ದರ್ಶನ್ ವಿರುದ್ಧ ಅಭಿಪ್ರಾಯ ಇರುವ ರಮ್ಯಾ ಪೋಸ್ಟ್ ನೋಡಿ ರೊಚ್ಚಿಗೆದ್ದಿರುವ ದರ್ಶನ್ ಫ್ಯಾನ್ಸ್, ಈ ನಟಿ ವಿರುದ್ಧ ಕೆಟ್ಟಕೊಳಕು ಪದಪ್ರಯೋಗ ಮಾಡಿ ಕಾಮೆಂಟ್ ಹಾಕಿದ್ದರು. ಅದಕ್ಕೆ ಪ್ರತಿಯಾಗಿ ನಟಿ ರಮ್ಯಾ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಇದೇ ವೇಳೆ, ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ..
ನಟಿ ರಶ್ಮಿಕಾ ಮಂದಣ್ಣ (Rashmika Mandanna) ಗೊತ್ತಿಲ್ಲ ಅಂತ ಹೇಳೋ ಹಾಗೇ ಇಲ್ಲ. ಕನ್ನಡದ 'ಕಿರಿಕ್ ಪಾರ್ಟಿ' ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶಿಸಿ ಕರ್ನಾಟಕ ಕ್ರಶ್ ಆಗಿದ್ದ ನಟಿ ರಶ್ಮಿಕಾ ಮಂದಣ್ಣ ಈಗ 'ನ್ಯಾಷನಲ್ ಕ್ರಶ್' ಆಗಿ ಬದಲಾಗಿದ್ದಾರೆ. ಸ್ಯಾಂಡಲ್‌ವುಡ್, ಟಾಲಿವುಡ್, ಕಾಲಿವುಡ್ ಬಳಿಕ ಬಾಲಿವುಡ್‌ನಲ್ಲಿ ಕೂಡ ನಟಿಸಿ ರಶ್ಮಿಕಾ ಮಂದಣ್ಣ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. 'ಪ್ಯಾನ್ ಇಂಡಿಯಾ ಸ್ಟಾರ್' ಅನ್ನೋದಕ್ಕಿಂತ 'ಇಂಡಿಯಾ ಫ್ಯಾನ್ ಸ್ಟಾರ್' ಎನ್ನುವುದೇ ಸೂಕ್ತವೇನೋ! ಅಷ್ಟರಮಟ್ಟಿಗೆ ರಶ್ಮಿಕಾ ಮಂದಣ್ಣ ಅವರು ಬೆಳದುನಿಂತಿದ್ದಾರೆ.
ಇಂಥ ನಟಿ ರಶ್ಮಿಕಾಗೆ ಸೋಷಿಯಲ್ ಮೀಡಿಯಾಗಳಲ್ಲಿ ಎಂತೆಂಥ ಕೆಟ್ಟ-ಕೊಳಕು ಕಾಮೆಂಟ್ಸ್ ಬರುತ್ತವೆ ಎಂದರೆ, ನಾಗರೀಕರು ಯಾರೇ ಆದರೂ ಅದನ್ನೆಲ್ಲ ವಿರೋಧಿಸಲೇಬೇಕು ಎಂಬಂತಿದೆ. ಆ ಕಾಮೆಂಟ್ಸ್‌ಗಳನ್ನು ನೋಡುತ್ತಿದೆ, ನಾವು ಎಂಥ ಜನರಿಂದ ತುಂಬಿರುವ ಸಮಾಜದಲ್ಲಿ ಬದುಕುತ್ತಿದ್ದೇವೆ ಎಂಬ ನೋವು-ಬೇಸರ ಆಗುವುದು ಖಂಡಿತ. ರಶ್ಮಿಕಾಗೆ ಬರುವ ಕೆಟ್ಟ ಕಾಮೆಂಟ್ಸ್‌ಗಳ ಬಗ್ಗೆ ನಟಿ ರಮ್ಯಾ (Ramya) ಕೂಡ ಒಮ್ಮೆ ಧ್ವನಿ ಎತ್ತಿದ್ದರು. ಅಂತಹ ಹೀನ ಟೀಕೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಯಾರೂ ಕೂಡ ಮಾಡಬಾರದು. ಅಂತಹ ಕಾಮೆಂಟ್ಸ್‌ಗಳಿಂದ ನೊಂದು ಯಾರಾದ್ರೂ ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಜವಾಬ್ದಾರಿ ಯಾರು ಎಂದು ಪ್ರಶ್ನಿಸಿದ್ದರು ರಮ್ಯಾ!
