ಸೃಜನಾತ್ಮಕ ಚಿತ್ರ ’ಅನುಕ್ತಾ’ ಟ್ರೇಲರ್ ರಿಲೀಸ್
ಸಸ್ಪೆನ್ಸ್ ಚಿತ್ರ ಅನುಕ್ತಾ ಟೀಸರ್ ರಿಲೀಸ್ | ವಿಶೇಷ ಪಾತ್ರದಲ್ಲಿ ಅನು ಪ್ರಭಾಕರ್ | ಫೆ. 1 ಕ್ಕೆ ಚಿತ್ರ ಬಿಡುಗಡೆ
ಬೆಂಗಳೂರು (ಜ. 21): ಸ್ಯಾಂಡಲ್ ವುಡ್ ನಲ್ಲಿ ಸೃಜನಾತ್ಮಕ ಚಿತ್ರಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೊಸ ಹೊಸ ಚಿತ್ರಗಳ ಮೂಲಕ ಹೊಸ ಹೊಸ ಪ್ರತಿಭೆಗಳು ಸ್ಯಾಂಡಲ್ ವುಡ್ ಗೆ ಬರುತ್ತಿದ್ದಾರೆ. ಈ ಚಿತ್ರಗಳ ಪಾಲಿಗೆ ಇದೀಗ ಅನುಕ್ತ ಸೇರಿದೆ.
ರೋಚಕ ದೃಶ್ನಗಳಮೂಲಕ ಸಸ್ಪರನ್ಸ್ ಕ್ರಿಯೇಟ್ ಮಾಡಿರುವ ಅನುಕ್ತ ಟ್ರೇಲರ್ ಬಿಡುಗಡೆಯಾಗಿದೆ.
ಕರಾವಳಿಯ ಭೂತಾರಾಧನೆ ಸುತ್ತ ಮುತ್ತ ಈ ಚಿತ್ರ ಸುತ್ತುತ್ತದೆ. ಈ ಚಿತ್ರದಲ್ಲಿ ನಟಿ ಅನು ಪ್ರಭಾಕರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಟ ಕಾರ್ತಿಕ್ ಗೆ ನಟಿಯಾಗಿ ಸಂಗೀತಾ ಭಟ್ ಸಾಥ್ ನೀಡಿದ್ದಾರೆ. ಬಹುಭಾಷಾ ನಟ ಸಂಪತ್ ರಾಜ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರಕ್ಕೆ ಅಶ್ವಥ್ ಸ್ಯಾಮುವೆಲ್ ನಿರ್ದೇಶಿಸಿದ್ದು ನೋಬಿಲ್ ಪಾಲ್ ಸಂಗೀತ ನೀಡಿದ್ದಾರೆ. ಹರೀಶ್ ಬಂಗೇರಾ ನಿರ್ಮಾಣವಾಗಿದೆ. ಫೆಬ್ರವರಿ 1 ರಂದು ಚಿತ್ರ ಬಿಡುಗಡೆಯಾಗಲಿದೆ.