ಕಳೆದ ಜೂನ್ 22ರಂದು ತಮಿಳುನಾಡು ಸಿಎಂ ವಿಜಯ್ ತಮ್ಮ 52ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ಸಾರ್ವಜನಿಕವಾಗಿ ಶುಭ ಕೋರಿದ್ದರು. ಆದರೆ ರಜನಿ ಅವರು ಟ್ವಿಟರ್‌ನಲ್ಲಿ ಪೋಸ್ಟ್ ಹಾಕಿಲ್ಲ ಎಂಬ ಕಾರಣಕ್ಕೆ ಟ್ರೋಲರ್‌ಗಳು ಕಿಡಿಕಾರಿದ್ದರು.

ತಲೈವಾ' ಈಗ ಮೌನ ಮುರಿದಿದ್ದಾರೆ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದಶಕಗಳಿಂದ ಬೆಳ್ಳಿತೆರೆಯನ್ನು ಅಧಿಪತಿಯಂತೆ ಆಳುತ್ತಿರುವ 'ಸೂಪರ್ ಸ್ಟಾರ್' ರಜನಿಕಾಂತ್ (Rajinikanth) ಅವರ ಮೌನವೇ ಒಂದು ಶಕ್ತಿ. ಆದರೆ ಈ ಮೌನವನ್ನೇ ಬಂಡವಾಳ ಮಾಡಿಕೊಂಡ ಟ್ರೋಲರ್‌ಗಳು ಇತ್ತೀಚೆಗೆ ಅತಿಯಾಗಿ ಆಡುತ್ತಿದ್ದರು. ತಮಿಳುನಾಡು ರಾಜಕೀಯ, ಚುನಾವಣೆ ಹಾಗೂ ಮುಖ್ಯಮಂತ್ರಿ ವಿಜಯ್ ಅವರ ಜನ್ಮದಿನದ ವಿಚಾರದಲ್ಲಿ ರಜನಿ ಅವರನ್ನು ಗುರಿಯಾಗಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್‌ಗಳ ಸುರಿಮಳೆಯೇ ಆಗುತ್ತಿತ್ತು. ಇಷ್ಟು ದಿನ ಸುಮ್ಮನಿದ್ದ 'ತಲೈವಾ' ಈಗ ಮೌನ ಮುರಿದಿದ್ದಾರೆ. ಅದು ಕೂಡ ತಮ್ಮದೇ ಆದ ವಿಶಿಷ್ಟ ಹಾಗೂ ಮಾರ್ಮಿಕ ಶೈಲಿಯಲ್ಲಿ!

ಮಾತಾಡಿದ್ರೂ ಕಷ್ಟ, ಸುಮ್ಮನಿದ್ರೂ ಕಷ್ಟ!

ಇತ್ತೀಚೆಗೆ ನಡೆದ ತಮ್ಮ ಹೊಸ ಚಿತ್ರ 'ಧರ್ಮನ್' (Dharman) ಲಾಂಚ್ ಕಾರ್ಯಕ್ರಮದಲ್ಲಿ ರಜನಿ ಅವರು ಟ್ರೋಲರ್‌ಗಳ ಬಗ್ಗೆ ಬಹಳ ಗಂಭೀರವಾಗಿ ಮತ್ತು ಅಷ್ಟೇ ಶಾಂತವಾಗಿ ಮಾತನಾಡಿದರು. "ಈ ಕಾಲದಲ್ಲಿ ಎಲ್ಲರನ್ನೂ ಮೆಚ್ಚಿಸುವುದು ಅಸಾಧ್ಯ" ಎಂಬ ಸತ್ಯವನ್ನು ವಿವರಿಸುತ್ತಾ, "ನಾವು ಮೌನವಾಗಿದ್ದರೆ, ಏಕೆ ಮಾತನಾಡುತ್ತಿಲ್ಲ ಎಂದು ಜನರು ಕೇಳುತ್ತಾರೆ. ನಾವು ಮಾತನಾಡಲು ಪ್ರಾರಂಭಿಸಿದರೆ, ಮಾತನ್ನು ಮುಂದುವರಿಸಲು ಹೇಳುತ್ತಾರೆ. ನಾವು ಮಾತನಾಡುವುದನ್ನು ಮುಂದುವರಿಸಿದರೆ, ಮೌನವಾಗಿರಬೇಕಿತ್ತು ಎನ್ನುತ್ತಾರೆ. ನಮ್ಮನ್ನು ಇಷ್ಟಪಡದವರು ನಾವು ಏನೇ ಮಾಡಿದರೂ ಅದನ್ನು ಟೀಕೆ ಮಾಡಿಯೇ ಮಾಡುತ್ತಾರೆ. ಹೀಗಾಗಿ ಪ್ರತಿಯೊಬ್ಬರೂ ನಮ್ಮನ್ನು ಹೊಗಳಬೇಕು ಎಂದು ನಿರೀಕ್ಷಿಸುವುದು ಮೂರ್ಖತನ," ಎಂದು ಹೇಳುವ ಮೂಲಕ ಟ್ರೋಲರ್‌ಗಳಿಗೆ ಖಡಕ್ ಉತ್ತರ ನೀಡಿದ್ದಾರೆ.

