ಸಾಲು ಸಾಲು ಹಿಟ್ ಚಿತ್ರಗಳ ಮೂಲಕ ಸೂಪರ್‌ಸ್ಟಾರ್ ಪಟ್ಟಕ್ಕೇರಿರುವ ರಣವೀರ್ ಸಿಂಗ್ ಅವರ ಮುಂದಿನ ಪ್ರಾಜೆಕ್ಟ್ ಯಾವುದು ಅನ್ನೋ ಕುತೂಹಲ ಎಲ್ಲರಲ್ಲೂ ಇತ್ತು. ಕೆಲವು ತಿಂಗಳ ಹಿಂದೆ ಅವರು 'ಪ್ರಳಯ್' ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

'ಧುರಂಧರ್' ಸಿನಿಮಾ ಮೂಲಕ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ ನಟ ರಣವೀರ್ ಸಿಂಗ್ ಬಗ್ಗೆ ಒಂದು ಬಿಸಿ ಬಿಸಿ ಸುದ್ದಿ ಬಂದಿದೆ. ವರದಿಗಳ ಪ್ರಕಾರ, ರಣವೀರ್‌ಗೆ ಒಂದು ಹೊಸ ಸಿನಿಮಾ ಸಿಕ್ಕಿದ್ದು, ಇದನ್ನ ಅವರೇ ತಮ್ಮ ಸ್ವಂತ ಪ್ರೊಡಕ್ಷನ್ ಹೌಸ್‌ನಲ್ಲಿ ನಿರ್ಮಾಣ ಮಾಡಲಿದ್ದಾರಂತೆ. ಏನಿದು ಸಿನಿಮಾ? ಇಲ್ಲಿದೆ ಪೂರ್ತಿ ಡೀಟೇಲ್ಸ್. ಡೈರೆಕ್ಟರ್ ಆದಿತ್ಯ ಧರ್ ಅವರ 'ಧುರಂಧರ್' ಫ್ರಾಂಚೈಸ್ ಯಶಸ್ಸಿನ ನಂತರ, ರಣವೀರ್ ಸಿಂಗ್ ಭಾರತೀಯ ಚಿತ್ರರಂಗದ ಹೊಸ ಬಾಸ್‌ ಆಗಿ ಹೊರಹೊಮ್ಮಿದ್ದಾರೆ.

Add Asianetnews Kannada as a Preferred SourcegooglePreferred

ಸಾಲು ಸಾಲು ಹಿಟ್ ಚಿತ್ರಗಳ ಮೂಲಕ ಸೂಪರ್‌ಸ್ಟಾರ್ ಪಟ್ಟಕ್ಕೇರಿರುವ ರಣವೀರ್ ಅವರ ಮುಂದಿನ ಪ್ರಾಜೆಕ್ಟ್ ಯಾವುದು ಅನ್ನೋ ಕುತೂಹಲ ಎಲ್ಲರಲ್ಲೂ ಇತ್ತು. ಕೆಲವು ತಿಂಗಳ ಹಿಂದೆ ಅವರು 'ಪ್ರಳಯ್' ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಬಂದಿತ್ತು. ಈಗ ಅವರ ಕೈಗೆ ಮತ್ತೊಂದು ದೊಡ್ಡ ಪ್ರಾಜೆಕ್ಟ್ ಸಿಕ್ಕಿದೆ ಅಂತ ಹೇಳಲಾಗ್ತಿದೆ. ಈ ಹೊಸ ಪ್ರಾಜೆಕ್ಟ್ ಬಗ್ಗೆ ರಣವೀರ್ ಸಿಕ್ಕಾಪಟ್ಟೆ ಉತ್ಸಾಹದಲ್ಲಿದ್ದಾರಂತೆ. ಅಷ್ಟಕ್ಕೂ ಏನಿದು ಹೊಸ ಸಿನಿಮಾ? ಇಲ್ಲಿದೆ ಮಾಹಿತಿ...

ಯಾವ ಸಿನಿಮಾ ಒಪ್ಪಿಕೊಂಡ್ರು ರಣವೀರ್ ಸಿಂಗ್?

ನಟ ರಣವೀರ್ ಸಿಂಗ್ ತಮ್ಮ ವೃತ್ತಿಜೀವನದ ಅತಿದೊಡ್ಡ ಪ್ರಾಜೆಕ್ಟ್‌ಗೆ ಸಿದ್ಧತೆ ನಡೆಸಿದ್ದಾರೆ. ಸಿಕ್ಕಿರುವ ಲೇಟೆಸ್ಟ್ ಮಾಹಿತಿ ಪ್ರಕಾರ, ಅವರು ತಮ್ಮದೇ ಪ್ರೊಡಕ್ಷನ್ ಹೌಸ್ 'ಮಾ ಕಸಮ್ ಫಿಲ್ಮ್' ಅಡಿಯಲ್ಲಿ ಅಮಿಶ್ ತ್ರಿಪಾಠಿ ಅವರ ಪ್ರಸಿದ್ಧ ಕಾದಂಬರಿ 'ದಿ ಇಮ್ಮಾರ್ಟಲ್ಸ್ ಆಫ್ ಮೆಲೂಹಾ'ದ ಹಕ್ಕುಗಳನ್ನು ಪಡೆದುಕೊಂಡಿದ್ದಾರೆ. ಈ ಪೌರಾಣಿಕ ಕಥೆಯನ್ನು ಸಿನಿಮಾ ಮಾಡಲು ಅವರು ಬಿರ್ಲಾ ಸ್ಟುಡಿಯೋಸ್ ಜೊತೆ ಕೈಜೋಡಿಸಿದ್ದಾರೆ. ಬಾಲಿವುಡ್ ಹಂಗಾಮ ವರದಿ ಪ್ರಕಾರ, ಈ ಹಿಂದೆ ಸಂಜಯ್ ಲೀಲಾ ಬನ್ಸಾಲಿ ಅವರು 'ಇಮ್ಮಾರ್ಟಲ್ಸ್ ಆಫ್ ಮೆಲೂಹಾ' ಚಿತ್ರವನ್ನು ರಣವೀರ್ ಜೊತೆ ಮಾಡಲು ಪ್ಲ್ಯಾನ್ ಮಾಡಿದ್ದರು.

ಆದರೆ, ಆ ಪ್ರಾಜೆಕ್ಟ್ ಮುಂದೆ ಹೋಗಲೇ ಇಲ್ಲ. ಆದರೂ, ರಣವೀರ್‌ಗೆ ಈ ಕಥೆಯ ಮೇಲೆ ಮೊದಲಿನಿಂದಲೂ ಆಸಕ್ತಿ ಇತ್ತು ಮತ್ತು ಇದರಲ್ಲಿ ಶಿವನ ಪಾತ್ರ ಮಾಡುವ ಕನಸು ಕಂಡಿದ್ದರು. ಬನ್ಸಾಲಿ ಅವರ ಬಳಿ ಇದ್ದ ರೈಟ್ಸ್ ಅವಧಿ ಮುಗಿಯುತ್ತಿದ್ದಂತೆ, ರಣವೀರ್ ತಮ್ಮ ಬ್ಯಾನರ್ ಅಡಿಯಲ್ಲಿ ಅದನ್ನು ಖರೀದಿಸಿದ್ದಾರೆ. ವರದಿಗಳ ಪ್ರಕಾರ, ಈ ಟ್ರೈಲಾಜಿಯಲ್ಲಿ (ಮೂರು ಭಾಗಗಳ ಸಿನಿಮಾ) ರಣವೀರ್ ಸಿಂಗ್ ಅವರೇ ಶಿವನ ಪಾತ್ರದಲ್ಲಿ ನಟಿಸಲಿದ್ದಾರೆ. ಸದ್ಯಕ್ಕೆ ಚಿತ್ರತಂಡ ಸ್ಕ್ರಿಪ್ಟ್ ಸಿದ್ಧಪಡಿಸುತ್ತಿದ್ದು, ನಂತರವಷ್ಟೇ ಉಳಿದ ನಟರು ಮತ್ತು ನಿರ್ದೇಶಕರನ್ನು ಫೈನಲ್ ಮಾಡಲಿದ್ದಾರೆ.

ಹೊಸ ಸಿನಿಮಾ ಶೂಟಿಂಗ್ ಯಾವಾಗ ಶುರು?

ಈ ಚಿತ್ರದ ಬರವಣಿಗೆ ಕೆಲಸ ಈಗಾಗಲೇ ಶುರುವಾಗಿದೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ. ತಂಡವು ಚಿತ್ರಕಥೆ ಬರೆಯುವುದು ಮತ್ತು ಈ ಪೌರಾಣಿಕ ಜಗತ್ತನ್ನು ತೆರೆಯ ಮೇಲೆ ಕಟ್ಟಿಕೊಡುವ ಕೆಲಸದಲ್ಲಿ ಬ್ಯುಸಿಯಾಗಿದೆ. ಮೊದಲ ಭಾಗದ ಶೂಟಿಂಗ್ 2028ರಲ್ಲಿ ಶುರುವಾಗುವ ನಿರೀಕ್ಷೆ ಇದೆ. ಅಂದಹಾಗೆ, 'ದಿ ಇಮ್ಮಾರ್ಟಲ್ಸ್ ಆಫ್ ಮೆಲೂಹಾ' ಕಾದಂಬರಿಯ ಹಕ್ಕುಗಳನ್ನು ಪಡೆಯಲು ರಣವೀರ್ ಬರೋಬ್ಬರಿ 40 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎನ್ನಲಾಗಿದೆ.

'ಧುರಂಧರ್' ಯಶಸ್ಸಿನ ನಂತರ ರಣವೀರ್ ಸಿಂಗ್ ಹಲವು ಹೊಸ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಆದಿತ್ಯ ಧರ್ ಅವರ ಹೊಸ ಸಿನಿಮಾದ ಶೂಟಿಂಗ್ ಅನ್ನು 2027ರಲ್ಲಿ ಶುರು ಮಾಡಲಿದ್ದಾರೆ. ಈ ಚಿತ್ರದ ಶೀರ್ಷಿಕೆ ಇನ್ನೂ ಬಹಿರಂಗವಾಗಿಲ್ಲ. ಇದಲ್ಲದೆ, ಜೈ ಮೆಹ್ತಾ ನಿರ್ದೇಶನದ 'ಪ್ರಳಯ್' ಚಿತ್ರವನ್ನೂ ರಣವೀರ್ ಒಪ್ಪಿಕೊಂಡಿದ್ದು, ಇದರ ಶೂಟಿಂಗ್ ಇದೇ ವರ್ಷ ಆರಂಭವಾಗಲಿದೆ.