ಅಂಬರೀಷ್‌ ಸಿನಿಪಯಣದ ಮಹತ್ವದ ಚಿತ್ರ ‘ಅಂತ’ ಮರು ಬಿಡುಗಡೆ ಆಗುತ್ತಿದೆ. 38 ವರ್ಷಗಳ ನಂತರ ಅದು ಹೊಸ ತಂತ್ರಜ್ಞಾನದೊಂದಿಗೆ ನವನವೀನ ಬಣ್ಣದೊಂದಿಗೆ ಬೆಳ್ಳಿತೆರೆಗೆ ಬರಲಿದ್ದು, ಡಿಜಿಟಲ್‌ ಫಾರ್ಮಾಟ್‌ನಲ್ಲಿ ಅದನ್ನು ಬಿಡುಗಡೆ ಮಾಡಲು ಸಕಲ ಸಿದ್ಥತೆಗಳು ನಡೆಯುತ್ತಿವೆ. ಚಿತ್ರದ ಹಕ್ಕುಗಳು ಲಹರಿ ಸಂಸ್ಥೆಯ ಬಳಿಯಿದ್ದು, ಲಹರಿ ಸಂಸ್ಥೆಯ ಮೂಲಕವೇ ದೀಪಕ್‌ ಪಿಕ್ಚರ್ಸ್‌ ಹಾಗೂ ಶ್ರೀನಿವಾಸ್‌ ಪಿಕ್ಚರ್ಸ್‌ ಚಿತ್ರದ ವಿತರಣೆಗೆ ಮುಂದಾಗಿವೆ.

ಅಂಬಿ ಅಭಿಮಾನಿಗಳಿಗೆ ದರ್ಶನ್ ಕೊಟ್ಟರು ಶಾಕ್

ಶೀಘ್ರವೇ ರಾಜ್ಯಾದ್ಯಂತ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರವನ್ನು ತೆರೆಗೆ ತರಲಿದ್ದೇವೆ ಎಂದು ನಿರ್ಮಾಪಕ ವೇಣುಗೋಪಾಲ್‌ ತಿಳಿಸಿದ್ದಾರೆ. 1981ರಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರವನ್ನು ಕನ್ನಡದ ಹೆಸರಾಂತ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ನಿರ್ದೇಶಿಸಿದ್ದರು. ಅಂಬರೀಷ್‌ ಇನ್ಸ್‌ಪೆಕ್ಟರ್‌ ಸುಶೀಲ್‌ಕುಮಾರ್‌ ಪಾತ್ರದ ಮೂಲಕ ಮನೆ ಮಾತಾಗಿದ್ದರು. ‘ಕುತ್ತೇ ಕನ್ವರ್‌ ನಹೀ ಕನ್ವರ್‌ಲಾಲ್‌ ಬೋಲೋ’ ಎನ್ನುವ ಡೈಲಾಗ್‌ ಭಾರಿ ಜನಪ್ರಿಯತೆ ಪಡೆದಿತ್ತು.

ಅಭಿಷೇಕ್ ಬಗ್ಗೆ ಅಂಬಿ ಇಟ್ಟಿದ್ದ ಕನಸು ನೆರವೇರಲೇ ಇಲ್ಲ

ಹೆಚ್‌.ಎನ್‌. ಮಾರುತಿ ಹಾಗೂ ವೇಣುಗೋಪಾಲ್‌ ಈ ಚಿತ್ರವನ್ನು ನಿರ್ಮಿಸಿದ್ದರು. ಹೆಚ್‌.ಕೆ. ಅನಂತರಾವ್‌ ಕಾದಂಬರಿ ಆಧರಿಸಿದ ಈ ಸಿನಿಮಾದಲ್ಲಿ ಅಂಬರೀಷ್‌(ದ್ವಿಪಾತ್ರ), ಲಕ್ಷ್ಮಿ, ಜಯಮಾಲಾ, ಲತಾ, ಪಂಡರೀಬಾಯಿ, ವಜ್ರಮುನಿ, ಪ್ರಭಾಕರ್‌, ಸುಂದರಕೃಷ್ಣ ಅರಸ್‌, ಶಕ್ತಿ ಪ್ರಸಾದ್‌, ಲಕ್ಷ್ಮಣ್‌, ಸಿ.ಸೀತಾರಾಮ್‌ ನಟಿಸಿದ್ದರು.

ಅಂಬರೀಷ್‌ಗೆ ಸಂಬಂಧಿಸಿದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ....