ಅದು ಚಿತ್ರೀಕರಣಕ್ಕೆ ಸಂಬಂಧಿಸಿದ್ದು. ಈ ಚಿತ್ರದ ಶೂಟಿಂಗ್ ನಡೆದಿರುವುದು ಉಡುಪಿ ಬ್ರಹ್ಮಾವರದಲ್ಲಿರುವ ಐನೂರು ವರ್ಷಗಳ ಹಳೆಯ ಮನೆಯಲ್ಲಿ. ಚಪ್ಪಲಿಯೂ ಸಹ ಹಾಕಿಕೊಂಡು ಹೋಗದಂತಹ ಈ ಮನೆಯಲ್ಲಿ ಚಿತ್ರೀಕರಣ ಮಾಡಿರುವುದು ಹೇಗೆ ಎಂಬುದು ಈಗಿನ ಅಚ್ಚರಿ. ಈ ಪುರಾತನವಾದ ಮನೆಯಲ್ಲಿ ಯಾವ ಚಿತ್ರವೂ ಶೂಟಿಂಗ್ ಮಾಡಿಕೊಂಡಿಲ್ಲ. ಯಾಕೆಂದರೆ ಆ ಮನೆ ಒಂಥರಾ ದೇಗುಲ ಇದ್ದಂತೆ. ಮುಖ್ಯವಾಗಿ ಮಹಿಳೆಯರು ಆ ಮನೆಗೆ ಮಡಿಯಲ್ಲೇ ಹೋಗಬೇಕು. ಚಪ್ಪಲಿ ಒಳಗೆ ಹಾಕಿಕೊಂಡು ಹೋಗುವಂತಿಲ್ಲ. ಈಗಲೂ ಕೂಡು ಕುಟುಂಬ ಆ ಮನೆಯಲ್ಲಿ ವಾಸ ಮಾಡುತ್ತಿದೆ. ನಮ್ಮ ನಿರ್ಮಾಪಕರ ಕೋರಿಕೆ ಮೇರೆಗೆ ಅಲ್ಲಿ ಶೂಟ್ ಮಾಡಲು ಅವಕಾಶ ಸಿಕ್ಕಿದ್ದು. ಇಲ್ಲಿ ಚಿತ್ರೀಕರಣ ಮಾಡಿದ್ದಕ್ಕೆ ಚಿತ್ರಕ್ಕೊಂದು ತೂಕ ಬಂದಿದೆ. ಆ ಮನೆಯೂ ಚಿತ್ರದ ಹೈಲೈಟ್‌ಗಳಲ್ಲೊಂದು ಎಂಬುದು ಚಿತ್ರದ ನಿರ್ದೇಶಕ ಅಶ್ವಥ್ ಸ್ಯಾಮ್ಯುಯಲ್ ವಿವರಣೆ. ಯಾಕೆ ಇಂಥ ಹಳೆಯ ಮನೆಯೇ ಬೇಕಿತ್ತು ಎಂಬುದ ಸಿನಿಮಾ ನೋಡಿದರೆ ಗೊತ್ತಾಗುತ್ತದಂತೆ. ಅಲ್ಲದೆ ಚಿತ್ರದ ಟ್ರೇಲರ್ ನೋಡಿದವರು ‘ರಂಗಿತರಂಗ’ ಚಿತ್ರವನ್ನು ನೆನಪಿಸುತ್ತಿದೆ ಎನ್ನುತ್ತಿದ್ದಾರೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಎನ್ನೋದು ನಿರ್ದೇಶಕರು ನೀಡುವ ವಿವರಣೆ.

ಕಿರುತೆರೆ ನಟ ಕಾರ್ತಿಕ್ ಅತ್ತಾವರ ಬೆಳ್ಳಿತೆರೆಗೆ!

ನಾವು ಕಾಣುವ ಕನಸಿನಲ್ಲಿ ನಿಗೂಢ ಅರ್ಥಗಳಿರುತ್ತವೆ. ಇಲ್ಲಿ ಚಿತ್ರದ ಪಾತ್ರಕ್ಕೆ ಅಂಥದ್ದೇ ಕನಸುಗಳು ಕಾಡುತ್ತಿದ್ದಾಗೆ ಹೇಗಿರುತ್ತದೆ ಎನ್ನುವ ಕುತೂಹಲದ ಹಾದಿಯಲ್ಲಿ ಸಿನಿಮಾ ಸಾಗುತ್ತದೆ. ಚಿತ್ರದ ನಾಯಕನಾಗಿ ಸಂತೋಷ್ ಕುಮಾರ್ ಕೊಂಚಾಡಿ ಇದ್ದಾರೆ. ಸಂಪತ್ ಕುಮಾರ್, ಸಂಗೀತಾ ಭಟ್, ಅನು ಪ್ರಭಾಕರ್, ಶ್ರೀಧರ್, ಉಷಾ ಭಂಡಾರಿ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ನೋಬಿನ್ ಪೌಲ್ ಸಂಗೀತ ನೀಡಿದ್ದಾರೆ. ಶ್ರೀಹರಿ ಬಂಗೇರ ಚಿತ್ರದ ನಿರ್ಮಾಪಕರು. 

ಸೃಜನಾತ್ಮಕ ಚಿತ್ರ ’ಅನುಕ್ತಾ’ ಟ್ರೇಲರ್ ರಿಲೀಸ್