Asianet Suvarna News Asianet Suvarna News

'ಕಾಂತಾರ-2' ಹುಟ್ಟುಹಾಕಿದೆ 10 ಪ್ರಶ್ನೆಗಳು, ಪಂಜುರ್ಲಿ ಕಾಡು ಬೆಟ್ಟಕ್ಕೆ ಹೇಗೆ ಬಂತು? ವಿಸ್ಮಯ ಕತೆ ಇದು!

ಕಾಂತಾರ... ಪಂಜುರ್ಲಿ ಗುಳಿಗ ದೈವದ ಕಥೆ. ಉಳ್ಳವರು ಇಲ್ಲದವರ ನಡುವಿನ ಸಂಘರ್ಷದ ಕಥೆ. ಅರಣ್ಯ ಅಧಿಕಾರಿಗಳು ಬುಡಕಟ್ಟು ಜನರ ಜಿದ್ಧಾ ಜಿದ್ದಿನ ಕಥೆ. ಟೋಟಲಿ ಇಡೀ ದೇಶದ ಸಿನಿ ಪ್ರೇಕ್ಷಕರು ಮೆಚ್ಚಿದ ಅದ್ಭುತ ದಂತಕಥೆ. 

Rishab Shetty Starrer Kantara 2 Raises 10 Questions gvd
Author
First Published Sep 17, 2023, 9:03 PM IST

ಕಾಂತಾರ... ಪಂಜುರ್ಲಿ ಗುಳಿಗ ದೈವದ ಕಥೆ. ಉಳ್ಳವರು ಇಲ್ಲದವರ ನಡುವಿನ ಸಂಘರ್ಷದ ಕಥೆ. ಅರಣ್ಯ ಅಧಿಕಾರಿಗಳು ಬುಡಕಟ್ಟು ಜನರ ಜಿದ್ಧಾ ಜಿದ್ದಿನ ಕಥೆ. ಟೋಟಲಿ ಇಡೀ ದೇಶದ ಸಿನಿ ಪ್ರೇಕ್ಷಕರು ಮೆಚ್ಚಿದ ಅದ್ಭುತ ದಂತಕಥೆ. ಕನ್ನಡದವ್ರಷ್ಟೇ ಅಲ್ಲ, ಅಮಿತಾ ಬಚ್ಚನ್, ರಜನಿಕಾಂತ್, ಕಮಲ್ ಹಾಸನ್, ರಾಜಮೌಳಿ, ಪ್ರಭಾಸ್, ಧನುಷ್ ಅಬ್ಬಬ್ಬ ಕಾಂತಾರ ಮೆಚ್ಚಿದವ್ರು ಒಬ್ರಾ ಇಬ್ರಾ. ಈಗ ಕಾಂತಾರ ಪ್ರೀಕ್ವೆಲ್ ಸಿದ್ಧವಾಗ್ತಿದೆ. ಈ ಕಾಂತಾರ 2 ಹತ್ತು ಪ್ರಶ್ನೆಗಳನ್ನ ಹುಟ್ಟುಹಾಕಿದೆ. ಆ 10 ಪ್ರಶ್ನೆಗಳಿಗೆ ನಿಮ್ಮ ಸಿನಿಮಾ ಹಂಗಾಮದಲ್ಲಿ ಎಕ್ಸ್ಕ್ಲ್ಯೂಸೀವ್ ಉತ್ತರ ಹುಡುಕಿದೆ. 

'ಕಾಂತಾರ-2' ಎಷ್ಟು ವರ್ಷಗಳ ಹಿಂದಿನ ಕತೆ ಗೊತ್ತಾ?: ಪಾರ್ಟ್2 ಬರುತ್ತೆ ಅಂದಾಗ ಅದು ಮುಂದುವರಿದ ಭಾಗ ಅಂತನ್ನಿಸೋದು ಸತ್ಯ. ಆದ್ರೆ, ಇಲ್ಲಿರೋದು ಕಾಂತಾರದ ಹಿಂದಿನ ಕಥೆ. ಅಂದ್ರೆ ಕಾಡು ಬೆಟ್ಟ ಶಿವನ ತಂದೆ ಪಂಜುರ್ಲಿಯಾಗಿ ಮಾಯವಾಗೋಕು ಮೊದಲಿನ ಸ್ಟೋರಿಯನ್ನ. ಇದು ಸುಮಾರು ಕ್ರಿಸ್ತ ಶಕ 400ರ ಕಥೆ ಅಂತೆ. 

