತಳ್ಳಿ ಹಾಕಲಿಲ್ಲ. ಕೂಡಲೇ ನಂಬರ್ ನೀಡಿಯೇ ಬಿಟ್ಟರು. ಬೇರೆ ಯಾವುದೋ ನಂಬರ್ ಕೊಟ್ಟಿರಬಹುದೆಂದು ಅನುಮಾನ ಬಂದಿತ್ತು. ಆದರೆ ಟ್ರೂ ಕಾಲರ್ ನಲ್ಲಿ ನೋಡಿದರೆ ಅದು ಅವರ ನಂಬರ್ರೇ ಆಗಿತ್ತು.