ಬಿಗ್‌ ಬಾಸ್‌ ಮೂಲಕ ಪ್ರಖ್ಯಾತಿ ಪಡೆದ ರಾಖಿ ಸಾವಂತ್‌, ಈಗಾಗಲೇ ಮೈಸೂರು ಮೂಲದ ಪತಿ ಆದಿಲ್‌ ಖಾನ್‌ ವಿರುದ್ಧ ಸಾಕಷ್ಟು ಆರೋಪಗಳನ್ನು ಮಾಡಿದ್ದಾರೆ. ಈ ನಡುವೆ ಪತಿ ಜೈಲಿನಲ್ಲಿದ್ದಾರೆ. ಆದರೆ, ದಿನಕ್ಕೆ ಒಮ್ಮೆಯಾದರೂ ಮಾಧ್ಯಮಗಳನ್ನು ಭೇಟಿ ಮಾಡುವ ಅಭ್ಯಾಸ ಮಾಡಿಕೊಂಡಂತಿರುವ ರಾಖಿ ಸಾವಂತ್‌, ಮತ್ತೊಂದು ಹೇಳಿಕೆ ನೀಡಿದ್ದಾರೆ. 

ನವದೆಹಲಿ (ಫೆ.21): ಮದುವೆಯಾಗಿ ಕೆಲವೇ ದಿನಗಳಲ್ಲಿಯೇ ಗಂಡ ಆದಿಲ್‌ ಖಾನ್‌ ಜೊತೆಗಿನ ಮನಸ್ತಾಪದಿಂದಾಗಿ ನಟಿ, ಡಾನ್ಸರ್‌ ಹಾಗೂ ಬಿಗ್‌ ಬಾಸ್‌ ಮೂಲಕ ಪ್ರಸಿದ್ಧಿ ಪಡೆದ ರಾಖಿ ಸಾವಂತ್‌ ಸುದ್ದಿಯಲ್ಲಿದ್ದಾರೆ. ಒಂದು ಕಡೆ ರಾಖಿ ಸಾವಂತ್‌ ನೀಡಿದ ದೂರಿನ ಆಧಾರದಲ್ಲಿ ಮೈಸೂರು ಮೂಲದ ಪತಿ ಆದಿಲ್‌ ಖಾನ್‌ ಜೈಲಿನಲ್ಲಿದ್ದರೆ, ರಾಖಿ ಸಾವಂತ್‌ ಮಾಧ್ಯಮಗಳ ಎದುರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಮತ್ತೆ ಮಾಧ್ಯಮಗಳ ಎದುರು ಬಂದಿದ್ದ ರಾಖಿ ಸಾವಂತ್‌, ಕೆನ್ನೆ ಕೆನ್ನೆಗೆ ಹೊಡೆದುಕೊಳ್ಳುತ್ತಾ ಅಯ್ಯಯ್ಯೋ ಎಂಥಾ ತಪ್ಪು ಮಾಡಿಬಿಟ್ಟೆ ಎಂದು ಕಣ್ಣೀರು ಹಾಕಿದರು. ಜೀವನದಲ್ಲಿ ಕಷ್ಠದ ಸಮಯದಲ್ಲಿರುವ ರಾಖಿ ಸಾವಂತ್‌ ಪತ್ರಕರ್ತರು ಎದುರುಗಡೆ ಸಿಕ್ಕು ಏನಾಯ್ತಮ್ಮ ಎಂದು ಕೇಳಿದಾಗ, ತನ್ನ ಕೆನ್ನೆಗೆ ಹೊಡೆದುಕೊಳ್ಳಲು ಆರಂಭಿಸಿದ್ದರು. ಭಾವುಕರಾಗಿ ಕಣ್ಣಲ್ಲಿ ನೀರು ತುಂಬಿಕೊಂಡಿದ್ದ ರಾಖಿ ಸಾವಂತ್‌, 'ನಾನ್ಯಾಕ ಆದಿಲ್‌ನ ಪ್ರೀತಿಸಿದೆ?' ಎಂದು ಪಶ್ಚಾತ್ತಾಪ ಮಾಡಿಕೊಂಡರು. ಶ್ರದ್ಧಾ ವಾಕರ್‌ ರೀತಿಯಲ್ಲಿಯೇ ನನ್ನನ್ನೂ ಕೂಡ ಫ್ರಿಡ್ಜ್‌ನಲ್ಲಿ ಹಾಕುವ ಪ್ಲ್ಯಾನ್‌ ಮಾಡಿದ್ದರು ಎಂದು ಮತ್ತೊಮ್ಮೆ ಹೇಳಿದ್ದಾರೆ. 'ದೇಶದ ಕೆಲವೊಂದು ಹೆಣ್ಣುಮಕ್ಕಳ ದೇಹಗಳು ಫ್ರಿಡ್ಜ್‌ನಲ್ಲಿ ಸಿಕ್ಕಿದ್ದವು. ಬಹುಶಃ ನನ್ನ ಕಥೆ ಕೂಡ ಅದೇ ರೀತಿ ಆಗುತ್ತಿತ್ತು. ನಾನೂ ಕೂಡ್‌ ಫ್ರಿಡ್ಜ್‌ನ ಒಳಗೆ ಹೋಗುತ್ತಿದ್ದೆ... ಆದರೆ ದೇವರು ದೊಡ್ಡವನು ಬಚಾವ್‌ ಆಗಿದ್ದೇನೆ' ಎಂದು ಹೇಳಿದ್ದಾರೆ.

