Asianet Suvarna News Asianet Suvarna News

'ನನ್ನಂಥ ಹಾಟ್‌ ಹೆಂಡ್ತಿನ ಬಿಟ್ಟು ಹೋಗಿದಾನೆ.. ಪಾಪ' ಎಂದ ರಾಖಿ ಸಾವಂತ್‌!

ಪತಿ ಆದಿಲ್‌ ಖಾನ್‌ ದುರಾನಿ ವಿರುದ್ಧ ಕಾನೂನು ಹೋರಾಟ ಮಾಡುತ್ತಿರುವ ರಾಖಿ ಸಾವಂತ್‌ ದುಬೈಗೆ ಹೋಗುವ ಸಲುವಾಗಿ ಇತ್ತೀಚೆಗೆ ತನ್ನ ಸ್ನೇಹಿತೆಯ ಜೊತೆ ಮುಂಬೈ ಏರ್‌ಪೋರ್ಟ್‌ಗೆ ಆಗಮಿಸಿದ್ದರು. ಈ ವೇಳೆ ತಮ್ಮ ಪತಿಯ ಕುರಿತು ಕನಿಕರ ತೋರಿಸಿದ್ದಾರೆ.

Rakhi Sawant says Adil Khan Durrani  she had changed her dressing sense san
Author
First Published Feb 26, 2023, 10:30 PM IST | Last Updated Feb 26, 2023, 10:30 PM IST

ಮುಂಬೈ (ಫೆ.26): ರಾಖಿ ಸಾವಂತ್‌ ಅಕಾಡೆಮಿ ಉದ್ಘಾಟನೆಗಾಗಿ ಬಾಲಿವುಡ್‌ ನಟಿ ಹಾಗೂ ಡಾನ್ಸರ್‌ ರಾಖಿ ಸಾವಂತ್‌ ದುಬೈಗೆ ತೆರಳಿದ್ದಾರೆ. ತನ್ನ ಸ್ನೇಹಿತೆಯೊಂದಿಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ರಾಖಿ ಸಾವಂತ್‌ ಸಂಪೂರ್ಣವಾಗಿ ಬದಲಾಗಿದ್ದರು. ಪತಿ ಆದಿಲ್‌ ಖಾನ್‌ ದುರಾನಿ ವಿರುದ್ಧ ಕಾನೂನು ಹೋರಾಟ ಮಾಡುತ್ತಿರುವ ರಾಖಿ ಸಾವಂತ್‌, ಏರ್‌ಪೋರ್ಟ್‌ಗೆ ಬಂದಾಗ ಅಲ್ಲಿದ್ದ ಮಾಧ್ಯಮಗಳೊಂದಿಗೆ ಮಾತನಾಡಿದರು. ಈ ವೇಳೆ ಪತಿಯ ಬಗ್ಗೆ ಮಾತನಾಡಿದ ಅವರು, 'ನನ್ನಂಥ ಉತ್ತಮ ನಡತೆಯ ಹಾಟ್‌ ಅಗಿರುವ ಹೆಂಡತಿಯನ್ನು ಬಿಟ್ಟು ಓಡಿಹೋಗಿದ್ದಾನೆ.. ಪಾಪ' ಎಂದು ಕನಿಕರ ವ್ಯಕ್ತಪಡಿಸಿದರು. ಇದೇ ವೇಳೆ, ಪ್ರೀತಿ ಹಾಗೂ ಮದುವೆಯಲ್ಲಿ ಆಗಿರುವ ಮೋಸದ ಕಾರಣದಿಂದ ನಾನು ಸಾಕಷ್ಟು ಬದಲಾಗಿದ್ದೇನೆ. ನನ್ನ ಡ್ರೆಸಿಂಗ್‌ ಸೆನ್ಸ್‌ನಲ್ಲೂ ದೊಡ್ಡ ಮಟ್ಟದ ಬದಲಾವಣೆ ಮಾಡಿಕೊಂಡಿದ್ದೇನೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. 'ನಾನು ಮೊದಲು ಹೀಗೆಯೇ ಇದ್ದೆ. ಬಹಳ ಸುಂದರವಾಗಿದ್ದೆ. ಈಗ ಕೂಡ ಸುಂದರವಾಗಿದ್ದೇನೆ. ನನ್ನ ಪತಿ ನನ್ನಂಥ ಉತ್ತಮ ಹಾಟ್‌ ಹೆಂಡತಿಯನ್ನು ಬಿಟ್ಟು ಓಡಿ ಹೋಗಿದ್ದಾನೆ' ಎಂದು ರಾಖಿ ಸಾವಂತ್‌ ಹೇಳಿದರು. ಇದೇ ವೇಳೆ ಅವರ ಪಕ್ಕದ್ದಲ್ಲಿದ್ದ ಸ್ನೇಹಿತೆ, 'ಅಂಗೂರ್ ಕೋ ಚೋಡ್ಕೆ, ಕೋಯಿ ಲಂಗೂರ್‌ ಡೂಂಡ್‌ ರಹಾ ಹೇ ತೋ, ಕ್ಯಾ ಹೀ ಕರೇಗಾ (ಅಂಗೂರ್‌ ಹಣ್ಣನ್ನು ಬಿಟ್ಟು, ಮಂಗನನ್ನು ಹುಡುಕುತ್ತಿದ್ದರೆ ಏನು ಮಾಡೋಕೆ ಆಗುತ್ತೆ)' ಎಂದು ಹೇಳುವ ಮೂಲಕ ಆದಿಲ್‌ರನ್ನು ಮಂಗನಿಗೆ ಹೋಲಿಸಿದರು.

