1. ಅಂಡರ್‌ವಲ್ಡ್‌ರ್‍ನತ್ತ ಚಂದ್ರು: ಇಲ್ಲಿಯವರೆಗೂ ಸಾಫ್ಟ್‌ ಹಾಗೂ ಪ್ರೇಮ ಕತೆಯ ಚಿತ್ರಗಳನ್ನೇ ಮಾಡಿಕೊಂಡು ಬಂದ ಆರ್‌ ಚಂದ್ರು, ಈಗ ಅಂಡರ್‌ವಲ್ಡ್‌ರ್‍ ಕಡೆಗೆ ಮುಖ ಮಾಡಿದ್ದಾರೆ. ಭೂಗತ ಜಗತ್ತಿನ ಕತೆಯನ್ನು ಎತ್ತಿಕೊಂಡು ಈ ಸಿನಿಮಾ ಮಾಡುತ್ತಿದ್ದಾರೆ. ಇಲ್ಲಿನ ಉಪ್ಪಿ ಪಾತ್ರಕ್ಕೂ ಭಾರತದ ಭೂಗತ ದೊರೆಯೊಬ್ಬನಿಗೂ ತುಂಬಾ ಹೋಲಿಕೆ ಇದೆಯಂತೆ.

ಅಭಿಮಾನಿಗಳಿಗೆ ಬುದ್ಧಿವಂತನ ‘ಬುದ್ಧಿಮಾತು’!

2. ಏಳು ಭಾಷೆ, ದೊಡ್ಡ ತಾರಾಗಣ: ‘ಕಬ್ಜ’ ಚಿತ್ರವನ್ನು ಏಳು ಭಾಷೆಗಳಲ್ಲಿ ರೂಪಿಸುತ್ತಿದ್ದಾರೆ ನಿರ್ದೇಶಕರು. ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ, ಬೆಂಗಾಲಿ, ಮರಾಠಿ ಭಾಷೆಯಲ್ಲಿ ಈ ಸಿನಿಮಾ ಬರಲಿದೆ. ಆಯಾ ಭಾಷೆಯಲ್ಲಿ ಅಲ್ಲಿನ ದೊಡ್ಡ ನಿರ್ಮಾಣದ ಸಂಸ್ಥೆಗಳ ಜತೆಗೆ ಮೊದಲೇ ಚರ್ಚೆ ಮಾಡಿ ‘ಕಬ್ಜ’ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಮಾರುಕಟ್ಟೆಮಾಡುವ ಪ್ಲಾನ್‌ ನಿರ್ದೇಶಕರದ್ದು. ಇಂಥ ಚಿತ್ರದಲ್ಲಿ ಬಹುಭಾಷೆಯ ನಟ, ನಟಿಯರು ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ನಾಯಕಿ ಕೂಡ ಬಹುಭಾಷೆಯ ನಟಿ ಆಗಿರುತ್ತಾರೆ.

3. ಉಪ್ಪಿ ಜತೆ ಮತ್ತೊಬ್ಬ ಸ್ಟಾರ್‌: ಕಬ್ಜ ಚಿತ್ರದಲ್ಲಿ ಡಾನ್‌ ಪಾತ್ರ ಮಾಡುತ್ತಿರುವ ಉಪೇಂದ್ರ ಅವರ ಜತೆಗೆ ಮತ್ತೊಬ್ಬ ಕನ್ನಡದ ಸ್ಟಾರ್‌ ಹೀರೋ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ಚಿತ್ರದಿಂದ ಉಪೇಂದ್ರ ಅವರಿಗೆ ಹೊಸ ಇಮೇಜ್‌ ಸಿಗಲಿದೆ ಎಂಬುದಕ್ಕೆ ಕೈಯಲ್ಲಿ ಲಾಂಗು ಹಿಡಿದು ನಿಂತ ಉಪ್ಪಿ ಅವರ ರೆಟ್ರೋ ಸ್ಟೈಲೇ ಸಾಕ್ಷಿ.

ಪ್ರಿಯಾಂಕ ಉಪೇಂದ್ರಗಿಂತ ಪುತ್ರಿ ಐಶ್ವರ್ಯಾಗೇ ಫ್ಯಾನ್ಸ್‌ ಜಾಸ್ತಿ!

4. ಹೀರೋಗಳ ಅಭಿಮಾನಿಗಳೇ ಅತಿಥಿಗಳು: ಅಂದಹಾಗೆ ಕಬ್ಜ ಚಿತ್ರದ ಟೈಟಲ್‌ ಲಾಂಚ್‌ ಮಾಡಿದ್ದು, ಕನ್ನಡ ಚಿತ್ರರಂಗದ ಎಲ್ಲ ಹೀರೋಗಳ ಅಭಿಮಾನಿ ಸಂಘದ ಅಧ್ಯಕ್ಷರುಗಳು. ಹೀಗಾಗಿ ಹೀರೋಗಳ ಅಭಿಮಾನಿಗಳೇ ಟೈಟಲ್‌ ಲಾಂಚ್‌ ಕಾರ್ಯಕ್ರಮದ ಅತಿಥಿಗಳಾಗಿದ್ದರು.