ಆದರೆ, ಇದೀಗ ಸ್ವತಃ ರಮ್ಯಾ ಅವರೇ ನಟಿ ರಶ್ಮಿಕಾ ಸ್ಥಾನದಲ್ಲಿ ನಿಂತಿದ್ದಾರೆ. ಸದ್ಯ ನಟಿ ರಮ್ಯಾ ಹಾಗೂ ನಟ ದರ್ಶನ್ ಫ್ಯಾನ್ಸ್ ಮಧ್ಯೆ ಸೋಷಿಯಲ್ ಮೀಡಿಯಾ ವಾರ್ ತಾರಕಕ್ಕೇರಿರುವುದು ಗೊತ್ತೇ ಇದೆ. ನಟ ಪ್ರಥಮ್ ಕೂಡ ದರ್ಶನ್ ಫ್ಯಾನ್ಸ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ನಟ ದರ್ಶನ್ ಕೇಸ್ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ನಡೆದ ಚರ್ಚೆ ವೇಳೆ ಬಂದ ಅಭಿಪ್ರಾಯ ಉಲ್ಲೇಖಿಸಿ, ನಟಿ ರಮ್ಯಾ 'ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು' ಎಂದು ಸೋಷಿಯಲ್ ಮೀಡಿಯಾ ಪೋಸ್ಟ್ ಮಾಡಿದ್ದರು. ಇದರಿಂದ ರೊಚ್ಚಿಗೆದ್ದಿರುವ ನಟ ದರ್ಶನ್ ಫ್ಯಾನ್ಸ್, ರಮ್ಯಾ ವಿರುದ್ಧ ಕೆಟ್ಟ ಪದಗಳನ್ನು ಉಪಯೋಗಿಸಿ ಸೋಷಿಯಲ್ ಮೀಡಿಯಾದಲ್ಲಿ ಕೆಟ್ಟ ಕಾಮೆಂಟ್ ಮಾಡಿದ್ದರು.
ದರ್ಶನ್ ವಿರುದ್ಧ ಅಭಿಪ್ರಾಯ ಇರುವ ರಮ್ಯಾ ಪೋಸ್ಟ್ ನೋಡಿ ರೊಚ್ಚಿಗೆದ್ದಿರುವ ದರ್ಶನ್ ಫ್ಯಾನ್ಸ್, ಈ ನಟಿ ವಿರುದ್ಧ ಕೆಟ್ಟಕೊಳಕು ಪದಪ್ರಯೋಗ ಮಾಡಿ ಕಾಮೆಂಟ್ ಹಾಕಿದ್ದರು. ಅದಕ್ಕೆ ಪ್ರತಿಯಾಗಿ ನಟಿ ರಮ್ಯಾ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಇದೇ ವೇಳೆ, ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ನಟಿ ರಮ್ಯಾ ವಿರುದ್ಧ ಕಾನೂನು ಸಮರಕ್ಕೆ ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ. 'ಪ್ರಕರಣ ನ್ಯಾಯಾಲದಲ್ಲಿರುವಾಗ ರಮ್ಯಾ ಏಕಪಕ್ಷೀಯ ಅಭಿಪ್ರಾಯವನ್ನು ಸೋಷಿಯಲ್ ಮೀಡಿಯಾದಲ್ಲಿ ಮಾಡುವುದು ಸರಿಯಲ್ಲ. ಆ ಬಗ್ಗೆ ರಮ್ಯಾ ಪೋಸ್ಟ್ ಹಾಕುವ ಅಗತ್ಯವಾದರೂ ಏನಿತ್ತು?' ಎಂದು ಪ್ರಶ್ನಿಸಿರುವ ವಿಜಯಲಕ್ಷ್ಮೀ ಇದೀಗ ರಮ್ಯಾ ವಿರುದ್ಧ ಕೇಸ್ ದಾಖಲಿಸಲು ಸಜ್ಜಾಗಿದ್ದಾರೆ ಎನ್ನಲಾಗಿದೆ.
