ಇದು ಇಲ್ಲಿಗೇ ನಿಲ್ಲೋದಿಲ್ಲ. ಮುಂದೆ ಯಾವತ್ತೋ ನಾನು ಅಥವಾ ನನ್ನಂತೆ ಧೈರ್ಯವಾಗಿ ಹೇಳುವವರು ಇರೋದಿಲ್ಲ. ಆದ್ರೆ, ಮುಂದೆ ಕೂಡ ಸಮಾಜದಲ್ಲಿ ಹೆಣ್ಣುಮಕ್ಕಳು ಇರ್ತಾರೆ. ಅವರ ಗತಿ ಏನು? ಈ ಕಾರಣಕ್ಕಾಗಿಯಾದ್ರೂ ನಾನು ಮಾತನಾಡಲೇಬೇಕು, ಮಾತಾಡ್ತೀನಿ' ಎಂದಿದ್ದಾರೆ ನಟಿ ರಮ್ಯಾ.

ಕನ್ನಡದ ನಟಿ ರಮ್ಯಾ (Sandalwood Queen Ramya) ಅವರು ನಟ ದರ್ಶನ್ (Darshan Fans) ಫ್ಯಾನ್ಸ್‌ ಬಗ್ಗೆ 'ಏಷ್ಯಾನೆಟ್ ಸುವರ್ಣ ನ್ಯೂಸ್‌' ಜೊತೆ ಮಾತನ್ನಾಡಿದ್ದಾರೆ. ಇತ್ತೀಚೆಗೆ ನಟಿ ರಮ್ಯಾ 'ಸುಪ್ರೀಂ ಕೋರ್ಟ್ ದರ್ಶನ್ ಕೇಸ್‌ ವಿಷಯದಲ್ಲಿ ಹೈಕೋರ್ಟ್ ನಡೆಯನ್ನು ಖಂಡಿಸಿ ಹೇಳಿದ್ದ ಹೇಳಿಕೆ ಉಲ್ಲೇಖಿಸಿ 'ಭಾರತದ ಶ್ರೀಸಾಮಾನ್ಯರಿಗೂ ನ್ಯಾಯ ಸಿಗುವ ಭರವಸೆ ಕಾಣಿಸುತ್ತಿದೆ. ಸುಪ್ರೀಂ ಕೋರ್ಟ್​ನಿಂದ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿದೆ ಅನ್ನೋ ಭರವಸೆ ಇದೆ' ಎಂದು ಪೋಸ್ಟ್ ಮಾಡಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅದನ್ನು ಉಲ್ಲೇಖಿಸಿ ನಟಿ ರಮ್ಯಾ ಮಾಡಿದ್ದ ಸೋಷಿಯಲ್ ಮೀಡಿಯಾ ಪೋಸ್ಟ್‌ ಬಗ್ಗೆ ರೊಚ್ಚಿಗೆದ್ದಿದ್ದ ನಟ ದರ್ಶನ್ (Darshan Thoogudeepa) ಫ್ಯಾನ್ಸ್, ನಟಿ ರಮ್ಯಾ ವಿರುದ್ಧ ಕೆಟ್ಟ-ಕೊಳಕು ಪದಗಳಲ್ಲಿ ನಿಂದಿಸಿ ಕಾಮೆಂಟ್ ಮಾಡಿದ್ದರು. ಈ ಬಗ್ಗೆ ನಟಿ ರಮ್ಯಾ ಪೋಸ್ಟ್ ಮಾಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಇದೀಗ ಏಷ್ಯಾನೆಟ್ ಸುವರ್ಣ ಜೊತೆ ಈ ಬಗ್ಗೆ ಮಾತನ್ನಾಡಿರುವ ರಮ್ಯಾ 'ಸ್ವತಃ ನಟ ದರ್ಶನ್‌ ಇಂಥ ಫ್ಯಾನ್ಸ್‌ಗಳನ್ನು ಎನ್‌ಕರೇಜ್ ಮಾಡುತ್ತಿದ್ದಾರೆ, ಅದೇ ಅವರಿಗೆ ಕುಮ್ಮಕ್ಕು ನೀಡುತ್ತಿದೆ ಎಂಬ ಅರ್ಥದಲ್ಲಿ ನೇರವಾಗಿಯೇ ಆರೋಪ ಮಾಡಿದ್ದಾರೆ.

