ಮಗುವಿನ ನಿರೀಕ್ಷೆಯಲ್ಲಿದ್ದ ಸ್ಯಾಂಡಲ್‌ವುಡ್‌ನ ರಾಕಿಂಗ್ ದಂಪತಿ ಯಶ್ ಹಾಗೂ ರಾಧಿಕಾ ಮನೆಗೆ ಪುಟ್ಟ ಲಕ್ಷ್ಮಿಯ ಆಗಮನವಾಗಿದೆ.

ಸ್ಯಾಂಡಲ್‌ವುಡ್‌ ಸ್ಟಾರ್ಸ್‌ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಮನೆಗೆ ಹೆಣ್ಮಗುವಿನ ಆಗಮನವಾಗಿದೆ. ಡಿಸೆಂಬರ್‌ನಲ್ಲಿ ನಾನು ತಂದೆಯಾಗಲಿದ್ದೇನೆ ಎಂದು ವಿಡಿಯೋ ಮೂಲಕ ಸಿಹಿ ಸುದ್ದಿ ನೀಡಿದ್ದ ಯಶ್ ಬಾಳಿಗೆ ಪುಟ್ಟ ಲಕ್ಷ್ಮಿ ಎಂಟ್ರಿ ನೀಡಿದ್ದಾರೆ.

View post on Instagram

ಇದನ್ನೂ ಓದಿ:ಸೀಮಂತದಲ್ಲಿ ಯಶ್-ರಾಧಿಕಾ ಕಂಡಿದ್ದು ಹೀಗೆ

ಇಂದು ಬೆಳಗ್ಗೆ ಸುಮಾರು 06.20ಕ್ಕೆ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯಲ್ಲಿ ರಾಧಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ನಿನ್ನೆ ರಾತ್ರಿಯಷ್ಟೇ ಯಶ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಫೋಟೋ ಒಂದನ್ನು ಹಾಕಿ ತನಗೆ ಹೆಣ್ಮಗುವೇ ಇಷ್ಟ ಎಂದು ತಿಳಿಸಿದ್ದರು. ಇದೀಗ ಅವರ ನಿರೀಕ್ಷೆಯಂತೆ ಪುಟ್ಟ ಭಾಗ್ಯ ಲಕ್ಷ್ಮಿಯ ಆಗಮನವಾಗಿದೆ.

ಇದನ್ನೂ ಓದಿ: ರಾಧಿಕಾ ಪಂಡಿತ್ ಸೀಮಂತ ಹೇಗಿತ್ತು ಗೊತ್ತಾ?

View post on Instagram

ಸದ್ಯ ಆಸ್ಪತ್ರೆಯಲ್ಲಿರುವ ತಾಯಿ ರಾಧಿಕಾ ಹಾಗೂ ಮಗು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳಿಂದ ತಿಳಿದು ಬಂದಿದೆ. ಯಶ್ ಕುಟುಂಬಸ್ಥರೂ ಪುಟ್ಟ ಕಂದಮ್ಮನ ಆಗಮನದಿಂದ ಫುಲ್ ಖುಷಿಯಾಗಿದ್ದಾರೆ. ಇನ್ನು ಇದೇ ತಿಂಗಳ 21 ರಂದು ಯಶ್ ನಟನೆಯ ಬಹುನಿರೀಕ್ಷಿತ ಕೆಜಿಎಫ್ ಚಿತ್ರ ರಿಲೀಸ್ ಆಗುತ್ತಿದೆ.