ಈ ಎಲ್ಲಾ ಬೆಳವಣಿಗೆ ಮಧ್ಯೆ ನಟ ದರ್ಶನ್ 'ಡಿ ಬಾಸ್ ಫ್ಯಾನ್ಸ್' ಪೇಜ್‌ನಲ್ಲಿ 'ಯಾವುದೇ ವಿವಾದಕ್ಕೆ ಕಿವಿಗೊಡದಂತೆ ಅಭಿಮಾನಿಗಳಲ್ಲಿ ಸ್ವತಃ ದರ್ಶನ್ ಅಭಿಮಾನಿಗಳೇ ಮನವಿ ಮಾಡಿದ್ದಾರೆ. 'ಡಿ ಫ್ಯಾನ್ಸ್' ಆಫೀಶಿಯಲ್ ಪೇಜ್‌ನಲ್ಲಿ ಮನವಿ ಮಾಡಿಕೊಂಡಿರುವ ಪೋಸ್ಟ್‌ನಲ್ಲಿ 'ಯಾವುದಕ್ಕೂ ರಿಯಾಕ್ಟ್ ಮಾಡಬೇಡಿ. ಯಾರಿಗೂ ತೊಂದರೆ ಮಾಡ್ಬೇಡಿ.. ಯಾವುದಕ್ಕೂ ತಲೆ ಕೆಡಿಸ್ಕೊಳ್ಳಬೇಡಿ' ಅಂತ ಪೋಸ್ಟ್ ಮಾಡಲಾಗಿದೆ.
ಇದೀಗ ನಟಿ ರಮ್ಯಾ ಬೆಂಗಳೂರಿನಲ್ಲಿ ದರ್ಶನ್ ಫ್ಯಾನ್ಸ್ ವಿರುದ್ಧ ಪೊಲೀಸ್ ಕಮೀಷನರ್ ಬಳಿ ಕಂಪ್ಲೇಂಟ್ ಕೊಡಲು ಇಂದು ಸಂಜೆ ತೆರಳಲಿದ್ದಾರೆ ಎಂಬ ಮಾಹಿತಿಯಿದೆ. ಅತ್ತ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಹ ಕೇಸ್ ದಾಖಲಿಸುವ ಹಾದಿಯಲ್ಲಿದ್ದಾರೆ. ಒಟ್ಟಿನಲ್ಲಿ ಈ 'ಸೋಷಿಯಲ್ ಮೀಡಿಯಾ ವಾರ್' ಕೇಸ್ ಎಲ್ಲಿಗೆ ಹೋಗಿ ತಲುಪುತ್ತೋ ಏನೋ ಎಂಬ ಕುತೂಹಲದ ಜೊತೆಗೆ, ಸೋಷಿಯಲ್ ಮಿಡಿಯಾ ವಾರ್ ಬಗ್ಗೆಯೂ ಯೋಚಿಸುವ ಸಮಯ ಬಂದಿದೆ ಎನ್ನಬಹುದು. 'ಕಾಲಾಯ ತಸ್ಮೈ ನಮಃ' ಎನ್ನದೇ ಬೇರೆ ದಾರಿಯಿಲ್ಲ.
