ಈಗ ಮಲ್ಟಿಲಾಗ್ವೇಜ್ ಟ್ರೆಂಡ್ ಜೋರಾಗಿ ನಡೆಯುತ್ತಿದೆ. ದೊಡ್ಡ ದೊಡ್ಡ ಸ್ಟಾರ್ ನಟರ ಚಿತ್ರಗಳೇ ಎಲ್ಲ ಭಾಷೆಗಳಲ್ಲೂ ಬರುತ್ತಿವೆ. ಸಿನಿಮಾ ಬಿಡುಗಡೆಗೂ ಮುನ್ನವೇ ಬರುವ ಟೀಸರ್, ಟ್ರೇಲರ್ ಕೂಡ ಕನ್ನಡದಲ್ಲೇ ಬರುತ್ತಿದೆ. ಆ ಸಾಲಿಗೆ ಈಗ ‘ಸೈರಾ’ ಚಿತ್ರ ಸೇರಿಕೊಂಡಿದ್ದು, ಮೊಟ್ಟಮೊದಲ ಬಾರಿಗೆ ಮೆಗಸ್ಟಾರ್ ಚಿರಂಜೀವಿ ಅಭಿನಯದ ಚಿತ್ರವೊಂದು ಕನ್ನಡದಲ್ಲಿ ಸದ್ದು ಮಾಡುವುದಕ್ಕೆ ಹೊರಟಿದೆ.
ಸದ್ಯಕ್ಕೆ ‘ಸೈರಾ’ ಚಿತ್ರದ ಟೀಸರ್ ಕನ್ನಡದಲ್ಲೂ ಬಿಡುಗಡೆಯಾಗಿದ್ದು, ಚಿತ್ರದಲ್ಲಿ ನಟಿಸಿರುವ ಬಹುತೇಕ ಎಲ್ಲ ಪಾತ್ರದಾರಿಗಳು ಟೀಸರ್‌ನಲ್ಲಿ ಬರುತ್ತಾರೆ. ಕನ್ನಡದಿಂದ ಸುದೀಪ್, ತಮಿಳಿನಿಂದ ವಿಜಯ್ ಸೇತುಪತಿ, ಬಾಲಿವುಡ್‌ನಿಂದ ಅಮಿತಾಬ್ ಬಚ್ಚನ್, ತಮ್ಮನ್ನಾ, ನಯನತಾರಾ ಹೀಗೆ ಎಲ್ಲ ಕಲಾವಿದರು ಒಟ್ಟಿಗೆ ಕಾಣಿಸಿಕೊಂಡಿರುವುದು ಈ ಟೀಸರ್‌ನ ವಿಶೇಷತೆ. ಅಂದಹಾಗೆ ಈ ಚಿತ್ರದ ಟೀಸರ್‌ಗೆ ಕನ್ನಡದಲ್ಲಿ ಯಶ್ ವಾಯ್ಸ್ ಕೊಡುತ್ತಾರೆಂಬುದು ಸುದ್ದಿ ಹಬ್ಬಿತು. ಆದರೆ, ಅದು ಸುಳ್ಳು. ಇಲ್ಲಿ ಯಶ್ ವಾಯ್ಸ್ ಹೊರತಾಗಿ ಬೇರೆಯವರ ಧ್ವನಿಯಲ್ಲಿ ಟೀಸರ್ ಬಂದಿದೆ.
‘ಸೈರಾ ನರಸಿಂಹ ರೆಡ್ಡಿ’ಯಲ್ಲಿ ಸುದೀಪ್ ಪಾತ್ರ ರಿವೀಲ್!
ಇನ್ನೂ ಟೀಸರ್‌ನಲ್ಲಿ ತೋರಿಸಿರುವಂತೆ ನಟ ಸುದೀಪ್ ಅವರದ್ದು ಈ ಚಿತ್ರದಲ್ಲಿ ಬುಡಕಟ್ಟು ಸಮುದಾಯದವರ ನಾಯಕನ ಪಾತ್ರ ಮಾಡುತ್ತಿದ್ದಾರೆ. ವಿಜಯ್ ಸೇತುಪತಿ ಕೂಡ ಆದಿವಾಸಿ ಜನಾಂಗದ ವೀರನಾಗಿ ಕಾಣಿಸಿಕೊಂಡಿದ್ದಾರೆ. ಇವರೆಲ್ಲ ಚಿತ್ರದ ನಾಯಕ ಉಯ್ಯಲವಾಡ ನರಸಿಂಹ ರೆಡ್ಡಿ ಪಾತ್ರದಾರಿ ಚಿರಂಜೀವಿ ಅವರಿಗೆ ಹೇಗೆ ಬೆಂಬಲವಾಗಿ ನಿಲುತ್ತಾರೆ, ಬ್ರಿಟಿಷರ ವಿರುದ್ಧದ ಹೋರಾಟದ ನರಸಿಂಹ ರೆಡ್ಡಿ ಹೇಗೆ ತೊಡಗುತ್ತಾರೆ ಎಂಬುದು ಇಡೀ ಚಿತ್ರದ ಕತೆ. ನಿರ್ದೇಶಕ ಸುರೇಂದ್ರ ರೆಡ್ಡಿ ದೊಡ್ಡ ಮಟ್ಟದಲ್ಲೇ ಚಿತ್ರದ ಪ್ರತಿ ದೃಶ್ಯವನ್ನು ರೂಪಿಸಿದ್ದಾರೆ. ಇನ್ನೂ ಈ ಚಿತ್ರವನ್ನು ನಿರ್ಮಿಸಿರುವುದು ಮೆಗಸ್ಟಾರ್ ಪುತ್ರ ರಾಮ್ ಚರಣ್ ತೇಜ.
