ಕನ್ನಡ ಚಿತ್ರರಂಗವನ್ನು ಇಡೀ ದೇಶವೇ ತಿರುಗಿ ನೋಡಿದಂತೆ ಮಾಡಿದ ಸಿನಿಮಾ ‘ಕೆಜಿಎಫ್’. ಸ್ಯಾಂಡಲ್ ವುಡ್ ಮಾತ್ರವಲ್ಲ, ಇಡೀ ಚಿತ್ರರಂಗವೇ ಕೆಜಿಎಫ್ ನ್ನು ಮೆಚ್ಚಿದೆ. ರಾಕಿ ಭಾಯ್ ಗೆ ಸಲಾಂ ಎಂದಿದೆ. 

‘ಅಮರ್’ ಚಿತ್ರದ Exclusive ಫೋಟೋಸ್ ಇಲ್ಲಿವೆ!

ಈ ಚಿತ್ರದ ಚಾಪ್ಟರ್ -2 ಶೂಟಿಂಗ್ ಶುರುವಾಗಿದ್ದು ಕೆಲ ಭಾಗಗಳ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ನಿರ್ದೇಶಕ ಪ್ರಶಾಂತ್ ನೀಲ್ ಈಗಾಗಲೇ ಶೂಟಿಂಗ್ ಶುರು ಮಾಡಿದ್ದಾರೆ. ಮಂಡ್ಯ ಪ್ರಚಾರದಲ್ಲಿ ಬ್ಯುಸಿ ಇದ್ದಿದ್ದರಿಂದ ಯಶ್ ಇನ್ನೂ ಎಂಟ್ರಿ ಕೊಟ್ಟಿಲ್ಲ. ಜೂನ್ 06 ರಿಂದ ರಾಕಿಭಾಯ್ ಕೆಜಿಎಫ್ ಗೆ ಎಂಟ್ರಿ ಕೊಡಲಿದ್ದಾರೆ. 

ಸರ್ಕಾರಿ ಶಾಲಾ ಮಕ್ಕಳಿಗೆ ಪುಸ್ತಕಗಳ ಸಹಾಯ ನೀಡಿದ ಪರಿಮಳಾ ಜಗ್ಗೇಶ್

ಮುಂದಿನ ತಿಂಗಳು ಅಂದರೆ ಜೂನ್ 06 ರಿಂದ ಮೈಸೂರಿನಲ್ಲಿ ಶೂಟಿಂಗ್ ಶುರುವಾಗಲಿದೆ. ಸಂಜಯ್ ದತ್ ಹಾಗೂ ರವೀನಾ ಟಂಡನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಚಿತ್ರತಂಡದಿಂದ ಇನ್ನೂ ಅಧಿಕೃತವಾಗಿಲ್ಲ. ಒಟ್ಟಿನಲ್ಲಿ  ಕೆಜಿಎಫ್2 ನಲ್ಲಿ ಸಾಕಷ್ಟು ವಿಶೇಷತೆಗಳಿರಲಿವೆ.