ನನ್ನ ಸಂಗೀತ ಆಸಕ್ತಿ ಹಾಗೂ ಪ್ರಯೋಗಕ್ಕೆ ಸರಿಯಾದ ಪ್ಲಾಟ್‌ಫಾರಂ ಸಿಗುತ್ತಿರಲಿಲ್ಲ. ಅದನ್ನು ಹೇಗೆ ಪಡೆಯಬೇಕು, ಅದಕ್ಕಾಗಿ ಏನೂ ಮಾಡಬೇಕು ಎಂಬುದು ಸಹ ಅಷ್ಟಾಗಿ ನನಗೆ ಗೊತ್ತಿರಲಿಲ್ಲ. ಜೊತೆಗೆ, ಉಳಿದುಕೊಳ್ಳಲು, ಹೊಟ್ಟೆಪಾಡು ನೋಡಿಕೊಳ್ಳಲು ಕೂಡ ಯಾವುದೇ ಸೂಕ್ತ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಅಲೆಮಾರಿ ಬದುಕು

ರಾಪರ್, ಸಂಗೀತ ನಿರ್ದೇಶಕ ಹಾಗೂ ನಟ ಚಂದನ್ ಶೆಟ್ಟಿ (Chandan Shetty) ಅವರು ಇತ್ತೀಚೆಗೆ ಏಷ್ಯಾನೆಟ್ ಸುವರ್ಣ ನ್ಯೂಸ್ 'ಬೆಂಗಳೂರು ಬಝ್' ಪಾಡ್‌ಕಾಸ್ಟ್‌ನಲ್ಲಿ ಭಾಗಿಯಾಗಿದ್ದರು. ಅದರಲ್ಲಿ ತಮ್ಮ ಲೈಫ್ ಜರ್ನಿಯ ಬಗ್ಗೆ ಹತ್ತು ಹಲವು ಸಂಗತಿಗಳನ್ನು ಅವರು ಹಂಚಿಕೊಂಡಿದ್ದಾರೆ. ಕೇಳಿದ ಪ್ರಶ್ನೆಗೆ ಉತ್ತರಿಸುತ್ತ ಬಹುಮುಖ ಪ್ರತಿಭೆ ಚಂದನ್‌ಶೆಟ್ಟಿ ಅವರು 'ನಾನು ಸಂಗೀತ ಕ್ಷೇತ್ರಕ್ಕೆ ಬಂದಾಗ ಸಹಜವಾಗಿಯೇ ನಾನೂ ಕೂಡ ಸಿನಿಮಾ ಸಂಗೀತವನ್ನೇ ಆಯ್ಕೆ ಮಾಡಿಕೊಳ್ಳಲು ಬಯಸಿದ್ದೆ. ಆದರೆ, ನನಗೆ ರೆಗ್ಯುಲರ್ ಪ್ಯಾಟರ್ನ್ ಸಂಗೀತ ಹಾಗು ಹಿನ್ನೆಲೆ ಸಂಗೀತಕ್ಕಿಂತ ಬೇರೇ ಏನನ್ನೋ ವಿಭಿನ್ನವಾಗಿ ಕೊಡಬೇಕು ಎಂಬ ತುಡಿತ ಇತ್ತು. ಅದಕ್ಕಾಗಿ ಹಗಲಿರುಳೂ ಯೋಚಿಸುತ್ತಿದ್ದೆ.

Add Asianetnews Kannada as a Preferred SourcegooglePreferred

ಆದರೆ, ನನ್ನ ಸಂಗೀತ ಆಸಕ್ತಿ ಹಾಗೂ ಪ್ರಯೋಗಕ್ಕೆ ಸರಿಯಾದ ಪ್ಲಾಟ್‌ಫಾರಂ ಸಿಗುತ್ತಿರಲಿಲ್ಲ. ಅದನ್ನು ಹೇಗೆ ಪಡೆಯಬೇಕು, ಅದಕ್ಕಾಗಿ ಏನೂ ಮಾಡಬೇಕು ಎಂಬುದು ಸಹ ಅಷ್ಟಾಗಿ ನನಗೆ ಗೊತ್ತಿರಲಿಲ್ಲ. ಜೊತೆಗೆ, ಉಳಿದುಕೊಳ್ಳಲು, ಹೊಟ್ಟೆಪಾಡು ನೋಡಿಕೊಳ್ಳಲು ಕೂಡ ಯಾವುದೇ ಸೂಕ್ತ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಅಲೆಮಾರಿ ಬದುಕು ಆಗ ನನ್ನದಾಗಿತ್ತು. ಪರಿಚಯದವರ, ಸ್ನೇಹಿತರ ಮನೆಗೆ ಹೋಗುತ್ತಿದ್ದೆ. ಅಲ್ಲಿ ಒಂದು ವಾರ ಎಲ್ಲವೂ ಚೆನ್ನಾಗಿರುತ್ತಿತ್ತು. ಆದರೆ, ಬಳಿಕ ಅಲ್ಲಿನ ಪರಿಸ್ಥಿತಿ ಬೇರೆಯಾದ ರೀತಿಯಲ್ಲಿ ಬದಲಾಗುತ್ತಿತ್ತು. ಆಗ ನಾನು ಇನ್ನೊಂದು ಸ್ನೇಹಿತರ ಮನೆಗೆ ಬ್ಯಾಗ್ ಎತ್ತಿಕೊಂಡು ಹೋಗುತ್ತಿದ್ದೆ. ಹೀಗೇ ಸಂಚಾರಿಯ ಬದುಕು ಸಾಗಿಸಬೇಕಿತ್ತು.

