ಪವನ್ ಕಲ್ಯಾಣ್ ಅವರಿಂದ ವಿಚ್ಛೇದನ ಪಡೆದ ನಂತರ ರೇಣು ದೇಸಾಯಿ ಒಂಟಿಯಾಗಿಯೇ ಬದುಕು ಸಾಗಿಸುತ್ತಿದ್ದಾರೆ. 2ನೇ ಮದುವೆಯಿಂದ ದೂರ ಉಳಿದಿರುವ ಅವರು, ಸದ್ಯ ಸಿನಿಮಾಗಳಲ್ಲಿ ನಟಿಸದಿದ್ದರೂ ಕೋಟ್ಯಂತರ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ. ಇದು ಹೇಗೆ ಸಾಧ್ಯ? ಈ ಬಗ್ಗೆ ತಿಳಿದರೆ ನೀವು ಆಶ್ಚರ್ಯ ಪಡೋದು ಗ್ಯಾರಂಟಿ.

ಪವನ್ ಕಲ್ಯಾಣ್ ಜೊತೆ ಮದುವೆಯಾದ ನಂತರ ರೇಣು ದೇಸಾಯಿ ಸಿನಿಮಾಗಳಿಂದ ದೂರ ಉಳಿದಿದ್ದರು. ನಟನೆಯನ್ನು ಸಂಪೂರ್ಣವಾಗಿ ಬಿಟ್ಟಿದ್ದರು. ಹಲವು ವರ್ಷಗಳ ನಂತರ, ಇತ್ತೀಚೆಗೆ 'ಟೈಗರ್ ನಾಗೇಶ್ವರ ರಾವ್' ಚಿತ್ರದಲ್ಲಿ ನಟಿಸಿದರೂ, ಅವರಿಗೆ ಅಷ್ಟಾಗಿ ಹೆಸರು ಬರಲಿಲ್ಲ. ಈಗ ಮತ್ತೆ ಅವರು ಕಮ್‌ಬ್ಯಾಕ್ ಮಾಡುತ್ತಿದ್ದು, ಸದ್ಯ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಇಷ್ಟು ವರ್ಷ ಸಿನಿಮಾ ಮಾಡದಿದ್ದರೂ ರೇಣು ದೇಸಾಯಿ ತಮ್ಮ ಕುಟುಂಬವನ್ನು ಹೇಗೆ ನಿಭಾಯಿಸುತ್ತಿದ್ದಾರೆ? ಅವರು ಕೋಟಿ ಕೋಟಿ ಗಳಿಸುವುದು ಹೇಗೆ? ಈ ಬಗ್ಗೆ ರೇಣು ದೇಸಾಯಿ ಅವರೇ ಮಾತನಾಡಿದ್ದು, ತಾವು ಮದುವೆಗೂ ಮುನ್ನವೇ ಶ್ರೀಮಂತೆ ಎಂದು ಹೇಳಿಕೊಂಡಿದ್ದಾರೆ.

Add Asianetnews Kannada as a Preferred SourcegooglePreferred

ರೇಣು ದೇಸಾಯಿ ನಮಗೆಲ್ಲಾ 'ಬದ್ರಿ' ಸಿನಿಮಾ ಮೂಲಕವೇ ಪರಿಚಿತರು. ಈ ಚಿತ್ರದ ಮೂಲಕ ಅವರು ಟಾಲಿವುಡ್‌ಗೆ ನಾಯಕಿಯಾಗಿ ಎಂಟ್ರಿ ಕೊಟ್ಟರು. ರಾಮಾನಾಯ್ಡು ಸ್ಟುಡಿಯೋದಲ್ಲಿ ನಿರ್ದೇಶಕ ಪುರಿ ಜಗನ್ನಾಥ್ ಅವರು ರೇಣು ಅವರನ್ನು ಪವನ್ ಕಲ್ಯಾಣ್‌ಗೆ ಪರಿಚಯಿಸಿದ್ದರು. ಮೊದಲ ನೋಟದಲ್ಲೇ ರೇಣು, ಪವನ್ ನೋಡಿ ಫಿದಾ ಆಗಿದ್ದರಂತೆ. ನಂತರ ಇಬ್ಬರೂ ಪ್ರೀತಿಸಿ ಮದುವೆಯಾದರು. ಇವರಿಗೆ ಅಕಿರಾ ನಂದನ್ ಮತ್ತು ಆಧ್ಯ ಎಂಬ ಇಬ್ಬರು ಮಕ್ಕಳಿದ್ದಾರೆ. 2012ರಲ್ಲಿ ಇಬ್ಬರೂ ವಿಚ್ಛೇದನ ಪಡೆದರು. ಜೀವನಾಂಶವಾಗಿ ಪವನ್ ಕಲ್ಯಾಣ್ 40 ಕೋಟಿಗೂ ಹೆಚ್ಚು ಹಣ ನೀಡಿದ್ದಾರೆ ಎಂಬ ವದಂತಿ ಇತ್ತು. ಆದರೆ, ತಾನು ಒಂದು ರೂಪಾಯಿಯನ್ನೂ ತೆಗೆದುಕೊಂಡಿಲ್ಲ ಎಂದು ರೇಣು ದೇಸಾಯಿ ಹಲವು ಸಂದರ್ಶನಗಳಲ್ಲಿ ಸ್ಪಷ್ಟಪಡಿಸಿದ್ದಾರೆ.

