ರಾಕಿಂಗ್ ಸ್ಟಾರ್ ಯಶ್ ಮನೆ ಮೇಲೆ ಐಟಿ ದಾಳಿಯಾಗಿ ಕೆಲ ದಿನಗಳ ನಂತರ ಆದಾಯ ತೆರಿಗೆ ಅಧಿಕಾರಿಗಳು ಯಶ್ ಆಡಿಟರ್ ಕಚೇರಿ ಮೇಲೆಯೂ ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ ಇದೆಲ್ಲದರ ನಡುವೆ ಯಶ್ ಪತ್ನಿ ನಟಿ ರಾಧಿಕಾ ಪಂಡಿತ್ ಗಂಡನಿಗೆ ಜನ್ಮದಿನದ ಶುಭಾಶಯ ಕೋರಿ ಹಾಕಿದ್ದ ಪೋಸ್ಟ್ ಡಿಲೀಟ್ ಮಾಡಿದ್ದಾರೆ.
’Happy birthday to my perfect match’ ಎಂದು ರಾಧಿಕಾ ಯಶ್ ಕುರಿತಾಗಿ ಫೇಸ್‌ಬುಕ್ ನಲ್ಲಿ ಬರೆದುಕೊಂಡಿದ್ದರು. ಆದರೆ ಈಗ್ ಆ ಪೋಸ್ಟ್ ಡಿಲೀಟ್ ಆಗಿದೆ. ಕನ್ನಡ ಚಿತ್ರರಂಗದ ಹಿರಿಯ ಚೇತನ
ಅಂಬರೀಶ್ ನಿಧನದ ಕಾರಣಕ್ಕೆ ಯಶ್ ಈ ಸಾರಿ ಜನ್ಮದಿನ ಸಂಭ್ರಮಾಚರಣೆ ಮಾಡಿಕೊಂಡಿರಲಿಲ್ಲ. ಅಭಿಮಾನಿಯೊಬ್ಬರು ಸಹ ಯಶ್ ನಿವಾಸದ ಮುಂದೆ ಆತ್ಮಹತ್ಯೆಗೆ ಯತ್ನಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಅಭಿಮಾನಿ ಮೃತಪಟ್ಟಿದ್ದರು.
ಐಟಿ ಅಧಿಕಾರಗಳ ಶೋಧ ಅಂತ್ಯ: ಈ ಬಗ್ಗೆ ಯಶ್ ಹೇಳಿದ್ದೇನು?
ಯಾವ ಕಾರಣಕ್ಕೆ ರಾಧಿಕಾ ಪಂಡಿತ್ ಪೋಸ್ಟ್ ಡಿಲೀಟ್ ಮಾಡಿದ್ದಾರೆ ಗೊತ್ತಿಲ್ಲ. ಆದರೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಡಿಲೀಟ್ ಮಾಡಿದ್ದರ ಕುರಿತು ಚರ್ಚೆ ಆರಂಭವಾಗಿದೆ. ಅಭಿಮಾನಿಯ ಸಾವಿನ ಕಾರಣಕ್ಕೆ ಈ ಪೋಸ್ಟ್ ಡಿಲೀಟ್ ಮಾಡಿದ್ದಾರೆ ಎಂಬ ಮಾತು ವ್ಯಕ್ತವಾಗಿದೆ.
ಚಿತ್ರನಟ ಯಶ್ ಅವರು ಈ ಬಾರಿ ತಮ್ಮ ಹುಟ್ಟುಹಬ್ಬ ಆಚರಣೆಗೆ ನಿರಾಕರಿಸಿದ್ದರಿಂದ ಬೇಸರಗೊಂಡು ಅಭಿಮಾನಿ ರವಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅಭಿಮಾನಿಯ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಯಶ್ ತೆರಳಿದ್ದ ವೇಳೆಯೂ ರವಿ ಯಶ್‌ಗೆ ಶುಭಕೋರಿದ್ದರು. ಯಾವುದೆ ನಟರ ಅಭಿಮಾನಿಯಾಗಿದ್ದರೂ ಈ ರೀತಿ ನಡೆದುಕೊಳ್ಳುವುದು ಸರಿ ಅಲ್ಲ ಎಂದು ಯಶ್ ವಿನಂತಿ ಮಾಡಿಕೊಂಡಿದ್ದರು.