ವಿಭಿನ್ನವಾಗಿ ಸಂಗೀತ ನೀಡುವ ನನ್ನ ಕಸನು ಆಲ್ಬಂ ಹಾಗೂ ಸಂಗೀತ ಕ್ಷೇತ್ರದಲ್ಲಿ ಹೊಸ ದಾರಿ ಹಾಗು ಅವಕಾಶ ಸೃಷ್ಟಿಸಿತು. ಅದೇ ದಾರಿಯಲ್ಲಿ ಸಾಗಿದೆ. ನನಗೆ ಎಲ್ಲೂ ರೆಡ್ ಕಾರ್ಪೆಟ್ ಸ್ವಾಗತ ಸಿಗಲಿಲ್ಲ. ಅವಕಾಶ ಹುಡುಕಿಕೊಂಡ ಬೆಳೆಯಬೇಕಿತ್ತು. ಕಾರಣ, ಅಂದು ಯೂಟ್ಯೂಬ್ ಹಾಗೂ ಸೋಷಿಯಲ್ ಮೀಡಿಯಾಗಳು ಇಂದಿನಷ್ಟು ಬೆಳೆದಿರಲಿಲ್ಲ. ಸಿನಿಮಾ ಗೀತೆ & ಆಲ್ಬಂ ಸಾಂಗ್ಸ್ ಅಷ್ಟನ್ನೇ ನಂಬಿಕೊಂಡು ನಮ್ಮ ಕೆಲಸ ಮಾಡಬೇಕಿತ್ತು. ಹೀಗಾಗಿ ನನ್ನ ಮ್ಯೂಸಿಕ್ ಜರ್ನಿ ಶುರುವಾದಾಗ ಬಹಳಷ್ಟು ಜನರಂತೆ ನಾನೂ ಕೂಡ ಸಾಕಷ್ಟು ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿಕೊಂಡು ಒದ್ದಾಡಿದ್ದೇನೆ. ಆದರೆ, ಬಳಿಕ ಒಂದೊಂದೇ ಹಂತ ಮೇಲೇರುತ್ತ ಈ ಹಂತಕ್ಕೆ ಬೆಳೆದು ನಿಂತಿದ್ದೇನೆ.

ಬಿಗ್ ಬಾಸ್ ಮೂಲಕ ನನಗೆ ಹೊಸ ಲೋಕವೊಂದು ತೆರೆದಂತಾಯ್ತು. ಅಲ್ಲಿನ ವಿಭಿನ್ನ ಅನುಭವ ಹಾಗೂ ವಿನ್ನರ್ ಆಗಿ ನನಗೆ ಸಿಕ್ಕ ಅಪೂರ್ವ ಜನಬೆಂಬಲ ನನ್ನ ಲೈಪಲ್ಲಿ ಹೊಸದೊಂದು ಅಧ್ಯಾಯ ಬರೆಯಿತು. ಆ ಮೂಲಕ ನಾನು ಟಿವಿ ಸ್ಟಾರ್ ಆಗಿ ಜನಪ್ರಿಯತೆ ಪಡೆದೆ. ಬಳಿಕ, ಸಿನಿಮಾ ನಟನಾಗಿ ಕೂಡ ಕನ್ನಡ ಸಿನಿಪ್ರೇಕ್ಷರ ಮುಂದೆ ಬಂದು ನನ್ನ ಬಯೋಡಾಟ ಬದಲಾಗುವಂತಾಯಿತು. ಇಂದು ನಾನು 'ರಾಪರ್-ಮ್ಯೂಸಿಕ್ ಡೈರೆಕ್ಟರ್ ಹಾಗೂ ನಟ' ಎಂಬ ಟ್ಯಾಗ್‌ಲೈನ್ ಹೊಂದಿರುವುದು ನನಗೆ ನಿಜವಾಗಿಯೂ ಖುಷಿಯ ಸಂಗತಿ. ಜೊತೆಗೆ ಇದು ನನ್ನ ಜವಾಬ್ದಾರಿಯನ್ನು ಕೂಡ ಹೆಚ್ಚಿಸಿದೆ ಎಂಬ ಅರಿವೂ ಕೂಡ ನನಗಿದೆ' ಎಂದಿದ್ದಾರೆ ಚಂದನ್ ಶೆಟ್ಟಿ.