'ನನಗೆ ನಾನೇ ಕೆನ್ನೆಗೆ ಹೊಡೆದುಕೊಳ್ಳಬೇಕು ಎಂದು ಅನಿಸುತ್ತಿದೆ. ನಿಜವಾಗಲೂ ನನಗೆ ಹೊಡೆದುಕೊಳ್ಳಬೇಕು ಎಂದೇ ಅನಿಸುತ್ತಿದೆ. ಆದಿಲ್‌ನನ್ನು ನಾನೇಕೆ ನಂಬಿದೆ. ನಾನ್ಯಾಕೆ ಅವನನ್ನು ಇಷ್ಟಪಟ್ಟೆ. ಅವನನ್ನು ನಾನು ಅಷ್ಟು ನಂಬಿದ್ದಾದರೂ ಏಕೆ. ಈಗ ನಾನೆಲ್ಲಿ ಹೋಗಲಿ' ಎಂದು ಕೆನ್ನೆಗೆ ಹೊಡೆದುಕೊಂಡು ರಾಖಿ ಸಾವಂತ್‌ ಮಾಧ್ಯಮಗಳಿಗೆ ಮಾತನಾಡುತ್ತಿದ್ದರೆ, ಪತ್ರಕರ್ತರು ರಾಖಿ ನೀವು ಹಾಗೆಲ್ಲ ಮಾಡಿಕೊಳ್ಳಬೇಡಿ.. ಸಮಾಧಾನ ಮಾಡಿಕೊಳ್ಳಿ ಎಂದು ಸಂತೈಸುತ್ತಿದ್ದರು. ನನ್ನ ಜೀವನದಲ್ಲೂ ಘೋರ ದುರಂತ ನಡೆಯುವುದರಲ್ಲಿತ್ತು. ನಾನೂ ಕೂಡ ಫ್ರಿಡ್ಜ್‌ ಒಳಗೆ, ನದಿಯಲ್ಲಿ, ಫ್ಯಾನ್‌ಗೆ ನೇತು ಹಾಕಿಕೊಳ್ಳಬೇಕಿತ್ತು. ಆದಿಲ್‌ ಎಲ್ಲಾ ಪ್ಲ್ಯಾನ್‌ ಮಾಡಿಕೊಂಡಿದ್ದ. ನೀವು ಅವನ ಮೆಸೇಜ್‌ಗಳು ಎಲ್ಲವನ್ನೂ ನೋಡಿದ್ದೀರಿ. ಅವನು ಒಂದು ಹುಡುಗಿಗೆ ನನಗೆ ಒಬ್ಬಳು ಹೆಂಡತಿ ಬೇಕು. ಅದು ನೀನಾಗಿರಬೇಕು ಎಂದು ಮೆಸೇಜ್‌ ಮಾಡಿದ್ದಾನೆ. ರಾಖಿಯನ್ನು ನಾನು ಡಿಸೆಂಬರ್‌-ನವೆಂಬರ್‌ ವೇಳೆಗೆ ಬಿಟ್ಟುಬಿಡುತ್ತೇನೆ. ಆ ಬಳಿಕ ನಾನು ಬಿಗ್‌ ಬಾಸ್‌ಗೆ (ಮರಾಠಿ) ಹೋಗ್ತೇನೆ ಎಂದಿದ್ದ. ನಾನು ಬಚಾವ್‌ ಆಗಿದ್ದೇನೆ.

