₹100 ಕೋಟಿ ಬಜೆಟ್‌ನಲ್ಲಿ ಕಾಂತಾರ 2 ನಿರ್ಮಾಣ: ರಿಷಬ್ ಚಿತ್ರದ ಬಗ್ಗೆ ರಾಜ್ ಬಿ ಶೆಟ್ಟಿ ಹೀಗೆ ಹೇಳಿದ್ಯಾಕೆ?
‘ರಿಷಬ್ ಶೆಟ್ಟಿ ನಟನೆಯ ‘ಕಾಂತಾರ 2’ ಸಿನಿಮಾ ಸುಮಾರು 100 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗಲಿದೆ’ ಎಂದು ರಾಜ್ ಬಿ ಶೆಟ್ಟಿ ತಿಳಿಸಿದ್ದಾರೆ. ರಾಜ್ ನಟನೆಯ ‘ಟೋಬಿ’ ಸಿನಿಮಾ ನಾಳೆ (ಸೆ.22) ಮಲಯಾಳಂನಲ್ಲಿ ಬಿಡುಗಡೆಯಾಗಲಿದೆ.

‘ರಿಷಬ್ ಶೆಟ್ಟಿ ನಟನೆಯ ‘ಕಾಂತಾರ 2’ ಸಿನಿಮಾ ಸುಮಾರು 100 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗಲಿದೆ’ ಎಂದು ರಾಜ್ ಬಿ ಶೆಟ್ಟಿ ತಿಳಿಸಿದ್ದಾರೆ. ರಾಜ್ ನಟನೆಯ ‘ಟೋಬಿ’ ಸಿನಿಮಾ ನಾಳೆ (ಸೆ.22) ಮಲಯಾಳಂನಲ್ಲಿ ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ಪ್ರಚಾರದಲ್ಲಿ ಪಾಲ್ಗೊಂಡ ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತ ಈ ವಿಷಯ ತಿಳಿಸಿದರು. ‘ಕಾಂತಾರ-2 ಸಿನಿಮಾ ಇನ್ನೂ ಬರವಣಿಗೆ ಹಂತದಲ್ಲಿದೆ. ಮೊದಲ ಭಾಗಕ್ಕಿಂತ ಹತ್ತು ಪಟ್ಟು ಹೆಚ್ಚು ಬಜೆಟ್‌ನಲ್ಲಿ ಅದ್ದೂರಿಯಾಗಿ ಈ ಸಿನಿಮಾ ಮೂಡಿಬರಲಿದೆ. ಹೆಚ್ಚುಕಮ್ಮಿ ರೂ.100 ಕೋಟಿ ಬಜೆಟ್ ಇರಲಿದೆ’ ಎಂದಿದ್ದಾರೆ.
ರಕ್ಷಿತ್ ನಟನೆಯ ‘777 ಚಾರ್ಲಿ’ಯ ಸೀಕ್ವೆಲ್ ಕುರಿತ ಪ್ರಶ್ನೆಗೆ ‘ಆ ಸಾಧ್ಯತೆ ಸದ್ಯಕ್ಕಿಲ್ಲ. ನಿರ್ದೇಶಕ ಕಿರಣ್‌ರಾಜ್ ಬೇರೆ ಕಥೆಯ ತಯಾರಿಯಲ್ಲಿದ್ದಾರೆ. ಆ ಸಿನಿಮಾದಲ್ಲಿ ರಕ್ಷಿತ್ ನಟಿಸುವ ಸಾಧ್ಯತೆ ಇದೆ. ನಾನು ಇರೋದಿಲ್ಲ’ ಎಂದಿದ್ದಾರೆ. ರಾಜ್ ಬಿ ಶೆಟ್ಟಿ ನಟನೆಯ ‘ಟೋಬಿ’ ಸಿನಿಮಾದ ಮಲಯಾಳಂ ಟ್ರೇಲರ್ ಈಗಾಗಲೇ ಬಿಡುಗಡೆಯಾಗಿದ್ದು ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಬಾಸಿಲ್ ಅಲ್‌ಚಲಕ್ಕಲ್ ನಿರ್ದೇಶನದ ಈ ಸಿನಿಮಾವನ್ನು ಕೇರಳದಲ್ಲಿ ದುಲ್ಖರ್ ಸಲ್ಮಾನ್ ಅವರ ವೇಫರರ್ ಫಿಲಂಸ್ ವಿತರಣೆ ಮಾಡಲಿದೆ.