ಹಾಗಾದರೆ, ಜೀವನಾಂಶ ಪಡೆಯದೆ, ಸಿನಿಮಾ ಮಾಡದೆ ರೇಣು ದೇಸಾಯಿ ಕುಟುಂಬವನ್ನು ಹೇಗೆ ನಿಭಾಯಿಸುತ್ತಿದ್ದಾರೆ? ಕೋಟ್ಯಂತರ ರೂಪಾಯಿ ಹೇಗೆ ಸಂಪಾದಿಸುತ್ತಿದ್ದಾರೆ? ಈ ಕುತೂಹಲಕಾರಿ ವಿಷಯಗಳನ್ನು ರೇಣು ದೇಸಾಯಿ ಅವರೇ ಬಹಿರಂಗಪಡಿಸಿದ್ದಾರೆ. ಅವರದ್ದು ತುಂಬಾ ಶ್ರೀಮಂತ ಕುಟುಂಬವಾಗಿತ್ತಂತೆ. ಅವರ ತಾತನ ಕಾಲದಲ್ಲಿ ಏಳೆಂಟು ಅರಮನೆಯಂತಹ ಕಟ್ಟಡಗಳಿದ್ದವಂತೆ. ಆದರೆ ನಂತರ ಎಲ್ಲವನ್ನೂ ಕಳೆದುಕೊಂಡರು. ಮದುವೆಗೂ ಮುನ್ನವೇ ಅವರ ಕುಟುಂಬ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿತ್ತು. ಚಿಕ್ಕಂದಿನಿಂದಲೇ ರೇಣು ದೇಸಾಯಿಗೆ ಈ ಬ್ಯುಸಿನೆಸ್‌ನಲ್ಲಿ ಹಿಡಿತವಿತ್ತು. ತಾನೊಬ್ಬಳು ಉತ್ತಮ ಉದ್ಯಮಿ ಎಂದು ಅವರು ಹೇಳುತ್ತಾರೆ. ಇದೇ ಈಗ ಅವರ ಪ್ರಮುಖ ಆದಾಯದ ಮೂಲವಾಗಿದೆ.

ರೇಣು ಅವರ ಟ್ಯಾಲೆಂಟ್‌ಗೆ ಫಿದಾ ಆಗಲೇಬೇಕು

ರಿಯಲ್ ಎಸ್ಟೇಟ್ ಜೊತೆಗೆ ರೇಣು ದೇಸಾಯಿ ಸ್ಟಾಕ್ ಮಾರ್ಕೆಟ್‌ಗೂ ಎಂಟ್ರಿ ಕೊಟ್ಟಿದ್ದಾರೆ. ತಾವು ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡುವುದಾಗಿಯೂ, ಅದರಲ್ಲೂ ತಮಗೆ ಉತ್ತಮ ಹಿಡಿತವಿದೆ ಎಂದು ಹೇಳಿದ್ದಾರೆ. ಇವುಗಳ ಜೊತೆಗೆ ಕೆಲವು ಸಣ್ಣಪುಟ್ಟ ಬೇರೆ ವ್ಯವಹಾರಗಳೂ ಇವೆಯಂತೆ. ಈ ಮೂಲಕ ತಮಗೆ ಆದಾಯ ಬರುತ್ತಿದೆ, ಆ ವಿಷಯದಲ್ಲಿ ಯಾವುದೇ ಸಮಸ್ಯೆಯಿಲ್ಲ ಎಂದಿದ್ದಾರೆ. ತಮ್ಮ ಪೂರ್ವಜರ ಆಸ್ತಿ ಉಳಿದಿದ್ದರೆ, ಇಂದು ತಮ್ಮ ಸ್ಥಿತಿಯೇ ಬೇರೆ ಇರುತ್ತಿತ್ತು ಎಂದು ರೇಣು ಹೇಳಿದ್ದಾರೆ. ಒಟ್ಟಿನಲ್ಲಿ, ಸಿನಿಮಾ ಮಾಡದಿದ್ದರೂ ರಿಯಲ್ ಎಸ್ಟೇಟ್ ಮತ್ತು ಸ್ಟಾಕ್ ಮಾರ್ಕೆಟ್ ಮೂಲಕ ರೇಣು ದೇಸಾಯಿ ಕೋಟ್ಯಂತರ ರೂಪಾಯಿ ಸಂಪಾದಿಸುತ್ತಿದ್ದಾರೆ.