ಈ ಬಗ್ಗೆ ಮಾತನ್ನಾಡುತ್ತ ರಮ್ಯಾ, ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿ 'ಹೌದು, ನಟ ದರ್ಶನ್ ಅವರಿಗೆ ಏನು ನಡಿತಾ ಇದೆ ಅನ್ನೋದರ ಬಗ್ಗೆ ಸಂಪೂರ್ಣ ಅರಿವು ಇರುತ್ತೆ. ಆದ್ರೂ ಕೂಡ ಅವ್ರು ಈ ಬಗ್ಗೆ ಮಾತನ್ನಾಡೋದಿಲ್ಲ. ಅಂದ್ರೆ.. ಅವರು ಸ್ವತಃ ತಮ್ಮ ಇಂಥ ಅಭಿಮಾನಿಗಳನ್ನು ಎನ್‌ಕರೇಜ್ ಮಾಡ್ತಾರೆ. ಅಂಥ ಅಭಿಮಾನಿಗಳು ಮಾಡೋ ಕೆಟ್ಟ ಹಾಗೂ ಕೊಳಕು ಮೆಸೇಜ್‌ಗೂ ರೇಣುಕಾಸ್ವಾಮಿ ಮೆಸೇಜ್‌ಗೂ ಏನು ವ್ಯತ್ಯಾಸ ಇದೆ? ಇಂಥ ಕೆಟ್ಟ ಮನಸ್ಥಿತಿ ಇರೋ ಜನರಿಂದಲೇ ಇವತ್ತು ಸಮಾಜದಲ್ಲಿ ಹೆಣ್ಣುಮಕ್ಕಳು ಅಪಾಯ ಎದುರಿಸುವಂತಾಗಿದೆ. ಆದರೆ, ಎಲ್ಲರೂ ಹೇಳಿಕೊಳ್ಳೋದಿಲ್ಲ' ಎಂದಿದ್ದಾರೆ.

ಇಂಥ ದರ್ಶನ್ ಅಭಿಮಾನಿಗಳಿಂದ ಸಮಾಜಕ್ಕೆ ಎಂಥ ಮೆಸೇಜ್ ಹೋಗುತ್ತಿದೆ. ನನ್ನಂಥ ಸಾಮಾಜಿಕ ಜೀವನದಲ್ಲಿ ಇರೋರಿಗೇ ಇವರು ಹೀಗೆ ಮೆಸೇಜ್ ಮಾಡ್ತಾರೆ ಅಂದ್ರೆ, ಇನ್ನು ಸಾಮಾನ್ಯ ಹೆಣ್ಣುಮಕ್ಕಳ ಗತಿಯೇನು? ಅವರು ಹೆದರಿಕೊಂಡು ಸುಮ್ಮನೇ ಇರುತ್ತಾರೆ. ನಾನು ಯಾವತ್ತೂ ಸುಮ್ಮನೇ ಇರೋದಿಲ್ಲ. ಅವ್ರೇನು ನನ್ನ 'ರೇ*ಪ್ ಮಾಡ್ತಾರಾ? ಕೊಲೆ ಮಾಡ್ತಾರಾ? ನನಗೆ ಅನ್ನಿಸಿದ್ದನ್ನು ನೇರವಾಗಿ ಹೇಳುತ್ತೇನೆ.

ಆದರೆ, ಕೆಲವು ಸೆಲೆಬ್ರಿಟಗಳು ಹೀಗೆ ಹೇಳದೇ ನನಗೆ ಮೆಸೇಜ್ ಮಾಡಿ ನನಗೆ ಸಪೋರ್ಟ್ ಮಾಡುತ್ತಾರೆ. ಯಾಕಂದ್ರೆ, ಅವರೇನಾದ್ರೂ ಹೇಳಿದ್ರೆ ಅಥವಾ ಪೋಸ್ಟ್ ಮಾಡಿದ್ರೆ ದರ್ಶನ್ ಅವರ ಇಂಥ ಅಭಿಮಾನಿಗಳು ಅವರಿಗೆ ಕೆಟ್ಟ ಮೆಸೇಜ್ ಮಾಡುತ್ತಾರೆ. ಜೊತೆಗೆ, ಅವರಿಗೆ ಬೆದರಿಕೆ ಹಾಕ್ತಾರೆ, ಅಟ್ಯಾಕ್ ಮಾಡ್ತಾರೆ. ಅದ್ರೆ ನಾನು ಯಾವುದಕ್ಕೂ ಹೆದರಿ ಸುಮ್ಮನಿರೋದಿಲ್ಲ' ಎಂದಿದ್ದಾರೆ ನಟಿ ರಮ್ಯಾ.

ಜೊತೆಗೆ, ಇದು ಇಲ್ಲಿಗೇ ನಿಲ್ಲೋದಿಲ್ಲ. ಮುಂದೆ ಯಾವತ್ತೋ ನಾನು ಅಥವಾ ನನ್ನಂತೆ ಧೈರ್ಯವಾಗಿ ಹೇಳುವವರು ಇರೋದಿಲ್ಲ. ಆದ್ರೆ, ಮುಂದೆ ಕೂಡ ಸಮಾಜದಲ್ಲಿ ಹೆಣ್ಣುಮಕ್ಕಳು ಇರ್ತಾರೆ. ಅವರ ಗತಿ ಏನು? ಈ ಕಾರಣಕ್ಕಾಗಿಯಾದ್ರೂ ನಾನು ಮಾತನಾಡಲೇಬೇಕು, ಮಾತಾಡ್ತೀನಿ' ಎಂದಿದ್ದಾರೆ ನಟಿ ರಮ್ಯಾ.