ತೆಲುಗು, ತಮಿಳು ಚಿತ್ರಗಳು ಕನ್ನಡಕ್ಕೆ ಡಬ್ ಆಗಿ ಬಂದಿದ್ದಾಯಿತು. ಸೈರಾ ನರಸಿಂಹರೆಡ್ಡಿ ಚಿತ್ರದ ಟ್ರೇಲರ್ ಕೂಡ ಕನ್ನಡದಲ್ಲೇ ಬಂದಿದೆ. ಇದೀಗ ಬಿಗ್‌ಬಾಸ್ ಬಾಲಿವುಡ್ ಕೂಡ ಕನ್ನಡಕ್ಕೆ ಡಬ್ ಮಾಡಿದ ಹಿಂದಿ ಸಿನಿಮಾವನ್ನು ಬಿಡುಗಡೆ ಮಾಡುವ ನಿರ್ಧಾರ ಕೈಗೊಂಡಿದೆ.
ರವಿಮಾಮನಿಗೆ ಕಿಚ್ಚ ಸುದೀಪ್ ಸಲಹೆ; ಕೇಳ್ತಾರಾ ಕನಸುಗಾರ?
ಈ ಕುರಿತು ಚುಲ್‌ಬುಲ್ ಪಾಂಡೆ ಮೂರು ಭಾಷೆಗಳಲ್ಲೂ ಬರಲಿದ್ದಾನೆ ಎಂದು ಟ್ವೀಟ್ ಮಾಡಿರುವ ಸಲ್ಮಾನ್ ಖಾನ್ ತಮ್ಮ ಮುಂದಿನ ಚಿತ್ರ ದಬಾಂಗ್ 3 ಹಿಂದಿಯ ಜೊತೆಗೇ ತೆಲುಗು, ತಮಿಳು ಮತ್ತು ಕನ್ನಡದಲ್ಲೂ ತೆರೆಕಾಣಲಿದೆ ಎಂದಿದ್ದಾರೆ. ಅಲ್ಲಿಗೆ ಕನ್ನಡ ಮಾರುಕಟ್ಟೆಗೆ ಹಿಂದಿಯಿಂದ ಡಬ್ ಆಗಿರುವ ಸಿನಿಮಾ ಅಧಿಕೃತವಾಗಿ ಕಾಲಿಟ್ಟಂತಾಯಿತು. ಡಬ್ಬಿಂಗ್ ಕುರಿತ ಕನ್ನಡ ಚಿತ್ರರಂಗದ ನಿಲುವು ಕೂಡ ಸ್ಪಷ್ಟವಾದಂತಾಯಿತು.
ಡಿಸೆಂಬರ್ 20ರಂದು ದಬಾಂಗ್ 3 ತೆರೆಕಾಣಲಿದೆ. ಕರ್ನಾಟಕದಲ್ಲಿ ಕನ್ನಡದಲ್ಲೇ ಚಿತ್ರ ತೆರೆಕಾಣಲಿದೆ. ಸೋನಾಕ್ಷಿ ಸಿನ್ಹಾ ನಾಯಕಿಯಾಗಿರುವ ಈ ಚಿತ್ರವನ್ನು ಪ್ರಭುದೇವ ನಿರ್ದೇಶಿಸಿದ್ದಾರೆ. ಸುದೀಪ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಮೆಗಾಸ್ಟಾರ್ ಸಿನಿಮಾದಲ್ಲಿ ಸುದೀಪ್‌ಗೆ ಸಿಕ್ತು ಯಾರಿಗೂ ಸಿಗದ ಹೆಸರು!
ಸುದೀಪ್ ನಟಿಸಿರುವ ಸೈರಾ ನರಸಿಂಹ ರೆಡ್ಡಿ ಕೂಡ ಕನ್ನಡದಲ್ಲೇ ಟ್ರೇಲರ್ ರಿಲೀಸ್ ಮಾಡಿರುವ ಬೆನ್ನಿಗೇ, ದಬಾಂಗ್ 3 ಕನ್ನಡಕ್ಕೆ ಬರುವ ಸುದ್ದಿ ಬಂದಿದೆ.
