ಬೆಂಗಳೂರು (ಜ. 01): ರಿಷಬ್ ಶೆಟ್ಟಿ- ಹರಿಪ್ರಿಯಾ ಚಿತ್ರ ಬೆಲ್ ಬಾಟಂ ಬಿಡುಗಡೆಗೂ ಮುನ್ನವೇ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. 

ಯೋಗರಾಜ್‌ ಭಟ್ರು, ’ಬೆಲ್‌ ಬಾಟಂ’, ಮರಕುಟುಕ ಗೆಟಪ್ಪು, ಏನಿದು ಹೊಸ ಲುಕ್?

ರಿಷಬ್ ಶೆಟ್ಟಿ ಚಿತ್ರ ಎಂದರೆ ಏನಾದರೂ ಸ್ಪೆಷಾಲಿಟಿ ಇದ್ದೇ ಇರುತ್ತದೆ. ಚಿತ್ರದಲ್ಲಿ ಹೊಸತನ ಇರುತ್ತದೆ. ಈಗಾಗಲೇ ರೆಟ್ರೋ ಲುಕ್ ನಲ್ಲಿ ಕಾಣಿಸಿಕೊಂಡು ಚಿತ್ರದ ಬಗ್ಗೆ ಕ್ಯೂರಿಯಾಸಿಟಿ ಮೂಡಿಸಿದ್ದಾರೆ. ಈ ಚಿತ್ರದ ಬಗ್ಗೆ ಇನ್ನೊಂದು ಖುಷಿ ವಿಚಾರ ಎಂದರೆ ಈ ಚಿತ್ರ ರಿಮೇಕ್ ಹಕ್ಕು ತಮಿಳಿಗೆ ಮಾರಾಟವಾಗಿದೆ. 

ಬೆಲ್ ಬಾಟಮ್ ಚಿತ್ರದಲ್ಲಿ ಹರಿಪ್ರಿಯಾ ಗೂಢಚಾರಿಣಿ!

ಜಯತೀರ್ಥ ನಿರ್ದೇಶನ ಹಾಗೂ ರಿಷಬ್ ಶೆಟ್ಟಿ ಅಭಿನಯದ ‘ಬೆಲ್ ಬಾಟಮ್’ ಚಿತ್ರದಲ್ಲಿ ಹರಿಪ್ರಿಯಾ ಗೂಢಚಾರಿಣಿಯ ಪಾತ್ರ ಮಾಡುತ್ತಿದ್ದಾರೆ ಎನ್ನಲಾಗಿದೆ. 

ಹರಿಪ್ರಿಯಾಗೆ ಚಿತ್ರದಲ್ಲಿ ಒಂದಲ್ಲ ನಾಲ್ಕು ಹೆಸರುಗಳಿವೆ. ಚಿತ್ರದಲ್ಲಿ ಕುಸುಮಾ ಅಷ್ಟೇ ಅಲ್ಲ, ಮೇರಿ ಥಾಮಸ್, ಗೀತಾ ಹಾಗೂ ಯಶೋಧಾ ಎಂಬ ನಾನಾ ಪಾತ್ರ ಮಾಡುತ್ತಿದ್ದಾರೆ.