ಸ್ಯಾಂಡಲ್‌ವುಡ್‌ಗೂ ಕಾಲಿಟ್ಟ #MeToo ಬಿಸಿ | ಆರ್ ಜೆಯೊಬ್ಬರು ಬಿಚ್ಚಿಟ್ರು ಕಹಿ ಅನುಭವ |
ಬೆಂಗಳೂರು (ಅ. 15): #MeToo ಅಭಿಯಾನ ತೀವ್ರ ಸ್ವರೂಪ ಪಡೆಯುತ್ತಿದೆ. ಒಬ್ಬೊಬ್ಬರೇ ಅವರವರ ಅನುಭವವನ್ನು ಬಿಚ್ಚಿಡುತ್ತಿದ್ದಾರೆ. ತಮ್ಮ ಕಹಿ ಅನುಭವಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಬಿಗ್ ಬಾಸ್ ಸ್ಪರ್ಧಿ, ಆರ್ ಜೆ ನೇತ್ರಾ ಕೂಡಾ#MeToo ಗೆ ದನಿಗೂಡಿಸಿದ್ದಾರೆ. ತಮ್ಮ ಅನುಭವವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
‘ 2011 ರಲ್ಲಿ ನಡೆದ ಘಟನೆಯಿದು. ನಾವೊಂದಿಷ್ಟು ಜನ ಹುಡುಗಿಯರು ಕ್ರಿಸ್ ಮಸ್ ಪಾರ್ಟಿಯಲ್ಲಿ ಇದ್ವಿ. ಆಗ ಖ್ಯಾತ ನಟರೊಬ್ಬರು ಅಲ್ಲಿಗೆ ಬಂದ್ರು. ನಾವೆಲ್ಲಾ ವಿಶ್ ಮಾಡಿದ್ವಿ. ಅಲ್ಲಿರುವ ಹುಡುಗಿಯರನ್ನೆಲ್ಲಾ ಡ್ಯಾನ್ಸ್ ಮಾಡಲು ಕರೆದರು. ಕ್ಲೋಸ್ ಆಗಿ ಮೂವ್ ಮಾಡಲು ಯತ್ನಿಸಿದರು. ಆಗ ಗುಂಪಿನಲ್ಲಿದ್ದ ಹುಡುಗಿಯೊಬ್ಬಳಿಗೆ ಇರುಸು ಮುರುಸಾಗಿ ಹೊರ ಹೋಗಲು ಮುಂದಾದಾಗ ಅಲ್ಲೇ ಇರುವಂತೆ ಆ ನಟ ಒತ್ತಾಯಿಸಿದರು. ನಿನಗೆ ಇಲ್ಲಿ ಸರಿ ಹೋಗದಿದ್ದರೆ ನನ್ನ ರೂಮಿಗೆ ಹೋಗಬಹುದು ಎಂದು ಹೇಳಿದರು. ಇದನ್ನು ಲೈಂಗಿಕ ದೌರ್ಜನ್ಯ ಎಂದು ಹೇಳುವುದಾದರೆ ಇದೂ ಕೂಡಾ ಮೀಟೂ ’ ಎಂದಿದ್ದಾರೆ.
