ಏನಾದ್ರೂ ಹೊಸತನ ಕೊಡುವುದು ನನ್ನ ಉದ್ಧೇಶವೂ ಹೌದು. ಹೀಗಾಗಿಯೇ ನನ್ನ ಎಲ್ಲಾ ಸಾಂಗ್ಸ್ ಒಂದಕ್ಕಿಂತ ಮತ್ತೊಂದು ವಿಭಿನ್ನವಾಗಿವೆ. ಹೊಸತನ್ನು ನಾನು ಕಲಿಯುತ್ತ ಹೊಸತನ್ನು ಹೊರಗೆ ಕೊಡುತ್ತ ಸಾಗುವುದು ನನ್ನ ಉದ್ದೇಶ. ಕನ್ನಡ ರಾಪ್ ಸಾಂಗ್‌ಅನ್ನು..

ರಾಪರ್, ಸಂಗೀತ ನಿರ್ದೇಶಕ ಹಾಗೂ ನಟ ಚಂದನ್ ಶೆಟ್ಟಿ (Chandan Shetty) ಅವರು ಇತ್ತೀಚೆಗೆ ಏಷ್ಯಾನೆಟ್ ಸುವರ್ಣ ನ್ಯೂಸ್ 'ಪಾಡ್‌ಕಾಸ್ಟ್‌'ನಲ್ಲಿ ಭಾಗಿಯಾಗಿದ್ದರು. ಅದರಲ್ಲಿ ತಮ್ಮ ಲೈಫ್ ಜರ್ನಿಯ ಬಗ್ಗೆ ಹತ್ತು ಹಲವು ಸಂಗತಿಗಳನ್ನು ಅವರು ಹಂಚಿಕೊಂಡಿದ್ದಾರೆ. ಕೇಳಿದ ಪ್ರಶ್ನೆಗೆ ಬಹುಮುಖ ಪ್ರತಿಭೆ ಚಂದನ್‌ಶೆಟ್ಟಿ ಉತ್ತರಿಸುತ್ತ 'ನಾನು ಈ ಕ್ಷೇತ್ರಕ್ಕೆ ಬಂದಾಗ ಸಹಜವಾಗಿಯೇ ನಾನೂ ಕೂಡ ಸಿನಿಮಾ ಸಂಗೀತವನ್ನೇ ಆಯ್ಕೆ ಮಾಡಿಕೊಳ್ಳಲು ಬಯಸಿದ್ದೆ. ಆದರೆ, ನನಗೆ ರೆಗ್ಯುಲರ್ ಪ್ಯಾಟರ್ನ್ ಸಿನಿಮಾ ಸಂಗೀತ ಹಾಗು ಹಿನ್ನೆಲೆ ಸಂಗೀತಕ್ಕಿಂತ ಬೇರೇ ಏನನ್ನೋ ವಿಭಿನ್ನವಾಗಿ ಕೊಡಬೇಕು ಎಂಬ ತುಡಿತ ಇತ್ತು. ಅದಕ್ಕಾಗಿ ಹಗಲಿರುಳೂ ಯೋಚಿಸುತ್ತಿದ್ದೆ. ಕೊನೆಗೆ, ರಾಪರ್ ಆಗಿ ಸಂಗೀತದಲ್ಲಿ ನನ್ನ ಸಾಧನೆಯ ಹಾದಿಯಲ್ಲಿ ಸಾಗುತ್ತಿದ್ದೇನೆ.

ಶುರುವಿನಲ್ಲಿ ಮಾಡಿರುವ ಕೆಲವು ಹಾಡಿನ ಆಲ್ಬಂಗಳು ನನ್ನ ಇಷ್ಟವೂ ಸೇರಿದಂತೆ ಆಗಿನ ಅಗತ್ಯಕ್ಕೆ ತಕ್ಕಂತೆ ಮೂಡಿ ಬಂದಿವೆ. ಹಂತಹಂತವಾಗಿ ನಾನು ವಿಭಿನ್ನವಾಗಿ ಲಿರಿಕ್ಸ್ ಬರೆಯೋದು ಹಾಗೂ ಸಂಗೀತ ಸಂಯೋಜನೆ ಮಾಡತೊಡಗಿದೆ ಪ್ರತಿ ಹಾಡಿನಲ್ಲಿ ಏನಾದ್ರೂ ಹೊಸತನ ಕೊಡುವುದು ನನ್ನ ಉದ್ಧೇಶವೂ ಹೌದು. ಹೀಗಾಗಿಯೇ ನನ್ನ ಎಲ್ಲಾ ಸಾಂಗ್ಸ್ ಒಂದಕ್ಕಿಂತ ಮತ್ತೊಂದು ವಿಭಿನ್ನವಾಗಿವೆ. ಹೊಸತನ್ನು ನಾನು ಕಲಿಯುತ್ತ ಹೊಸತನ್ನು ಹೊರಗೆ ಕೊಡುತ್ತ ಸಾಗುವುದು ನನ್ನ ಉದ್ದೇಶ. ಕನ್ನಡ ರಾಪ್ ಸಾಂಗ್‌ಅನ್ನು ಹಾಲಿವುಡ್, ಅಂದರೆ ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವುದು ನನ್ನ ಅಲ್ಟಿಮೇಟ್ ಗುರಿ.

