ಕೆಜಿಎಫ್ - 2 ಚಿತ್ರೀಕರಣ ಆರಂಭವಾಗಿದೆ. ಜೂ. 06 ರಿಂದ ಯಶ್ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ. 

ಕೆಜಿಎಫ್ 2 ಅಖಾಡಕ್ಕೆ ರಾಕಿಭಾಯ್ ಎಂಟ್ರಿ

ಬಾಲಿವುಡ್ ಮಳೆ ಹುಡುಗಿ ರವೀನಾ ಟಂಡನ್ ಕೆಜಿಎಫ್ ಗೆ ಬರೋದು ಬಹುತೇಕ ಪಕ್ಕಾ ಆಗಿದೆ. ಸುಮಾರು ಎರಡು ದಶಕಗಳ ನಂತರ ರವೀನಾ ಸ್ಯಾಂಡಲ್ ವುಡ್ ಗೆ ಪ್ರವೇಶಿಸಲಿದ್ದಾರೆ. ಕೆಜಿಎಫ್-2 ನಲ್ಲಿ ಪ್ರಮುಖ ಪಾತ್ರವೊಂದರಲ್ಲಿ ರವೀನಾ ನಟಿಸಲಿದ್ದಾರೆ. 70-80 ರ ದಶಕದ ಪ್ರಧಾನಮಂತ್ರಿ ಪಾತ್ರದಲ್ಲಿ ರವೀನಾ ನಟಿಸಲಿದ್ದಾರೆ ಎಂದು ತಿಳಿದು ಬಂದಿದೆ. 

ಬೇರೆ ಭಾಷೆಗಳಲ್ಲಿ ಜಗ್ಗೇಶ್ ನಟಿಸದಿರಲು ಕೊಟ್ಟ ಕಾರಣವಿದು!

1999 ರಲ್ಲಿ ಉಪೇಂದ್ರ ನಟಿಸಿ ನಿರ್ದೇಶಿಸಿದ್ದ ‘ಉಪೇಂದ್ರ’ ಚಿತ್ರದಲ್ಲಿ ರವೀನಾ ನಟಿಸಿದ್ದರು. ಇದಾದ ನಂತರ ಯಾವುದೇ ಕನ್ನಡ ಸಿನಿಮಾದಲ್ಲಿ ಇವರು ನಟಿಸಿಲ್ಲ. ಇದೀಗ ಕೆಜಿಎಫ್2 ಮೂಲಕ ಮತ್ತೊಮ್ಮೆ ಕನ್ನಡಕ್ಕೆ ಬರುತ್ತಿದ್ದಾರೆ.