ವಿಷ್ಣು ಅಭಿಮಾನಿಯ ಮೂಲಕ ವಿಷ್ಣುವರ್ಧನ್ ಅವರ ಆದರ್ಶಗಳನ್ನು ಹೇಳುವ ಚಿತ್ರವಂತೆ. ಆದರೂ ಇದು ನಾಲ್ಕು ಪ್ರೇಮ ಕತೆಗಳಿರುವ ಚಿತ್ರ ಎನ್ನುವುದು ಕುತೂಹಲದ ಸಂಗತಿ. ಹಾಗಾಗಿಯೇ ಇಲ್ಲಿ ಕಥಾ ನಾಯಕ ಗುರು ಜಗ್ಗೇಶ್ ಅವರಿಗ  ಇಲ್ಲಿ ಮೂವರು ನಾಯಕಿಯರಿದ್ದಾರೆ. ಅವರಲ್ಲಿ ಡಾ.ಜಾನ್ವಿ ಜ್ಯೋತಿ ಕೂಡ ಒಬ್ಬರು.

ಜಗ್ಗೇಶ್ ಹೇಳಿದ ಮಾತನ್ನು ಪ್ರೂವ್ ಮಾಡಿ ತೊಡೆ ತಟ್ಟಿದ ಡಿ-ಬಾಸ್!

ಈಗಾಗಲೇ ಅವರು ಸಾಕಷ್ಟು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರೂ, ನಟನೆಗೆ ಹೆಚ್ಚು ಅವಕಾಶ ಇರುವಂತಹ ಚಿತ್ರದಲ್ಲಿ ಇದೇ ಮೊದಲು ಕಾಣಿಸಿಕೊಳ್ಳುತ್ತಿದ್ದೇನೆ ಎನ್ನುವ ಖುಷಿಯಲ್ಲಿದ್ದಾರೆ. ಒಂದೆಡೆ ಕತೆ, ಮತ್ತೊಂದೆಡೆ ಪಾತ್ರವೇ ಅದಕ್ಕೆ ಕಾರಣ ಎನ್ನುತ್ತಾರೆ ಜಾನ್ವಿ ಜ್ಯೋತಿ.

ಚಿತ್ರ ವಿಮರ್ಶೆ: ಕೆಂಪೇಗೌಡ 2

‘ವಿಷ್ಣು ವರ್ಧನ್ ಅವರ ಆದರ್ಶಗಳನ್ನು ಹೇಳುವ ಸಿನಿಮಾ ಎನ್ನುವುದು ಒಂದೆಡೆ ಖುಷಿ ತಂದಿದ್ದರೆ, ಮತ್ತೊಂದೆಡೆ ನಟನೆಗೆ ಹೆಚ್ಚು ಅವಕಾಶ ಇರುವಂತಹ ಪಾತ್ರವೇ ಸಿಕ್ಕಿದೆ. ಚಿತ್ರದ ಮೊದಲಾರ್ಧ ಮತ್ತು ಕ್ಲೈಮ್ಯಾಕ್ಸ್ ನಲ್ಲಿ ಕಾಣಿಸಿಕೊಳ್ಳಲು ಹೆಚ್ಚು ಜಾಗ ಸಿಕ್ಕಿದೆ. ಗುರಿ ಸಾಧನೆಯೇ ಮುಖ್ಯ, ಆಮೇಲೆ ವೈಯಕ್ತಿಕ ಬದುಕು ಎನ್ನುವ ಸ್ವಭಾವದವಳು ಆ ಹುಡುಗಿ. ನಾಯಕ ಸಹವಾಸದಲ್ಲಿ ಆಕೆ ಪ್ರೀತಿಯಲ್ಲಿ ಬೀಳುತ್ತಾಳೆನ್ನುವುದು ನಿಜ, ಆದರೆ ಆಕೆಗೆ ವೈಯಕ್ತಿಕ ಬದುಕಿಗಿಂತ ಗುರಿ ಸಾಧನೆಯೇ ಮುಖ್ಯವಾದಾಗ, ಆಕೆ ಆ ಪ್ರೀತಿಯನ್ನು ಏನು ಮಾಡುತ್ತಾಳೆ ಎನ್ನುವುದು ಚಿತ್ರದಲ್ಲಿನ ನನ್ನ ಪಾತ್ರದ ಸಸ್ಪೆನ್ಸ್ ಎಳೆ’ ಎನ್ನುತ್ತಾರೆ ಜಾನ್ವಿ.