ನವರಸ ನಾಯಕ ಜಗ್ಗೇಶ್ ಸಕಲಕಲಾವಲ್ಲಭ. ಹೆಸರಿಗೆ ತಕ್ಕಂತೆ ನವರಸಗಳನ್ನು ಅದ್ಬುತವಾಗಿ ಎಕ್ಸ್ ಪ್ರೆಸ್ ಮಾಡುವ ನಟ. ನಟನಾಗಿ, ಹಾಸ್ಯನಟನಾಗಿ, ಪೋಷಕ ನಟನಾಗಿ ಕನ್ನಡಿಗರ ಮನೆ ಗೆದ್ದಿದ್ದಾರೆ. ಇಂತಹ ಕಲಾವಿದ ಕನ್ನಡವನ್ನು ಬಿಟ್ಟು ಯಾಕೆ ಬೇರೆ ಭಾಷೆಗಳಲ್ಲಿ ನಟಿಸಿಲ್ಲ ಎಂಬ ಪ್ರಶ್ನೆ ಎದ್ದೆಳುವುದು ಸಹಜ. ಇದಕ್ಕೆ ಸ್ಬತಃ ಜಗ್ಗೇಶ್ ಉತ್ತರಿಸಿದ್ದಾರೆ. 

ಉದ್ಯಮಕ್ಕೆ ಕಾಲಿಟ್ಟು 38 ವರ್ಷ!  ಸ್ವಾಭಿಮಾನದಿಂದ ಬದುಕಿರುವೆ! 2019 ಭಾಷೆ ನಟಿಸಲು ಬೇಡಿಕೆ ಇಟ್ಟರು! ಒಂದೇ ಮಾತು ಹೇಳಿದೆ ಕನ್ನಡ ಬಿಟ್ಟು ಬೇರೆ ಭಾಷೆ ನಟಿಸುವ ಯಾವ ಯೋಜನೆ ಇಲ್ಲ! ಅಂದ ಮಾತ್ರಕ್ಕೆ ಪರಭಾಷೆ ದ್ವೇಷಿ ಅಲ್ಲಾ! ಕನ್ನಡಿಗರ ಚಪ್ಪಾಳೆ 100 ಜನ ಸಾಕುವ ಶಕ್ತಿ ನೀಡಿದೆ ನನಗೆ! 56 ಗಡಿಯಲ್ಲು ಕನ್ನಡದಲ್ಲಿ ಹೇರಳ ಅವಕಾಶವಿದೆ!ಸಾಕು ಕನ್ನಡ ಎಂದೆ! ಎಂದು ಜಗ್ಗೇಶ್ ಹೇಳಿದ್ದಾರೆ.