ಈರೇಗೌಡನ ಪ್ರೀತಿಯಲ್ಲಿ ಶಕೀಲಾ ಬಾನು: ಬಿಡುಗಡೆಗೆ ರೆಡಿ ಆಗಿದೆ 'ತೋತಾಪುರಿ-2'

ಪಂಜುರ್ಲಿ ಕಾಡು ಬೆಟ್ಟಕ್ಕೆ ಹೇಗೆ ಬಂತು ..? ವಿಸ್ಮಯ ಕತೆ ಇದು.!: ಕಾಂತಾರ ಸಕ್ಸಸ್ನ ಶಕ್ತಿ ಭಕ್ತಿ ಪಂಜುರ್ಲಿ ಮತ್ತು ಗುಳಿಗ ದೈವಗಳು. ದೈವ ಕೊಟ್ಟ ಮಾತಿಗೆ ತಪ್ಪಬಾರ್ದು ಅಂತ ಕಾಡು ಬೆಟ್ಟದ ಶಿವನ ತಂದೆ ಪಂಜುರ್ಲಿ ಅವತಾರದಲ್ಲೇ ಮಾಯವಾಗುತ್ತಾರೆ. ಈಗ ರೆಡಿಯಾಗ್ತಿರೋ ಕಾಂತಾರ ಪ್ರೀಕ್ವೆಲ್ ಕತೆಯಲ್ಲಿ ಈ ಪಂಜುರ್ಲಿ ಕಾಡುಬೆಟ್ಟಕ್ಕೆ ಹೇಗೆ ಬಂತು ಅನ್ನೋ ವಿಷ್ಮಯ ಸ್ಟೋರಿ ಇರುತ್ತಂತೆ. 

'ಕಾಂತಾರಾ-2' ಕತೆ ಶುರುವಾಗೋದೆ ಇಲ್ಲಿಂದ.?: ಕಾಂತಾರ ಚಾಪ್ಟರ್ 1 ಕಥೆ ಓಪನ್ ಆಗಿದ್ದು ರಾಜನಿಂದ. ಆದ್ರೆ ಕಾಂತಾರ2 ಕತೆ ಆರಂಭ ಆಗೋದು ಕಾಡುಬೆಟ್ಟ ಶಿವನ ತಂದೆ ಮಾಯವಾದ ಜಾಗದಿಂದಂತೆ. ಸೋ ಈ ‘ಕಾಂತಾರ2’ ಮ್ಯಾಜಿಕ್‌ ಮತ್ತಷ್ಟು ಇಂಟ್ರೆಸ್ಟಿಂಗ್ ಅನ್ನಿಸುತ್ತಿದೆ.

ವರಾಹ ರೂಪಂ ಬದಲಿಗೆ ಇರುತ್ತೆ ಈ ಹಾಡು..?: ಕಾಂತಾರ ಚಾಪ್ಟರ್1 ಸ್ಟೋರಿಯ ದೈವಾರಾಧನೆಗೆ ಶಕ್ತಿ ವರಾಹ ರೂಪಂ ಹಾಡು. ಈ ಹಾಡು ಇಂದು ಭಕ್ತಿಗೀತೆಯಾಗಿದೆ.  ಈ ಸಾಂಗ್ ಕಾಂತಾರ 2 ನಲ್ಲಿ ಇರೋದಿಲ್ಲವಂತೆ. ಬದಲಿಗೆ 4ನೇ ಶತಮಾನದಲ್ಲಿ ನಡೆಯುವ ಕಥೆಗೆ ಸೂಟ್ ಆಗೋ ಹಾಡೊಂದನ್ನ ಸಿದ್ಧಪಡಿಸ್ತಾರಂತೆ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್..

