ಬೆಂಗಳೂರು (ಡಿ. 05): ಸೋಷಿಯಲ್ ಮೀಡಿಯಾದಲ್ಲಿ ಪ್ರೊಫೈಲ್ ಬದಲಾಯಿಸುವುದು, ಹೆಸರು ಬದಲಾಯಿಸುವುದು ಇವೆಲ್ಲಾ ಮಾಮೂಲು. ಜನಸಾಮಾನ್ಯರು ಹೀಗೆಲ್ಲಾ ಮಾಡಿದಾಗ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಅದನ್ನೇ ಸೆಲಬ್ರಿಟಿಗಳು ಮಾಡಿದರೆ ಸುದ್ದಿಯಾಗುತ್ತದೆ. 

ಯಶ್ ಓಡ್ಸೋ ಬೈಕ್ ಯಾವುದು ಗೊತ್ತಾ?

ಕೆಜಿಎಫ್ ಸಿನಿಮಾ ಹವಾದಿಂದ ರಾಕಿಂಗ್ ಸ್ಟಾರ್ ಯಶ್ ರಾಷ್ಟ್ರಮಟ್ಟದಲ್ಲಿ ಸುದ್ದಿಯಲ್ಲಿದ್ದಾರೆ. ಇವರ ಸಿನಿಮಾ ಸದ್ದು ಮಾಡುತ್ತಿದೆ. ಕನ್ನಡಿಗರು ಹೆಮ್ಮೆ ಪಡುವಂತೆ ಮಾಡಿದ್ದಾರೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಒಳಪಟ್ಟಿದ್ದಾರೆ. 

ಯಶ್ ರಾಧಿಕಾ ಮನೆಗೆ ಲಕ್ಷ್ಮಿಯ ಆಗಮನ: ಹೆಣ್ಮಗುವಿನ ತಂದೆಯಾದ 'ರಾಕಿಂಗ್ ಸ್ಟಾರ್'

ಯಶ್ ಟ್ವಿಟರ್ ಹ್ಯಾಂಡಲ್ ನಲ್ಲಿ ನಿಮ್ಮ ಯಶ್ (Nimma Yash) ಎಂದಿತ್ತು. ಇದು ಒಂದು ರೀತಿ ಆಪ್ತ ಭಾವ ನೀಡುತ್ತಿತ್ತು. ನಮ್ಮನೆ ಹುಡುಗ ಎನ್ನುವ ರೀತಿ ಇತ್ತು. ಆದರೆ ಅದನ್ನು ದಿ ನೇಮ್ ಈಸ್ ಯಶ್ (TheNameIsYash) ಎಂದು ಬದಲಾಯಿಸಿಕೊಂಡಿದ್ದಾರೆ. ಇದು ಟ್ವೀಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಪರ- ವಿರೋಧ ಚರ್ಚೆಗೆ ಕಾರಣವಾಗಿದೆ. ಕೆಲವರು ಬೆಂಬಲಿಸಿದರೆ ಇನ್ನು ಕೆಲವರು ವಿರೋಧಿಸಿದ್ದಾರೆ. ಆದರೆ ಯಶ್ ಯಾವುದಕ್ಕೂ ಪ್ರತಿಕ್ರಿಯಿಸಿಲ್ಲ.