ಹೌದು, ಇಂದು ಕನ್ನಡದ ಮಾರುಕಟ್ಟೆ ಸಾಕಷ್ಟು ವಿಸ್ತರಿಸಿದೆ. ಕನ್ನಡ ಸಿನಿಮಾಗಳು ಇಂದು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ನಾನೂ ಕೂಡ ಅದೇ ದಿಸೆಯಲ್ಲಿ ಪ್ರಯತ್ನ ಮಾಡಲಿದ್ದೇನೆ. ಕನ್ನಡದ ನನ್ನ ಲಿರಿಕ್ಸ್ ಹಾಗೂ ಮ್ಯೂಸಿಕ್ ಕಂಪೋಸಿಶನ್ ಹಾಡೊಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಬೇಕು, ಸುದ್ದಿ ಆಗಬೇಕು. ಇದೇ ನನ್ನ ಗುರಿ. ನನ್ನ ಪ್ರಯತ್ನ ಆ ದಿಕ್ಕಿನಲ್ಲೇ ಸಾಗುತ್ತಿದೆ. ಆದರೆ, ಇನ್ನೂ ಅನೇಕ ಹಾಡುಗಳನ್ನು ಕೊಡುತ್ತ, ಆ ದಾರಿಯಲ್ಲಿ ಕ್ರಮಿಸಬೇಕಿದೆ. ಕಾರಣ, ಅಂತಹ ಹಾಡಿಗೆ ಬಜೆಟ್, ಸೂಕ್ತ ಸಮಯ ಹಾಗೂ ವೇದಿಕೆ ಸಿಗಬೇಕಿದೆ' ಎಂದಿದ್ದಾರೆ ಚಂದನ್ ಶೆಟ್ಟಿ.

ಸುವರ್ಣ ನ್ಯೂಸ್‌ನ 'ಬೆಂಗಳೂರು ಬಝ್' ಪಾಡ್‌ಕಾಸ್ಟ್‌ನಲ್ಲಿ ಭಾಗಿಯಾಗಿದ್ದ ಚಂದನ್ ಶೆಟ್ಟಿಯವರು ಈ ವೇಳೆ ತಮ್ಮ ಲೈಫ್ ಜರ್ನಿಯ ಬಗ್ಗೆ ಹತ್ತು ಹಲವು ಸಂಗತಿಗಳನ್ನು ಅವರು ಹಂಚಿಕೊಂಡಿದ್ದಾರೆ. ನನಗೆ ರೆಗ್ಯುಲರ್ ಪ್ಯಾಟರ್ನ್ ಸಂಗೀತ ಹಾಗು ಹಿನ್ನೆಲೆ ಸಂಗೀತಕ್ಕಿಂತ ಬೇರೇ ಏನನ್ನೋ ವಿಭಿನ್ನವಾಗಿ ಕೊಡಬೇಕು ಎಂಬ ತುಡಿತ ಇತ್ತು. ಅದಕ್ಕಾಗಿ ಹಗಲಿರುಳೂ ಯೋಚಿಸಿ ನಾನು ರಾಪರ್ ದಾರಿ ಹಿಡಿದೆ. ಆದರೆ, ವೃತ್ತಿಜೀವನದ ಪ್ರಾರಂಭದಲ್ಲಿ ನನ್ನ ಸಂಗೀತದ ಆಸಕ್ತಿ ಹಾಗೂ ಪ್ರಯೋಗಕ್ಕೆ ಸರಿಯಾದ ಪ್ಲಾಟ್‌ಫಾರಂ ಸಿಗುತ್ತಿರಲಿಲ್ಲ. ಅದನ್ನು ಹೇಗೆ ಪಡೆಯಬೇಕು, ಅದಕ್ಕಾಗಿ ಏನೂ ಮಾಡಬೇಕು ಎಂಬುದು ಸಹ ಅಷ್ಟಾಗಿ ನನಗೆ ಗೊತ್ತಿರಲಿಲ್ಲ. ಜೊತೆಗೆ, ಉಳಿದುಕೊಳ್ಳಲು, ಹೊಟ್ಟೆಪಾಡು ನೋಡಿಕೊಳ್ಳಲು ಕೂಡ ಯಾವುದೇ ಸೂಕ್ತ ವ್ಯವಸ್ಥೆ ಇರಲಿಲ್ಲ.

