'ಅಶ್ಲೀಲಮೆಸೇಜ್ ಕಳಿಸೋ ಸೋಶಿಯಲ್‌ಮೀಡಿಯಾ ಪುಂಡರಿಗೆ ಬ್ರೇಕ್ ಹಾಕಬೇಕು. ಫೆಕ್ ಅಕೌಂಟ್‌ಗಳ ಮೂಲಕ ನಟಿ ರಮ್ಯಾಗೆ ಮೆಸೇಜ್ ಕಳಿಸಿದವರನ್ನ ಹುಡುಕಿ, ಈ ಸಮಸ್ಯೆಯನ್ನು ಬುಡ ಸಮೇತ ಕಿತ್ತು ಹಾಕಬೇಕು.. ಯಾವುದೇ ನಟನಟಿಯರಿಗಾಗಲಿ ಫೇಕ್ ಅಕೌಂಟ್ ನಿಂದ ಈ ರೀತಿ ಮೆಸೇಜ್ ಮಾಡೋದು ನಿಲ್ಲಬೇಕು.
ದರ್ಶನ್ ಫ್ಯಾನ್ಸ್ (Darshan Thoogudeepa) ಹಾಗೂ ನಟಿ ರಮ್ಯಾ (Ramya) ನಡುವಿನ ಸೋಷಿಯಲ್ ಮೀಡಿಯಾ ವಾರ್ ಮುಂದುವರೆಯುತ್ತಲೇ ಇದೆ. ನಟಿ ರಮ್ಯಾ ಪರ ಶಿವರಾಜ್‌ಕುಮಾರ್ ಸೇರಿದಂತೆ, ಇಡೀ ದೊಡ್ಮನೆ ಕುಟುಂಬ ನಿಂತಿದೆ. ಆದರೆ, ಅದೇ ದೊಡ್ಮನೆ ಸೊಸೆ, ಯುವ ರಾಜ್‌ಕುಮಾರ್ ಪತ್ನಿ ಶ್ರೀದೇವಿ ತಮ್ಮದೇ ಕುಟುಂಬಕ್ಕೆ ಟಾಂಗ್ ಕೊಟ್ಟಿದ್ದು ವೈರಲ್ ಆಗಿದೆ. ಅಷ್ಟೇ ಅಲ್ಲ, ನಟ ದರ್ಶನ್ ಅಭಿಮಾನಿಗಳು ಎನ್ನಲಾದ 43 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆದರೂ ಕೂಡ ನಟಿ ರಮ್ಯಾ ಬರುತ್ತಿರುವ ಅಶ್ಲೀಲ ಮೆಸೇಜ್ ನಿಂತಿಲ್ಲ ಎನ್ನಲಾಗುತ್ತಿದ್ದು, ಇದೀಗ ಈ ಪ್ರಕರಣ ಹೊಸ ತಿರುವು ಪಡೆಯಲಿರುವ ಸೂಚನೆ ನೀಡಿದೆ ಎನ್ನಲಾಗಿದೆ.
ಹಾಗಿದ್ದರೆ ಅದೇನು ಹೊಸ ತಿರುವು? ಹೌದು, ಇದೀಗ ನಟ ದರ್ಶನ್ ಫ್ಯಾನ್ಸ್ ಹಾಗೂ ನಟಿ ರಮ್ಯಾ ನಡುವಿನ ಜಟಾಪಟಿ ಫಿಲಂ ಚೇಂಬರ್ ಮೂಲಕ ಗೃಹಮಂತ್ರಿ ಮುಂದೆ ಹೋಗುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗುತ್ತಿದೆ. ಫಿಲಂ ಚೇಂಬರ್ ನಿಂದ ಗೃಹ ಮಂತ್ರಿಗಳಿಗೆ ಮನವಿ ಮಾಡಲು ಒತ್ತಾಯ ನಡೆಸಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿದೆ. ಫಿಲಂ ಚೇಂಬರ್ ಅಷ್ಟೇ ಅಲ್ಲ, ಕಲಾವಿದರ ಸಂಘದ ಕಾರ್ಯದರ್ಶಿ ರಾಕ್ ಲೈನ್ ವೆಂಕಟೇಶ್ ಅವರಿಗೆ ಸಹ ಮನವಿ ಮಾಡೋ ಸಾಧ್ಯತೆ ಇದೆ ಎನ್ನಲಾಗ್ತಿದೆ.
'ಅಶ್ಲೀಲಮೆಸೇಜ್ ಕಳಿಸೋ ಸೋಶಿಯಲ್‌ಮೀಡಿಯಾ ಪುಂಡರಿಗೆ ಬ್ರೇಕ್ ಹಾಕಬೇಕು. ಫೆಕ್ ಅಕೌಂಟ್‌ಗಳ ಮೂಲಕ ನಟಿ ರಮ್ಯಾಗೆ ಮೆಸೇಜ್ ಕಳಿಸಿದವರನ್ನ ಹುಡುಕಿ, ಈ ಸಮಸ್ಯೆಯನ್ನು ಬುಡ ಸಮೇತ ಕಿತ್ತು ಹಾಕಬೇಕು.. ಯಾವುದೇ ನಟನಟಿಯರಿಗಾಗಲಿ ಫೇಕ್ ಅಕೌಂಟ್ ನಿಂದ ಈ ರೀತಿ ಮೆಸೇಜ್ ಮಾಡೋದು ನಿಲ್ಲಬೇಕು. ಅವರಿಗೆ ಸಾಮರ್ಥ್ಯ ಇದ್ರೆ ನೇರವಾಗಿ ಮಾತನಾಡುವಂಥ ಬೆಳವಣಿಗೆ ಆಗಬೇಕು.. ಇದನ್ನ ಸಿಎಂ, ಡಿಸಿಎಂ ಹಾಗೂ ಗೃಹ ಮಂತ್ರಿಗಳ ಗಮನಕ್ಕೆ ತನ್ನಿ ಎನ್ನುವ ಒತ್ತಾಯ ನಡೆಯಲಿದೆ ಎಂದು ಫಿಲಂ ಚೇಂಬರ್ ಮಾಜಿ ಅಧ್ಯಕ್ಷರು ಹೇಳಿದ್ದಾರೆ ಎಂಬ ಮಾಹಿತಿ ಇದೆ. ಹೀಗೆ ಭಾ ಮಾ ಹರೀಶ್ ಹಾಗು ಕೆಲವು ನಿರ್ಮಾಪಕರಿಂದ ಮನವಿ ಹೋಗುವ ಸಾಧ್ಯತೆ ಇದೆಯಂತೆ.