ದೈವ ನರ್ತನ ಇರುತ್ತಾ ಇರಲ್ವಾ..?: ಕಾಂತಾರ ಮ್ಯಾಜಿಕ್ ಮಾಡಿದ್ದೇ ದೈವ ನರ್ತನದಿಂದ. ಇನ್ನು 4ನೇ ಶತಮಾನದ ಕಥೆಯಲ್ಲಿ ದೈವ ನರ್ತನ ಹೇಗೆ ನಡೀತಿತ್ತು ಅನ್ನೋದನ್ನ ಅಧ್ಯಯನ ಮಾಡಿ ಮಾಡ್ತಿದ್ದಾರಂತೆ. ಆದರೆ ಒಂದಂತೂ ಸತ್ಯ. ದೈವ ನರ್ತನ ಇದ್ದೇ ಇರುತ್ತೆ.ರಿಷಬ್ ಕತ್ತಿ ವರಸೆ, ಕುದುರೆ ಸವಾರಿ ಕಲಿತದ್ದೇಕೆ.?: ಕಾಂತಾರ2ನಲ್ಲಿ ಶೆಟ್ರು ಸಿಕ್ಕಾಪಟ್ಟೆ ಸರ್ಪ್ರೈಸ್ಗಳನ್ನ ಇಟ್ಟಿದ್ದಾರಂತೆ. ಅದಕ್ಕಾಗಿ ರಿಷಬ್ ಕತ್ತಿ ವರಸೆ ಕುದುರೇ ಸವಾರಿ ಕಲಿತಿದ್ದಾರೆ. ಆಗಿನ ಕಾಲದಲ್ಲಿ ರಕ್ಷಣೆಗೆ ಕತ್ತಿಗಳನ್ನ ಇಟ್ಟುಕೊಳ್ತಿದ್ರು. ಓಡಾಟಕ್ಕೆ ಕುದುರೆಗಳನ್ನ ಬಳಸುತ್ತಿದ್ರು. ಈ ಸೀಕ್ವೆನ್ಸ್ಗಳು ಕಾಂತಾರ2ನಲ್ಲಿ ಹೆಚ್ಚಾಗಿರುತ್ತಂತೆ.

ಮಂಗಳೂರಲ್ಲೇ ಬೀಡು ಬಿಟ್ಟ ರಿಷಬ್ ಅಂಡ್ ಗ್ಯಾಂಗ್.!: ಕಾಂತಾರ ಚಾಪ್ಟರ್2 ಸಿನಿಮಾದ ಶೂಟಿಂಗ್ ಆಗೋದು ಕಾಡು ಬೆಟ್ಟದಲ್ಲೇ. ಅದೇ ಜಾಗದಲ್ಲೇ.. ಕಾಂತಾರದಲ್ಲಿ ಹಳೇ ಕಾಲದ ರಾಜರ ಮನೆಯನ್ನ ನೀವೆಲ್ಲಾ ನೋಡಿದ್ರಲ್ವೆ. ಮಂಗಳೂರು ಕೇರಳದಲ್ಲಿರೋ ಅಂತಹ ಜಾಗಗಳಲ್ಲೇ ಕಾಂತಾರ2 ಶೂಟಿಂಗ್ ಆಗುತ್ತಂತೆ. ಇದಕ್ಕಾಗಿ ರಿಷಬ್ ಗ್ಯಾಂಗ್ ಮಂಗಳೂರಿನಲ್ಲೇ ಇದ್ದಾರೆ.