ಸುಪಾರಿ ಕೊಟ್ಟು ಟ್ರಕ್ ಹರಿಸಿ ಸಾಯಿಸ್ತಾನಂತೆ; ಮೈಸೂರು ಹುಡುಗ ಆದಿಲ್‌ನಿಂದ ರಾಖಿ ಸಾವಂತ್‌ಗೆ ಜೀವ ಬೆದರಿಕೆ

ಸಂಜಯ್‌ ದತ್ ಆಗ್ತೇನೆ ಅಂದುಕೊಂಡಿದ್ದ: ಆದಿಲ್‌ಗೆ ಯಾವುದೇ ಪಶ್ಚಾತ್ತಾಪವಿಲ್ಲ. ಈ ವಿಚಾರದಿಂದ ನೆಗೆಟಿವ್‌ ಪಬ್ಲಿಸಿಟಿಯಾಗಿದ್ದರೂ ಅದಕ್ಕೆ ಆತನಿಗೆ ಬೇಸರವಿಲ್ಲ. ಸಂಜಯ್‌ ದತ್‌ ರೀತಿಯಲ್ಲಿ ತನಗೆ ಪಬ್ಲಿಸಿಟಿ ಆಗ್ತಿದೆ ಎಂದುಕೊಂಡಿದ್ದಾನೆ. ಈಗ ಬಾಲಿವುಡ್‌ನಲ್ಲಿ ದಿನಕ್ಕೆ 10 ಲಕ್ಷ ಸಂಪಾದನೆ ಮಾಡಬಹುದು ಅಂದುಕೊಂಡಿದ್ದಾನೆ. ಏನ್‌ ಹೇಳೋದು ಇದಕ್ಕೆ. ಆದರೆ, ಇದೆಲ್ಲ ಆಗೋದಿಲ್ಲ. ಸಂಜಯ್‌ ದತ್ ಅವರ ಲೆವಲ್ಲೇ ಬೇರೆ ಎಂದು ಹೇಳಿದ್ದಾರೆ.

Rakhi Sawant Mother Passes Away: ನಟಿ ರಾಖಿ ಸಾವಂತ್‌ ತಾಯಿ ಜಯಾ ಭೇದಾ ಕ್ಯಾನ್ಸರ್‌ನಿಂದ ನಿಧನ

ಕಾರಿನಲ್ಲಿದ್ದ ಆದಿಲ್‌ ಹೆಸರನ್ನು ತೆಗೆದ ಮಾಧ್ಯಮದವರು: ಇದೇ ವೇಳೆ ರಾಖಿ ಸಾವಂತ್‌ ಕಾರ್‌ನ ಮೇಲೆ ಆದಿಲ್‌ ಎನ್ನುವ ಹೆಸರಿತ್ತು. ಇದನ್ನು ಮಾಧ್ಯಮದವರೇ ತೆಗೆದು ಹಾಕಿದರು. ಈ ವೇಳೆ ಮಾತನಾಡಿದ ರಾಖಿ ಸಾವಂತ್‌, 'ಈಗ ರಾಖಿ ಎನ್ನುವ ಹೆಸರು ಬರೆಸುತ್ತೇನೆ' ಎಂದರು. ನನ್ನ ಹೆಸರಿನಲ್ಲಿ ಆತ 6-7 ಕಾರ್‌ ಖರೀದಿ ಮಾಡಿದ್ದ. ಎಲ್ಲವೂ ನನ್ನ ಹಣದಲ್ಲಿಯೇ ಖರೀದಿಸಿದ್ದ. ಗಾಡಿಯ ಸ್ಟೇಟ್‌ಮೆಂಟ್‌ಗಳನ್ನೂ ನಾನು ನಿಮಗೆ ನೀಡಿದ್ದೇನೆ ಎಂದು ಹೇಳಿದ್ದಾರೆ.