Asianet Suvarna News Asianet Suvarna News

ಸ್ಯಾಂಡಲ್‌ವುಡ್ ಇನ್ನೊಬ್ಬ ನಟಿಯಿಂದ #MeToo ಆರೋಪ

ನಟಿ ಸಂಜನಾರಿಂದ ಮೀಟೂ ಆರೋಪ | ಗಂಡ-ಹೆಂಡತಿ ಚಿತ್ರ ನಿರ್ದೇಶಕ ರವಿ ಶ್ರೀವತ್ಸಾ ಮೇಲೆ ಮೀಟೂ ಆರೋಪ | 

Sandalwood actress Sanjjanaa Galrani Me Too allegation on director Ravi Shrivathsa
Author
Bengaluru, First Published Oct 18, 2018, 12:44 PM IST
  • Facebook
  • Twitter
  • Whatsapp

ಬೆಂಗಳೂರು (ಅ. 18): #ಮೀಟೂ ಅಭಿಯಾನದಲ್ಲಿ ನಟಿ ಸಂಜನಾ ತಮ್ಮ ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದಾರೆ. ಗಂಡ -ಹೆಂಡತಿ ಚಿತ್ರ ನಿರ್ದೇಶಕ ರವಿ ಶ್ರೀವತ್ಸಾ ಮೇಲೆ ಸಂಜನಾ ಮೀಟೂ ಆರೋಪ ಮಾಡಿದ್ದಾರೆ.  

ಆಫರ್ ಕೊಟ್ಟು ಮಂಚಕ್ಕೆ ಕರೆದ್ರಾ ನಿರ್ದೇಶಕ; ನಟಿಯಿಂದ #MeToo ಆರೋಪ

ಗಂಡ ಹೆಂಡತಿ ಸಿನಿಮಾ  ಮಾಡಿದಾಗ ನನಗೆ ಹದಿನಾರು ವರ್ಷ.  ಮನಸ್ಸಿನ ನೋವು ಹೇಳಿಕೊಳ್ಳಲು ಇದು ಸರಿಯಾದ ಸಮಯ. ಗಂಡ ಹೆಂಡತಿ ಚಿತ್ರದಲ್ಲಿ ಒಂದು ಕಿಸ್ ಸೀನ್ ಇಟ್ಟಿರ್ತಿವಿ ಅಂತ ಹೇಳಿದ್ರು. ಎರಡು ಕಾಲು ಲಕ್ಷ ಸಿಗುತ್ತೆ ಅಂತ ಒಪ್ಪಿಕೊಂಡೆ. ಮರ್ಡರ್ ಸಿನಿಮಾ ನೋಡಿ ಬೇಜಾರಾಗಿತ್ತು. ಈ ಸಿನಿಮಾ ಮಾಡಲು ನನಗೆ ಧೈರ್ಯ ಇಲ್ಲ ಅಂತ ಹೇಳಿದ್ದೆ. ನಮ್ಮ ನೆಟಿವಿಟಿಗೆ ಬದಲಾವಣೆ ಮಾಡಿಕೊಳ್ಳುತ್ತೇವೆ ಅಂತ ಹೇಳಿದ್ರು ಎಂದು ಸಂಜನಾ ಹೇಳಿದ್ದಾರೆ.

ಕನ್ನಡದ ಆರ್‌ಜೆಯೊಬ್ಬರು ಬಿಚ್ಚಿಟ್ರು #MeToo ಅನುಭವ

ನಿಮ್ಮನ್ನು ಮನೆ ಮಗು ತರ ನೋಡಿಕೊಳ್ಳುತ್ತೇವೆ ಎಂದು ನಿರ್ದೇಶಕ ಹೇಳಿದ್ರು. ಫಸ್ಟ್ ಡೇ ಶೂಟ್ ಚೆನ್ನಾಗಿತ್ತು.  ಮೂರನೇ ದಿನ ಅಮ್ಮನನ್ನು ಶೂಟಿಂಗ್‌ಗೆ ಬರುವುದಕ್ಕೆ ಬಿಡಲಿಲ್ಲ. ನಾಲ್ಕನೇ ದಿನ ಅಮ್ಮನನ್ನು ಹೋಟೆಲ್ ನಲ್ಲೇ ಬಿಟ್ಟರು. ಏನೇನೋ ಕಾರಣ ಹೇಳಿ ವಾಪಾಸ್ ಕಳಿಸೋಕೆ ಟ್ರೈ ಮಾಡಿದ್ರು ಎಂದು ಆರೋಪಿಸಿದ್ದಾರೆ. 

ಮೊದಲಿಗೆ ಒಂದೇ ಕಿಸ್ಸಿಂಗ್ ಸೀನ್ ಅಂತ ಹೇಳಿದ್ರು ಆಮೇಲೆ 50 ಕ್ಕೂ ಹೆಚ್ಚು ಕಿಸ್ಸಿಂಗ್ ಸೀನ್ ಮಾಡಿಸಿದ್ರು. ನಿನ್ನ ಕರಿಯರ್ ಚೆನ್ನಾಗಿರಬೇಕು ಅಂದ್ರೆ ಕಿಸ್ಸಿಂಗ್ ಸೀನ್ ಮಾಡು ಎಂದು  ನಿರ್ದೇಶಕರು ಒತ್ತಾಯಿಸಿದರು ಎಂದಿದ್ದಾರೆ.  

ಬ್ಯಾಕ್ ಲೆಸ್ ಸೀನ್ ಮಾಡುವಾಗಲೂ ಹಿಂಸೆ ಮಾಡಿದ್ರು.  ಚಿತ್ರೀಕರಣದ ಸಮಯದಲ್ಲಿ ಭಯ ಹುಟ್ಟಿಸೋ ವಾತಾವರಣ ಇತ್ತು ಎಂದು ಸಂಜನಾ ಆರೋಪಿಸಿದ್ದಾರೆ. 

Follow Us:
Download App:
  • android
  • ios