ಸಿಕ್ಕ ಮಾಹಿತಿ ಪ್ರಕಾರ, ಇಂದು ಫಿಲಂ ಚೇಂಬರ್ ಗೆ 11.30ಕ್ಕೆ (30 ಜುಲೈ 2025) ಮನವಿ ಸಲ್ಲಿಸಲಿದ್ದಾರೆ. ಫಿಲಂ ಚೇಂಬರ್ ಮೂಲಕ ಗೃಹ ಸಚಿವರಿಗೆ ಮನವಿ ಮಾಡಬೇಕು ಅಂತ ಒತ್ತಾಯಿಸಲಾಗುತ್ತೆ. ಕಲಾವಿದರ ಸಂಘದ ಕಾರ್ಯದರ್ಶಿ ರಾಕ್ ಲೈನ್ ವೆಂಕಟೇಶ್ ಗೂ ಮನವಿ ಮಾಡಲಿದ್ದಾರೆ ಎನ್ನಲಾಗಿದೆ. ಮುಂದಿನ ಬೆಳವಣಿಗೆ ಬಗ್ಗೆ ಕಾದು ನೋಡಬೇಕಾಗಿದೆ.
ನಟ ದರ್ಶನ್ ಫ್ಯಾನ್ಸ್ ಪೇಜ್‌ನಲ್ಲಿ 'ಯಾವುದೇ ವಿವಾದಕ್ಕೆ ಕಿವಿಗೊಡದಂತೆ ಅಭಿಮಾನಿಗಳಲ್ಲಿ ಸ್ವತಃ ದರ್ಶನ್ ಅಭಿಮಾನಿಗಳೇ ಮನವಿ ಮಾಡಿದ್ದಾರೆ. 'ಡಿ ಫ್ಯಾನ್ಸ್' ಆಫೀಶಿಯಲ್ ಪೇಜ್‌ನಲ್ಲಿ ಮನವಿ ಮಾಡಿಕೊಂಡಿರುವ ಪೋಸ್ಟ್‌ನಲ್ಲಿ 'ಯಾವುದಕ್ಕೂ ರಿಯಾಕ್ಟ್ ಮಾಡಬೇಡಿ. ಯಾರಿಗೂ ತೊಂದರೆ ಮಾಡ್ಬೇಡಿ.. ಯಾವುದಕ್ಕೂ ತಲೆ ಕೆಡಿಸ್ಕೊಳ್ಳಬೇಡಿ' ಅಂತ ಪೋಸ್ಟ್ ಮಾಡಲಾಗಿದೆ. ಅಭಿಮಾನಿಗಳ ಆಕ್ರೋಶದಿಂದ ದರ್ಶನ್ ಬೇಲ್ ಪಡೆಯಲು ಸಮಸ್ಯೆ ಆಗಬಹುದು ಎಂಬ ಕಾರಣಕ್ಕೆ ಈ ಪೋಸ್ಟ್ ಮಾಡಲಾಗಿದೆ ಎನ್ನಲಾಗುತ್ತಿದೆ.
ಒಟ್ಟಿನಲ್ಲಿ, ಅತ್ತ ನಟ ದರ್ಶನ್ ಕೇಸ್ ನ್ಯಾಯಾಲಯದಲ್ಲಿ ಅದೂ ಕೂಡ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದ್ದರೆ, ಇತ್ತ ನಟಿ ರಮ್ಯಾ ಮಾಡಿರೋ ಪೋಸ್ಟ್ ನಟ ದರ್ಶನ್ ಅಭಿಮಾನಿಗಳನ್ನು ಕೆರಳಿಸಿದೆ. ಅದಕ್ಕೆ ರಿಯಾಕ್ಟ್ ಮಾಡುವ ಭರದಲ್ಲಿ ದರ್ಶನ್ ಫ್ಯಾನ್ಸ್ ನಟಿ ರಮ್ಯಾ ವಿರುದ್ಧ ಕೆಟ್ಟ ಕಾಮೆಂಟ್ ಮಾಡಿ ಈಗ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗುತ್ತಿದೆ. ಮಧ್ಯೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಕೂಡ ಎಂಟ್ರಿ ಕೊಟ್ಟಿದ್ದು ಇದೀಗ ಈ ಸಮಸ್ಯೆ ಎಲ್ಲಿಗೆ ತಲುಪಬಹುದು ಎಂಬ ತೀವ್ರ ಕುತೂಹಲಕ್ಕೆ ಮನೆಮಾಡಿದೆ. ಈ ಸೋಷಿಯಲ್ ಮೀಡಿಯಾ ವಾರ್ ಮುಂದೆ ಕಾನೂನು ಸಮರಕ್ಕೆ ದಾರಿ ಮಾಡಿಕೊಡಲಿರುವ ಎಲ್ಲಾ ಲಕ್ಷಣ ಕಂಡುಬರುತ್ತಿದೆ.
