ಕನ್ನಡ ಚಿತ್ರರಂಗ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುವಂತೆ ಮಾಡಿದ ಸಿನಿಮಾ ಕೆಜಿಎಫ್.  ಅನೇಕ ದಾಖಲೆಗಳನ್ನು ಈ ಸಿನಿಮಾ ತನ್ನದಾಗಿಸಿಕೊಂಡಿದೆ. ಇದೀಗ ಕೆಜಿಎಫ್-2 ಶೂಟಿಂಗ್ ಶುರುವಾಗಿದೆ. 

ಆದರೆ ನಟಿ ಶ್ರೀನಿಧಿ ಶೆಟ್ಟಿ ಕೈಗೆ ಪೆಟ್ಟು ಮಾಡಿಕೊಂಡಿದ್ದಾರೆ. ರೀನಾ ಪಾತ್ರದ ಮೂಲಕ ಶ್ರೀನಿಧಿ ಶೆಟ್ಟಿ ಜನಪ್ರಿಯತೆ ಗಳಿಸಿದ್ದರು. ಕೆಜಿಎಫ್2 ನಲ್ಲೂ ಇವರ ಪಾತ್ರ ಪ್ರಮುಖವಾಗಿದೆ. 

ಶ್ರೀನಿಧಿ ಶೆಟ್ಟಿ ಇತ್ತೀಚಿಗೆ ಇನ್ಸ್ಟಾಗ್ರಾಮ್ ನಲ್ಲಿ ಫೋಟೋ ಹಾಕಿದ್ದರು. ಅದರಲ್ಲಿ ಅವರ ಕೈಗೆ ಪೆಟ್ಟಾಗಿದ್ದು ಬ್ಯಾಂಡೇಜ್ ಕಟ್ಟಿಕೊಂಡಿದ್ದನ್ನು ಗಮನಿಸಬಹುದಾಗಿದೆ. ಈಗಾಗಲೇ ಕೆಜಿಎಫ್2 ಶೂಟಿಂಗ್ ಶುರುವಾಗಿದ್ದು ಶ್ರೀನಿಧಿ ಭಾಗವಹಿಸ್ತಾರಾ ಎಂಬ ಕುತೂಹಲ ಮೂಡಿದೆ.

 

 
 
 
 
 
 
 
 
 
 
 
 
 

💞

A post shared by Srinidhi Shetty 👸 (@srinidhi_shetty) on Apr 20, 2019 at 6:30am PDT

ಶ್ರೀನಿಧಿ ಶೆಟ್ಟಿ ಕರುವಿನೊಂದಿಗಿರುವ ಫೋಟೋದಲ್ಲಿ ಕೈಗೆ ಬ್ಯಾಂಡೇಜ್ ಕಟ್ಟಿಕೊಂಡಿರುವುದನ್ನು ನೋಡಬಹುದು.