ರಾಖಿ ಸಾವಂತ್‌ ಪತಿಯನ್ನು ಮಂಗನಿಗೆ ಹೋಲಿಸಿ ಮಾತನಾಡಿದ ಬಳಿಕ ಸ್ವತಃ ರಾಖಿ ಕೂಡ, ನನ್ನ ಗಂಡನಿಗೆ ಮಂಗನನ್ನು ಹುಡುಕುವ ಅಭ್ಯಾಸವಿದೆ ಎಂದು ನಗುತ್ತಲೇ ಹೇಳಿದರು. ನಾವು ಅವನು ಅಂಗೂರದ ಹಣ್ಣನ್ನು ತಿನ್ನಬೇಕು ಎಂದು ಬಯಸಿದ್ದೆ ಎಂದರು. ಇದಕ್ಕೆ ಮಾತು ಸೇರಿಸಿದ ಸ್ನೇಹಿತೆ ಹಾಗೇನಾದರೂ ಮಾಡಿದ್ದರೆ ಆತ ಸ್ವಲ್ಪ ಬೆಳ್ಳಗೆ ಕೂಡ ಆಗುತ್ತಿದ್ದ ಎಂದರು.

'ನಾನೂ ಕೂಡ ಫ್ರಿಡ್ಜ್‌ನಲ್ಲಿ ಹೋಗ್ತಿದ್ದೆ.. ದೇವರು ದೊಡ್ಡವನು ಬಚಾವ್‌ ಆದೆ..!' ಎಂದ ರಾಖಿ ಸಾವಂತ್‌!