ಕಾಂತಾರ 2 ವಿಲನ್ ಇವರೇನಾ..?: ಕಾಂತಾರದಲ್ಲಿ ವಿಲನ್ ಯಾರು ಅನ್ನೋ ಸೀಕ್ರೆಟ್ ರಿವೀಲ್ ಆಗೋದು ಕ್ಲೈಮ್ಯಾಕ್ಸ್ಗಿಂತ 5 ನಿಮಿಷ ಮೊದ್ಲು. ಅಲ್ಲಿ ಅಚ್ಯುತ್ ಕುಮಾರ್ರನ್ನ ದೈವ ಸಂಹಾರ ಮಾಡುತ್ತೆ. ಹೀಗಾಗಿ ಕಾಂತಾರ2ನಲ್ಲಿ ಅಚ್ಯುತ್ ಅಚ್ಚು ಇರೋದಿಲ್ಲ. ಹಾಗಾದರೆ ಕಾಂತಾರ 2 ವಿಲನ್ ಯಾರು ಅಂತ ಕೇಳಿದ್ರೆ ಅದೇ ದೊಡ್ಡ ಸಸ್ಪೆನ್ಸ್ ಅನ್ನುತ್ತಿದೆ ಕಾಂತಾರದ ಶೆಟ್ರು ಟೀಂ..

ಕಿಶೋರ್ ,ಸಪ್ತಮಿ ಗೌಡ ಇರಲ್ವಾ? ರಿಷಬ್ ಜೋಡಿ ಯಾರು.?: ಕಾಂತಾರದ ಕಾಡು ಬೆಟ್ಟದ ಶಿವನಿಗೆ ಹೀರೋಯನ್ ಸಪ್ತಮಿ ಗೌಡ. ಆದ್ರೆ ಕಾಂತಾರ 2ನಲ್ಲಿ ರಿಷಬ್ ಶೆಟ್ಟಿ ತನ್ನ ತಂದೆ ಪಾತ್ರ ಮಾಡುತ್ತಾರೆ. ಸೋ ಇಲ್ಲಿ ನಾಯಕಿ ಯಾರು ಅಂತ ಕೇಳಿದ್ರೆ ಅದು ಕೂಡ ಸೀಕ್ರೆಟ್ ಆಗಿ ಇಟ್ಟಿದ್ದೇವೆ ಅಂತಿದೆ ರಿಶಬ್ ಗ್ಯಾಂಗ್. ಅಷ್ಟೆ ಅಲ್ಲ ಕಾಂತಾರ2ನಲ್ಲಿ ಕಿಶೋರ್ ಕೂಡ ಇರಲ್ವಂತೆ. 

ಕನ್ನಡಕ್ಕೆ ಸಿಕ್ಕಳು ಸೂರ್ಯಕಾಂತಿಯಂತಾ ಚೆಲುವೆ: ಟಗರು ಪಲ್ಯದಲ್ಲಿ ಪ್ರೇಮ್ ಪುತ್ರಿ ಮಸ್ತ್ ಡಾನ್ಸ್!

ಕಾಂತಾರ2 ಬಜೆಟ್ 150 ಕೋಟಿ ಯಾಕೆ..?: ಕಾಂತಾರ ಪ್ರೀಕ್ವೆಲ್ಗೆ 150 ಕೋಟಿ ಬಂಡವಾಳ ಕೊಟ್ಟಿದೆ ನಿರ್ಮಾಣ ಸಂಸ್ಥೆ ಹೊಂಬಾಳೆ ಪ್ರೊಡಕ್ಷನ್. 400 ವರ್ಷದ ಹಿಂದಿನ ದೃಶ್ಯಗಳ ಸೃಷ್ಟಿಗಾಗಿ 400 ವರ್ಷಗಳ ಹಳೆಯ ಪ್ರಪಂಚವನ್ನೇ ಕಟ್ಟಲಿದ್ದಾರಂತೆ ರಿಷಬ್. ಅಷ್ಟೆ ಅಲ್ಲ ಈ 150 ಕೋಟಿಯಲ್ಲಿ ರಿಷಬ್ ಶೆಟ್ಟಿಯ ರೇಮಂಡ್ರೇಷನ್ ಕೂಡ ಸೇರಿಕೊಂಡಿದೆ. ಹೀಗಾಗಿ ಕಾಂತಾರದ ಒಟ್ಟು ಇನ್ವೆಸ್ಟ್ಮೆಂಟ್ 150 ಕೋಟಿ ಆಗಿದೆ. 

Follow Us:
Download App:
  • android
  • ios