ಸ್ಯಾಂಡಲ್ ವುಡ್ ಒನ್ ಆ್ಯಂಡ್ ಓನ್ಲಿ ದುರ್ಯೋಧನ ಎಂದು ಹೆಗ್ಗಳಿಕೆ ಪಡೆದಿರುವ ದರ್ಶನ್ ಮತ್ತೊಂದು ಚಿತ್ರದ ಮೂಲಕ ಗಾಂಧಿ ನಗರದಲ್ಲಿ ಸೌಂಡ್ ಮಾಡಲು ರೆಡಿಯಾಗಿದ್ದಾರೆ.

ರವಿಚಂದ್ರನ್‌ ಮಗನ ಟೀಸರ್‌ಗೆ ದರ್ಶನ್‌ ವಾಯ್ಸ್

 

ಕುರುಕ್ಷೇತ್ರ, ಯಜಮಾನ, ಒಡೆಯ ಹಾಗೂ ರಾಬರ್ಟ್ ಚಿತ್ರಗಳಿಗೆ ಬ್ಯಾಕ್ ಟು ಬ್ಯಾಕ್ ಶೂಟಿಂಗ್ ಮಾಡುತ್ತಿದ್ದು, ಕಾರಣಾಂತರಗಳಿಂದ ಕುರುಕ್ಷೇತ್ರ ಹಿಂದುಳಿದು ಯಜಮಾನ ರಿಲೀಸ್ ಆಗಿ ಹಾಕಿದಷ್ಟು ಬಂಡವಾಳ ಹಿಂಪಡೆಯುವಲ್ಲಿ ಯಶಸ್ವಿಯಾಗಿದ್ದರು. ಇನ್ನು ಕುರುಕ್ಷೇತ್ರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ವಿದೇಶದಲ್ಲೂ ಸಾಕಷ್ಟು ಅಭಿಮಾನಿಗಳನ್ನು ಗಿಟ್ಟಿಸಿಕೊಂಡಿದೆ.

‘ಕುರುಕ್ಷೇತ್ರ 3 ದಶಕದ ಹಿಂದೆ ಬಂದಿದ್ದರೆ ಅಣ್ಣಾವ್ರೇ ಸುಯೋಧನ’!

 

ಈ ನಡುವೆ ‘ಒಡೆಯ’ ಚಿತ್ರ ತಂಡವೂ ರಿಲೀಸ್ ಡೇಟ್ ಫಿಕ್ಸ್ ಮಾಡಿಕೊಂಡಿದ್ದು ಸೆಪ್ಟೆಂಬರ್ 22 ರಂದು ರಿಲೀಸ್ ಮಾಡುವುದಾಗಿ ಗಾಂಧಿನಗರದಲ್ಲಿ ಮಾತುಗಳು ಹರಿದಾಡುತ್ತಿದೆ.

ಕೆಲ ದಿನಗಳ ಹಿಂದೆ ರಾಬರ್ಟ್ ಚಿತ್ರೀಕರಣದಲ್ಲಿ ದರ್ಶನ್ ಬ್ಯುಸಿಯಾಗಿದ್ದರು. ಕುರುಕ್ಷೇತ್ರದ ನಂತರ ಒಡೆಯ ತೆರೆಗೆ ಬರಲು ಸಿದ್ಧವಾಗಿದೆ. ಸಹಜವಾಗಿ ನಿರೀಕ್ಷೆಗಳು ಹೆಚ್ಚಾಗಿಯೇ ಇವೆ.

ಕೆನಡಾದಲ್ಲಿ ಕನ್ನಡದ ಅಬ್ಬರ! ಅಭಿಮಾನಿಗಳಿಗೆ ಸಿಕ್ತು ಕುರುಕ್ಷೇತ್ರ ದರ್ಶನ!