ಸಿಎಂ ವಿಜಯ್ ಬರ್ತ್‌ಡೇ ವಿಷ್ಣ ಮಾಡಿಲ್ಲ ಅಂದವರಿಗೆ ಪಂಚ್!

ಕಳೆದ ಜೂನ್ 22ರಂದು ತಮಿಳುನಾಡು ಸಿಎಂ ವಿಜಯ್ ತಮ್ಮ 52ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ಸಾರ್ವಜನಿಕವಾಗಿ ಶುಭ ಕೋರಿದ್ದರು. ಆದರೆ ರಜನಿ ಅವರು ಟ್ವಿಟರ್‌ನಲ್ಲಿ ಪೋಸ್ಟ್ ಹಾಕಿಲ್ಲ ಎಂಬ ಕಾರಣಕ್ಕೆ ಟ್ರೋಲರ್‌ಗಳು ಕಿಡಿಕಾರಿದ್ದರು. ಇದಕ್ಕೆ ಉತ್ತರಿಸಿದ ರಜನಿ, "ನಾವಿಬ್ಬರೂ ಖಾಸಗಿಯಾಗಿ ಮಾತನಾಡಿದ್ದೇವೆ, ನಾನು ಅವರಿಗೆ ಶುಭ ಕೋರಿದ್ದೇನೆ" ಎಂದು ಹೇಳುವ ಮೂಲಕ ಅನಗತ್ಯ ಚರ್ಚೆಗಳಿಗೆ ತೆರೆ ಎಳೆದಿದ್ದಾರೆ. ವಿಜಯ್ ಅವರ ಟಿವಿಕೆ (TVK) ಪಕ್ಷ ಚುನಾವಣೆಯಲ್ಲಿ ಗೆದ್ದಾಗ ಮೊದಲು ಶುಭ ಹಾರೈಸಿದ್ದೇ ರಜನಿ ಎಂಬುದು ಇಲ್ಲಿ ಗಮನಾರ್ಹ.

'ಧರ್ಮನ್' ಚಿತ್ರದಲ್ಲಿ ರಜನಿ ಹವಾ: ಡೆಡ್ಲಿ ಡಾಕ್ಟರ್ ಅವತಾರ!

ಇನ್ನು ರಜನಿ ಅಭಿಮಾನಿಗಳಿಗೆ ಈ ಕಾರ್ಯಕ್ರಮದಲ್ಲಿ ಮತ್ತೊಂದು ದೊಡ್ಡ ಸರ್ಪ್ರೈಸ್ ಕಾದಿತ್ತು. ರಜನಿಕಾಂತ್ ಅವರ ಮುಂದಿನ ಚಿತ್ರ 'ಧರ್ಮನ್' ಅಧಿಕೃತವಾಗಿ ಲಾಂಚ್ ಆಗಿದೆ. ಈ ಚಿತ್ರದ ವಿಶೇಷತೆ ಏನೆಂದರೆ, ರಜನಿಯ ಪರಮ ಆಪ್ತ ಕಮಲ್ ಹಾಸನ್ ಅವರು ತಮ್ಮ 'ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್' ಬ್ಯಾನರ್ ಅಡಿಯಲ್ಲಿ ಇದನ್ನು ನಿರ್ಮಿಸುತ್ತಿದ್ದಾರೆ.

ಅಶ್ವತ್ ಮಾರಿಮುತ್ತು ನಿರ್ದೇಶನದ ಈ ಚಿತ್ರದಲ್ಲಿ ರಜನಿಕಾಂತ್ "ಡೆಡ್ಲಿ ಡಾಕ್ಟರ್" ಎಂಬ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಹಿರಿಯ ನಟಿ ಸಿಮ್ರಾನ್, ರಾಶಿ ಖನ್ನಾ ಮತ್ತು ಕಾಮಿಡಿ ಕಿಂಗ್ ಯೋಗಿ ಬಾಬು ಅವರಂತಹ ದೊಡ್ಡ ತಾರಾಗಣವಿರಲಿದ್ದು, ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ. ಒಟ್ಟಿನಲ್ಲಿ, ಟ್ರೋಲರ್‌ಗಳಿಗೆ ಮಾತಿನ ಮೂಲಕ ಮತ್ತು ಶೀಘ್ರದಲ್ಲೇ ಸಿನಿಮಾದ ಮೂಲಕ ಉತ್ತರ ಕೊಡಲು 'ತಲೈವಾ' ಸಜ್ಜಾಗಿದ್ದಾರೆ!