ರವಿಚಂದ್ರನ್‌ ಪುತ್ರ ಮನೋರಂಜನ್‌ ರವಿಚಂದ್ರನ್‌ ಅಭಿನಯದ ‘ಪ್ರಾರಂಭ‘ ಚಿತ್ರೀಕರಣ ಮುಗಿಸಿದೆ. ಇದೀಗ ಚಿತ್ರತಂಡ ಟೀಸರ್‌ ಲಾಂಚ್‌ ಮೂಲಕ ಸದ್ದು ಮಾಡಲು ಮುಂದಾಗಿದೆ.

ತಮಿಳಿನಲ್ಲೂ ಕಿರಿಕ್ ಮಾಡಿಕೊಂಡ ರಶ್ಮಿಕಾ... ಕಾರ್ತಿನೂ ಪುಲ್ ಅಪ್‌ಸೆಟ್

ಅದಕ್ಕೆ ನಟ ದರ್ಶನ್‌ ವಾಯ್ಸ್ ಕೊಟ್ಟು ಶುಭ ಕೋರಿದ್ದಾರೆ. ವಿಶೇಷವಾಗಿ ಮನೋರಂಜನ್‌ ಅವರ ಸಿನಿಮಾ ಮೇಲಿನ ಪ್ರೀತಿಯನ್ನು ದರ್ಶನ್‌ ಮೆಚ್ಚಿಕೊಂಡು ಮಾತನಾಡಿದ್ದಾರೆ.

15 ವರ್ಷದ ನಂತರ 'ಶಂಭು' ಪ್ರೇಯಸಿ ಜೊತೆ ಒಂದಾದ ಶ್ರೀಮುರಳಿ!

ಹೊಸಬರ ಚಿತ್ರಗಳಿಗೆ ದರ್ಶನ್‌ ಒಂದಲ್ಲೊಂದು ರೂಪದಲ್ಲಿ ಬೆಂಬಲ ನೀಡಿ, ಪ್ರೋತ್ಸಾಹಿಸಿ ಬರುತ್ತಿರುವುದು ಮಾಮೂಲು. ಆಗಸ್ಟ್‌ 23 ರಂದು ಚಿತ್ರದ ಟೀಸರ್‌ ಆನಂದ್‌ ಆಡಿಯೋ ಮೂಲಕ ಲಾಂಚ್‌ ಆಗುತ್ತಿದೆ. ಜಗದೀಶ್‌ ಕಲ್ಯಾಡಿ ನಿರ್ಮಾಣದ ಈ ಚಿತ್ರಕ್ಕೆ ಮನು ಕಲ್ಯಾಡಿ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ನಾಯಕಿಯಾಗಿ ಕೀರ್ತಿ ಅಭಿನಯಿಸಿದ್ದಾರೆ.