'ಕಾಂತಾರ-2' ಹುಟ್ಟುಹಾಕಿದೆ 10 ಪ್ರಶ್ನೆಗಳು, ಪಂಜುರ್ಲಿ ಕಾಡು ಬೆಟ್ಟಕ್ಕೆ ಹೇಗೆ ಬಂತು? ವಿಸ್ಮಯ ಕತೆ ಇದು!
ಕಾಂತಾರ ಪಾರ್ಟ್ 2ಗಾಗಿ 11 ಕೆಜಿ ತೂಕ ಇಳಿಸಿಕೊಳ್ಳಲಿರುವ ರಿಷಬ್ ಶೆಟ್ಟಿ: ಕಾಂತಾರ 2ನಲ್ಲಿನ ತನ್ನ ಪಾತ್ರಕ್ಕಾಗಿ ರಿಷಬ್ ಶೆಟ್ಟಿ ಕೂಡಾ ತೀವ್ರ ರೂಪಾಂತರಕ್ಕೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ. ತೆಳ್ಳಗೆ ಕಾಣಿಸಿಕೊಳ್ಳಲು ಸುಮಾರು 11 ಕಿಲೋಗಳನ್ನು ಇಳಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. 'ಕಾಂತಾರ 2' ಚಿತ್ರದಲ್ಲಿ ರಿಷಬ್ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದು, ಅದಕ್ಕಾಗಿ 11 ಕೆಜಿ ದೇಹ ತೂಕವನ್ನು ಕಮ್ಮಿ ಮಾಡಿಕೊಳ್ಳಲಿದ್ದಾರೆ. ಇನ್ನು, 'ಕಾಂತಾರ 2' ಕಥೆಯು ಕ್ರಿ ಶ 400ರಲ್ಲಿ ನಡೆಯಲಿದೆ ಎಂಬ ಮಾತು ಸಹ ಕೇಳಿ ಬರ್ತಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಾಗಿದೆ.
'ಭೀಮ' ಪೋಷಕರನ್ನು ಎಚ್ಚರಿಸುವ ಸಿನಿಮಾ: ಕತೆ ಮಾಡುವಾಗ ನನ್ನ ಮಗ, ಮಗಳು ನೆನಪಾದರೆಂದ ದುನಿಯಾ ವಿಜಯ್!
'ಕಾಂತಾರ' ಕಥೆಯು ಕರಾವಳಿ ಹಿನ್ನೆಲೆಯಲ್ಲಿ ಸಾಗುವುದರಿಂದ, ಅಲ್ಲಿಯೇ ಶೂಟಿಂಗ್ ನಡೆಯಲಿದೆ. ಕಥೆ ಮತ್ತು ಚಿತ್ರಕಥೆ ಬರೆಯುವ ಸಲುವಾಗಿ ರಿಷಬ್ ಶೆಟ್ಟಿ ಮತ್ತು ಚಿತ್ರದ ಬರಹಗಾರರಾದ ಅನಿರುದ್ಧ್ ಮಹೇಶ್, ಶನೀಲ್ ಗುರು & ಟೀಮ್ ಈಗಾಗಲೇ ಮಂಗಳೂರಿಗೆ ತೆರಳಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಈ ಸಿನಿಮಾದ ಶೂಟಿಂಗ್ ಆರಂಭವಾಗಲಿದೆ ರಿಲೀಸ್ ಪ್ಲ್ಯಾನ್ ಏನು ಎಂಬ ಬಗ್ಗೆ ಸದ್ಯಕ್ಕಂತೂ ಮಾಹಿತಿ ಇಲ್ಲ. ಇನ್ನು ಕಾಂತಾರ 2 ಚಿತ್ರದ ಶೂಟಿಂಗ್ ಈ ವರ್ಷ ನವೆಂಬರ್ 2023 ರಲ್ಲಿ ನಡೆಯಲಿದೆ. ನವೆಂಬರ್ 1 ರಿಂದ ಮೊದಲ ಶೆಡ್ಯೂಲ್ ಆರಂಭವಾಗಲಿದೆ. ರಿಷಬ್ ಶೆಟ್ಟಿ ಮತ್ತು ತಂಡ ಈಗಾಗಲೇ ಈ ಬಗ್ಗೆ ಬರವಣಿಗೆಯನ್ನು ಪೂರ್ಣಗೊಳಿಸಿದೆ ಮತ್ತು ಪ್ರಸ್ತುತ ಪ್ರಿ-ಪ್ರೊಡಕ್ಷನ್ ಕೆಲಸಗಳಲ್ಲಿದೆ.