ನಾನು ಮೊದಲಿಗೂ ಕೂಡ ಇಷ್ಟೇ ಹಾಟ್‌ ಆಗಿದ್ದೆ. ಆದರೆ, ಪ್ರೀತಿಯ ಸಲುವಾಗಿ ಬದಲಾಗಿದ್ದೆ. ಪ್ರೀತಿ ಹಾಗೂ ಮದುವೆಗಾಗಿ ವ್ಯಕ್ತಿ ಬದಲಾಗ್ತಾನೆ. ನಾನು ಕೂಡ ಬದಲಾಗಿದ್ದೆ. ನಾನು ಆದಿಲ್‌ ಸಲುವಾಗಿ ಸಂಪೂರ್ಣವಾಗಿ ಬದಲಾಗಿದ್ದೆ. ಆದರೆ, ನನಗೆ ಗೊತ್ತಿರಲಿಲ್ಲ ಅವನಿಗೆ 'ಹಾಟ್‌' ಅವತಾರ ಇಷ್ಟ ಅನ್ನೋದು.  ಈಗ ನಾನು ಮತ್ತೆ ಹಾಟ್‌ ಆಗಿದ್ದೇನೆ ಆದಿಲ್‌. ನನ್ನ ಪತಿಗೆ ಹೀಗೆ ಡಿಫರೆಂಟ್‌ ಆಗಿ ಹಾಟ್‌ ಆಗಿ ಬಂದರೆ ಇಷ್ಟ ಆಗುತ್ತದೆಯಂತೆ. ಈಗ ನಿನ್ನ ಹೆಂಡ್ತಿಯೇ ಈ ರೀತಿ ಆಗಿದ್ದಾಳೆ ಎಂದು ರಾಖಿ ಸಾವಂತ್‌ ಹೇಳುತ್ತಾ ತನ್ನ ಸ್ನೇಹಿತೆಯ ಕಡೆಗೆ ನೋಡಿದರು. ಇದಕ್ಕೆ ಸ್ನೇಹಿತೆ, ನೀನು ಮೊದಲಿನಿಂದ ಕೂಡ ಹಾಟ್‌ ಎಂದು ಆಕೆಗೆ ಮುತ್ತನ್ನಿಟ್ಟಿದ್ದಾರೆ.

ಸುಪಾರಿ ಕೊಟ್ಟು ಟ್ರಕ್ ಹರಿಸಿ ಸಾಯಿಸ್ತಾನಂತೆ; ಮೈಸೂರು ಹುಡುಗ ಆದಿಲ್‌ನಿಂದ ರಾಖಿ ಸಾವಂತ್‌ಗೆ ಜೀವ ಬೆದರಿಕೆ

ನಾನು ದುಬೈಗೆ ಹೋಗುತ್ತಿದ್ದೇನೆ. ನನ್ನ ರಾಖಿ ಸಾವಂತ್‌ ಅಕಾಡೆಮಿ ದುಬೈನಲ್ಲಿ ಆರಂಭವಾಗುತ್ತಿದೆ. ನನ್ನ ಸಂಘಟಕರು ದುಬೈನಲ್ಲಿ ನನಗೆ ಬಹಳ ಸಹಾಯ ಮಾಡಿದ್ದಾರೆ. ನನಗೆ ಅಲ್ಲಿಯ ವೀಸಾ ಕೂಡ ಸಿಕ್ಕಿದೆ.  ಈಗ ನಾನು ಅಲ್ಲಿ ರಾಖಿ ಸಾವಂತ್‌ ಅಕಾಡೆಮಿ ಆರಂಭ ಮಾಡಲು ಹೋಗುತ್ತಿದ್ದೇನೆ. ನೃತ್ಯ, ನಟನೆ, ಸಿನಿಮಾ ಫೋಟೋಗ್ರಫಿ ಸೇರಿದಂತೆ ಸಿನಿಮಾಕ್ಕೆ ಸಂಬಂಧಿಸಿದ ಎಲ್ಲವನ್ನೂ ಅಲ್ಲಿ ಕಲಿಸಲಾಗುತ್ತಿದೆ. ಅಲ್ಲಿಯ ಜನರಿಂದ ನಾವು ಬಾಲಿವುಡ್‌ಗೆ ಸಪೋರ್ಟ್‌ ನೀಡಲಿದ್ದೇವೆ ಎಂದು ಹೇಳಿದರು.

ರಾಖಿ ಸಾವಂತ್‌ ಅಕಾಡೆಮಿ ದುಬೈನಲ್ಲಿ ಉದ್ಘಾಟನೆ ಆಗಿರೋದು ಆರಂಭ ಮಾತ್ರ. ದೇವರ ದಯೆ ಇದ್ದರೆ, ಭಾರತದ ಪ್ರತಿಯೊಂದು ಭಾಗದಲ್ಲೂ ನನ್ನ ಅಕಾಡೆಮಿ ಆಗಲಿದೆ. ಶೀಘ್ರದಲ್ಲಿಯೇ ಮುಂಬೈನಲ್ಲೂ ಅಕಾಡೆಮಿ ತೆರೆಯಲಿದ್ದೇನೆ ಎಂದು ಹೇಳಿದರು.

Latest Videos
Follow Us:
Download App:
  • android
  • ios