ಜಗ್ಗೇಶ್ ಹೇಳಿದ ಮಾತನ್ನು ಪ್ರೂವ್ ಮಾಡಿ ತೊಡೆ ತಟ್ಟಿದ ಡಿ-ಬಾಸ್!
' ಮುನಿರತ್ನ ಕುರುಕ್ಷೇತ್ರ' ಚಿತ್ರದ ಬಗ್ಗೆ ಸುವರ್ಣ ನ್ಯೂಸ್ ವಾಹಿನಿಯಲ್ಲಿ ನಟ ಜಗ್ಗೇಶ್ ಹೇಳಿದ ಮಾತನ್ನು ಸಾಧಿಸಿ ತೋರಿಸಿದ ದರ್ಶನ್ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್!
ಬಾಕ್ಸ್ ಆಫೀಸ್ ಸುಲ್ತಾನ್ ಅಂದ್ರೆ ಸುಮ್ನೆನಾ? ಯಾರಿಂದಲೂ ಹೇಳಿಸಿಕೊಳ್ಳದೇ ಕೆಲಸ ಮಾಡಿ ತೋರಿಸುತ್ತಾರೆ. ಇನ್ನು ಚಿತ್ರರಂಗದ ಗೌರವಾನ್ವಿತ ನಟ ಜಗ್ಗೇಶ್ ಹೇಳಿದ್ದನ್ನು ಮಿಸ್ ಮಾಡುವ ಚಾನ್ಸೇ ಇಲ್ಲ!
ರಾಜ್ಯದಾದ್ಯಂತ ಹಾಗೂ ದೇಶದಾದ್ಯಂತ ಅದ್ಧೂರಿ ಪ್ರದರ್ಶನ ಕಾಣುತ್ತಿರುವ ಚಿತ್ರ ಕುರುಕ್ಷೇತ್ರ. ಈಗಾಗಲೇ ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಬಾಚಿಕೊಳ್ಳುತ್ತಿದೆ. ಸುವರ್ಣ ನ್ಯೂಸ್‌ನಲ್ಲಿ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಜಗ್ಗೇಶ್, ದರ್ಶನ್ ಗೆ ಬಾಲಿವುಡ್ ಸಲ್ಮಾನ್ ಖಾನ್ ಮೀರಿಸುವಷ್ಟು ಸಾಮರ್ಥ್ಯವಿದೆ ಎಂದಿದ್ದಾರೆ.
'ಇವತ್ತು ದರ್ಶನ್ ಹಾಕಿಕೊಂಡು ಸಿನಿಮಾ ಮಾಡಿದ್ರೆ ಯಾವ ಸಲ್ಮಾನ್ ಖಾನ್ ಯಾವ ಲೆಕ್ಕ? ಕನ್ನಡದಲ್ಲಿ ಅವನು ಸಲ್ಮಾನ್ ರೇಂಜ್‌ಗೆ 100 ಕೋಟಿ ಕ್ಲಬ್‌ಗೆ ಹೋಗುತ್ತಾನೆ' ಎಂದು ಹೇಳಿದ್ದರು.
ಈ ವಿಡಿಯೋವನ್ನು ದರ್ಶನ್ ಅಭಿಮಾನಿಗಳ ಪೇಜ್ ಶೇರ್ ಮಾಡಿದ್ದು ಅದಕ್ಕೆ ' ನನ್ನ ಆನಂದಕ್ಕೆ ಪಾರವೇ ಇಲ್ಲ! ಅನ್ಯರಾಜ್ಯದವರ ಆರ್ಭಟ ನೋಡಿ ನೋಡಿ ಸಾಕಾಗಿ ಮನಸ್ಸಿನಲ್ಲಿ ಬಬ್ಬನೇ ನೋವು ನುಂಗಿ ಬದುಕುತ್ತಿದ್ದೆ! ಬಾರಿಸಲಿ. ನಮ್ಮ ಹುಡುಗರು ಕನ್ನಡ ಡಿಂಡಿಮವ! ನಮ್ಮ ಹೆಮ್ಮೆಯ ಕನ್ನಡ, ಕನ್ನಡಿಗರು ಕನ್ನಡ ಚಿತ್ರರಂಗ ರಾಯರ ದಯೆಯಿಂದ ಹೀಗೆ ಕನ್ನಡತನವನ್ನು ರಾಷ್ಟ್ರಮಟ್ಟದಲ್ಲಿ ಮೆರೆಸಲಿ ಎಂದು ಆಶಿಸುವೆ...ಶುಭಮಸ್ತು ' ಎಂದು ರೀ-ಟ್ಟಿಟ್ ಮಾಡಿ ಬರೆದುಕೊಂಡಿದ್ದರು.
ಜಗ್ಗೇಶ್ ವಿಡಿಯೋ ಹಾಗೂ ಟ್ಟಿಟ್‌ಗೆ ದರ್ಶನ್ 'ಹೃದಯಪೂರ್ವಕ ಧನ್ಯವಾದಗಳು ಅಣ್ಣ' ಎಂದು ರಿಪ್ಲೈ ಮಾಡಿದ್ದಾರೆ.