ಬಾಲಿವುಡ್ ಗಾಸಿಪ್ ಕ್ವೀನ್ ರಾಖಿ ಸಾವಂತ್ ಇನ್‌ಸ್ಟಾಗ್ರಾಂನಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ಸಲಹೆ ನೀಡಿರುವ ವೀಡಿಯೊವೊಂದನ್ನು ಅಪ್ಲೋಡ್ ಮಾಡಿದ್ದಾರೆ. ಆ ಮೂಲಕ ಮತ್ತೆ ಟಾಕ್ ಆಫ್ ದಿ ಬಿ ಟೌನ್ ಆಗಿದ್ದಾರೆ.

ಸದಾ ಒಂದಲ್ಲ ಒಂದು ವಿಷಯವಾಗಿ ಮೋದಿ ವಿಷಯವಾಗಿ ಮಾತನಾಡದೇ ಹೋದರೆ ರಾಖಿಗೆ ಬಹುಶಃ ತಿಂದಿದ್ದು ಜೀರ್ಣವಾಗೋಲ್ಲ. ಪದೇ ಪದೇ ಮೋದಿ ಕಾಲೆಳೆಯುವ ಈ ಬಾಲಿವುಡ್ ಬೆಡಗಿ ಇದೀಗ ಮತ್ತೆ ಮೋದಿ ಚುನಾವಣೆಯಲ್ಲಿ ಗೆಲ್ಲಬೇಕೆಂದರೆ ಏನು ಮಾಡಬೇಕೆಂದು ಹೇಳಿದ್ದಾರೆ.

'ಬಾಲಿವುಡ್ ಗಣ್ಯರೊಂದಿಗೆ ಓಡಾಡುವ ಬದಲು, ಬಡವರೊಂದಿಗೆ ಓಡಾಡಿ. ಸಿರಿವಂತರೊಂದಿಗೆ ಕಾಣಿಸಿಕೊಂಡರೆ ಏನೂ ಉಪಯೋಗವಿಲ್ಲ...' ಎಂದು ಮೋದಿಗೆ ರಾಖಿ ಸಲಹೆ ನೀಡಿದ್ದಾರೆ. ಆ ಮೂಲಕ ರಾಖಿ ಈ ಬಾರಿ ತುಸು ಪ್ರಬುದ್ಧರಾಗಿ ಮಾತನಾಡಿದ್ದಾರೆಂದೆನಿಸುವುದೂ ಸುಳ್ಳಲ್ಲ.

ಮೋದಿ ಬಂದರೆ ಮಾತ್ರ ಮದುವೆಯಾಗುವೆ ಎಂದ ರಾಖಿ, ಕಡೆಗೆ ಮದುವೆಯಾಗುವ ನಿರ್ಧಾರವನ್ನೇ ಬಿಟ್ಟು ಬಿಟ್ಟರು. ರಿಯಾಲಿಟೋ ಶೋ ಸ್ಟಾರ್ ದೀಪಕ್ ಕಲಾಲ್ ಅವರೊಂದಿಗೆ ಅಮೆರಿಕದಲ್ಲಿ ನಗ್ನವಾಗಿ ದಾಂಪತ್ಯಕ್ಕೆ ಕಾಲಿರಿಸುತ್ತೇನೆ ಎಂದು ಹೇಳಿ, ರಾಖಿ ಸಿಕ್ಕಾಪಟ್ಟೆ ಪ್ರಚಾರ ಗಿಟ್ಟಿಸಿಕೊಂಡಿದ್ದು ಇನ್ನು ಎಲ್ಲರಿಗೂ ನೆನಪಿದೆ.

ರಾಖಿ ಸಾವಂತ್ ಬ್ಯೂಟಿ ಸೀಕ್ರೆಟ್ ಸಗಣಿಯಂತೆ?