ಹೀಗಾಗಿ ಅಲೆಮಾರಿ ಬದುಕು ಆಗ ನನ್ನದಾಗಿತ್ತು. ಪರಿಚಯದವರ, ಸ್ನೇಹಿತರ ಮನೆಗೆ ಹೋಗುತ್ತಿದ್ದೆ. ಅಲ್ಲಿ ಒಂದು ವಾರ ಎಲ್ಲವೂ ಚೆನ್ನಾಗಿರುತ್ತಿತ್ತು. ಆದರೆ, ಬಳಿಕ ಅಲ್ಲಿನ ಪರಿಸ್ಥಿತಿ ಬೇರೆಯಾದ ರೀತಿಯಲ್ಲಿ ಬದಲಾಗುತ್ತಿತ್ತು. ಆಗ ನಾನು ಇನ್ನೊಂದು ಸ್ನೇಹಿತರ ಮನೆಗೆ ಬ್ಯಾಗ್ ಎತ್ತಿಕೊಂಡು ಹೋಗುತ್ತಿದ್ದೆ. ಹೀಗೇ ಸಂಚಾರಿಯ ಬದುಕು ಸಾಗಿಸಬೇಕಿತ್ತು, ಅದನ್ನೂ ಮಾಡಿದೆ. ವಿಭಿನ್ನವಾಗಿ ಸಂಗೀತ ನೀಡುವ ನನ್ನ ಕಸನು ಆಲ್ಬಂ ಹಾಗೂ ಸಂಗೀತ ಕ್ಷೇತ್ರದಲ್ಲಿ ಹೊಸ ದಾರಿ ಹಾಗು ಅವಕಾಶ ಸೃಷ್ಟಿಸಿತು.

ಸಂಗೀತ ಕ್ಷೇತ್ರದಲ್ಲಿ ಅಮದು ವಿಭಿನ್ನ ಎನ್ನುವ ದಾರಿಯಲ್ಲಿ ನಾನು ಸಾಗಿ ಬಂದಿದ್ದೇನೆ. ನನಗೆ ಎಲ್ಲೂ ರೆಡ್ ಕಾರ್ಪೆಟ್ ಸ್ವಾಗತ ಸಿಗಲಿಲ್ಲ. ಅವಕಾಶ ಹುಡುಕಿಕೊಂಡ ಬೆಳೆಯಬೇಕಿತ್ತು. ಕಾರಣ, ಅಂದು ಯೂಟ್ಯೂಬ್ ಹಾಗೂ ಸೋಷಿಯಲ್ ಮೀಡಿಯಾಗಳು ಇಂದಿನಷ್ಟು ಬೆಳೆದಿರಲಿಲ್ಲ. ಸಿನಿಮಾ ಗೀತೆ & ಆಲ್ಬಂ ಸಾಂಗ್ಸ್ ಅಷ್ಟನ್ನೇ ನಂಬಿಕೊಂಡು ನಮ್ಮ ಕೆಲಸ ಮಾಡಬೇಕಿತ್ತು. ಹೀಗಾಗಿ ನನ್ನ ಮ್ಯೂಸಿಕ್ ಜರ್ನಿ ಶುರುವಾದಾಗ ಬಹಳಷ್ಟು ಜನರಂತೆ ನಾನೂ ಕೂಡ ಸಾಕಷ್ಟು ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿಕೊಂಡು ಒದ್ದಾಡಿದ್ದೇನೆ. ಆದರೆ, ಬಳಿಕ ಒಂದೊಂದೇ ಹಂತ ಮೇಲೇರುತ್ತ ಈ ಹಂತಕ್ಕೆ ಬೆಳೆದು ನಿಂತಿದ್ದೇನೆ.

ಬಿಗ್ ಬಾಸ್ ಮೂಲಕ ನನಗೆ ಹೊಸ ಲೋಕವೊಂದು ತೆರೆದಂತಾಯ್ತು. ಅಲ್ಲಿನ ವಿಭಿನ್ನ ಅನುಭವ ಹಾಗೂ ವಿನ್ನರ್ ಆಗಿ ನನಗೆ ಸಿಕ್ಕ ಅಪೂರ್ವ ಜನಬೆಂಬಲ ನನ್ನ ಲೈಪಲ್ಲಿ ಹೊಸದೊಂದು ಅಧ್ಯಾಯ ಬರೆಯಿತು. ಆ ಮೂಲಕ ನಾನು ಟಿವಿ ಸ್ಟಾರ್ ಆಗಿ ಜನಪ್ರಿಯತೆ ಪಡೆದೆ. ಬಳಿಕ, ಸಿನಿಮಾ ನಟನಾಗಿ ಕೂಡ ಕನ್ನಡ ಸಿನಿಪ್ರೇಕ್ಷರ ಮುಂದೆ ಬಂದು ನನ್ನ ಬಯೋಡಾಟ ಬದಲಾಗುವಂತಾಯಿತು. ಇಂದು ನಾನು 'ರಾಪರ್-ಮ್ಯೂಸಿಕ್ ಡೈರೆಕ್ಟರ್ ಹಾಗೂ ನಟ' ಎಂಬ ಟ್ಯಾಗ್‌ಲೈನ್ ಹೊಂದಿರುವುದು ನನಗೆ ನಿಜವಾಗಿಯೂ ಖುಷಿಯ ಸಂಗತಿ. ಆದರೆ ಕನ್ನಡದ ರಾಪ್ ಸಾಂಗ್ಸ್‌ಗಳನ್ನು ಪ್ಯಾನ್ ವೆಲ್ಡ್ ಮಟ್ಟದಲ್ಲಿ ಮೆರೆಸುವುದು ನನ್ನ ಗುರಿ' ಎಂದಿದ್ದಾರೆ ಚಂದನ್ ಶೆಟ್ಟಿ.